ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ ಸುನಾಮಿ – ಆರೇ ದಿನಕ್ಕೆ 500 ಕೋಟಿ ರೂ. ಕಲೆಕ್ಷನ್!

ಬಾಕ್ಸ್‌ ಆಫೀಸ್‌ನಲ್ಲಿ ಸಲಾರ್‌ ಸುನಾಮಿ – ಆರೇ ದಿನಕ್ಕೆ 500 ಕೋಟಿ ರೂ. ಕಲೆಕ್ಷನ್!

ಬಹುನೀರಿಕ್ಷಿತ ಸಲಾರ್‌ ಸಿನಿಮಾ ವಿಶ್ವದಾದ್ಯಂತ ಕಳೆದ ಶುಕ್ರವಾರ ರಿಲೀಸ್‌ ಆಗಿದ್ದು, ಥಿಯೇಟರ್‌ಗಳಲ್ಲಿ ಸಲಾರ್‌ ಅಬ್ಬರ ಜೋರಾಗಿದೆ. ಬಾಕ್ಸ್‌ಆಫೀಸ್‌ನಲ್ಲೂ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಸಿನಿಮಾ ರಿಲೀಸ್‌ ಆದ ಆರೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಸಂಗ್ರವಾಗುತ್ತಿದೆ.

ಹೌದು, ವಿಶ್ವದಾದ್ಯಂತ ಸಲಾರ್‌ ಸಿನಿಮಾದ ಅಬ್ಬರ ಜೋರಾಗಿದೆ. ಭಾರತ ಹಾಗೂ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾದ ಆರೇ ದಿನಕ್ಕೆ ವಿಶ್ವದಾದ್ಯಂತ 500 ಕೋಟಿಗೂ ಅಧಿಕ ಹಣವನ್ನು ಗಳಿಸಿ ದಾಖಲೆ ಸೃಷ್ಟಿಸಿದೆ.

ಇದನ್ನೂ ಓದಿ:‌ 3 ವರ್ಷಗಳ ನಂತರ ಅಪ್ಪ ಅಮ್ಮನ ಸಮಾಗಮ – ಹೆತ್ತವರ ನೋಡಿ ಗಳಗಳನೆ ಕಣ್ಣೀರು ಸುರಿಸಿದ ಡ್ರೋನ್ ಪ್ರತಾಪ್

ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವ ಚಿತ್ರವು ಮೊದಲ ದಿನವೇ 178.7 ಕೋಟಿ ರೂ ಸಂಪಾದಿಸಿದರೆ, ಎರಡನೇ ದಿನಕ್ಕೆ 295.7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರನೇ ದಿನಕ್ಕೆ 350 ಕೋಟಿಗೂ ಅಧಿಕ ಗಳಿಕೆ ಆಗಿತ್ತು. ನಾಲ್ಕು, ಐದು ಮತ್ತು ಆರನೇ ದಿನದ ಒಟ್ಟು ಗಳಿಕೆ 500 ಕೋಟಿಗೂ ಅಧಿಕ ಎಂದು ಅಂದಾಜು ಮಾಡಲಾಗಿದೆ. ಸಲಾರ್ ಎನ್ನುವ ಅಧಿಕೃತ ಸೋಷಿಯಲ್ ಮೀಡಿಯಾ ಪುಟದಲ್ಲಿ ಪೋಸ್ಟರ್ ಕೂಡ ಹಾಕಲಾಗಿದೆ.

ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Shwetha M