ಮುಂಜಾನೆ ರಿಲೀಸ್ ಆದ ‘ಸಲಾರ್’ ಸಿನಿಮಾ ಟೀಸರ್ – ‘ಕೆಜಿಎಫ್ 2’ ಚಿತ್ರಕ್ಕೆ ಇದೆಯಂತೆ ಲಿಂಕ್..!

ಮುಂಜಾನೆ ರಿಲೀಸ್ ಆದ ‘ಸಲಾರ್’ ಸಿನಿಮಾ ಟೀಸರ್ – ‘ಕೆಜಿಎಫ್ 2’ ಚಿತ್ರಕ್ಕೆ ಇದೆಯಂತೆ ಲಿಂಕ್..!

ಮುಂಜಾನೆ 5 ಗಂಟೆ 12 ನಿಮಿಷಕ್ಕೆ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಾಮಾನ್ಯವಾಗಿ ದುಬಾರಿ ಬಜೆಟ್ ಸಿನಿಮಾಗಳ ಟೀಸರ್ ಸಂಜೆ ವೇಳೆ ರಿಲೀಸ್ ಆಗುತ್ತದೆ. ಆದರೆ, ಸಲಾರ್ ಸಿನಿಮಾ ಟೀಸರ್ ಮುಂಜಾನೆ ಯಾಕೆ ರಿಲೀಸ್ ಆಗಿದ್ದು ಅನ್ನೋ ಕುತೂಹಲವೂ ಇತ್ತು.  ‘ಕೆಜಿಎಫ್ 2’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ರಾಕಿ ಸಮುದ್ರಕ್ಕೆ ಬೀಳುತ್ತಾನೆ. ಆಗ ಸಮಯ ಮುಂಜಾನೆ 5 ಗಂಟೆ. ಈ ಕಾರಣದಿಂದಲೇ ‘ಸಲಾರ್’ ಟೀಸರ್ ಆ ಸಮಯಕ್ಕೆ ರಿಲೀಸ್ ಆಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ನಟಿ ಆಲಿಯಾ ಭಟ್ ‘ಬ್ಲೌಸ್’ ಹಾಕಿಲ್ವಾ ? –ಈ ‘ಅಶ್ಲೀಲ’ ಫೋಟೋದ ಅಸಲಿ ವಿಚಾರ ಏನು ಗೊತ್ತಾ?

‘ಕೆಜಿಎಫ್ 2’ ಚಿತ್ರಕ್ಕೂ ‘ಸಲಾರ್’ ಚಿತ್ರಕ್ಕೂ ಲಿಂಕ್ ಇದೆ ಅನ್ನೋದು ಕೂಡಾ ಮೂರು ವರ್ಷಗಳಿಂದ ಕೇಳಿಬರುತ್ತಿರುವ ಚರ್ಚೆ. ವಿಶೇಷ ಎಂದರೆ ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ ಚಿತ್ರಕ್ಕೂ ಟೀಸರ್‌ನಲ್ಲಿ ಲಿಂಕ್ ನೀಡಲಾಗಿದೆ. ಬಾಲಿವುಡ್ ಖ್ಯಾತ ನಟ ಟಿನು ಆನಂದ್ ನಿರೂಪಣೆಯಲ್ಲಿ ‘ಸಲಾರ್’ ಟೀಸರ್ ಮೂಡಿಬಂದಿದೆ. 1.46 ನಿಮಿಷಗಳ ಈ ಟೀಸರ್‌ನಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಹಾಗೂ ಬಾಲಿವುಡ್‌ನ ಹಿರಿಯ ನಟ ಟೀನು ಆನಂದ್ ಅವರನ್ನು ಮಾತ್ರ ಹೈಲೈಟ್ ಮಾಡಲಾಗಿದೆ. ದೊಡ್ಡ ರೌಡಿಗಳ ಪಡೆ ಮಧ್ಯೆ ಟಿನು ಆನಂದ್ ಅವರನ್ನು ತೋರಿಸುವುದರ ಮೂಲಕ ಟೀಸರ್ ಶುರುವಾಗುತ್ತದೆ. ‘ಹೇ.. ಸಿಂಪಲ್ ಇಂಗ್ಲಿಷ್.. ಯಾವುದೇ ಗೊಂದಲ ಬೇಡ.. ಸಿಂಹ, ಚೀತಾ, ಹುಲಿ, ಆನೆ ತುಂಬ ಅಪಾಯಕಾರಿ.. ಆದರೆ ಜುರಾಸಿಕ್ ಪಾರ್ಕ್‌ನಲ್ಲಿ ಅಲ್ಲ.. ಯಾಕೆಂದರೆ, ಆ ಪಾರ್ಕ್‌ನಲ್ಲಿ..’ ಎಂದು ಟಿನು ಆನಂದ್ ಹೇಳುತ್ತಿದ್ದಂತೆಯೇ ಪ್ರಭಾಸ್ ಅವರನ್ನು ತೋರಿಸಲಾಗಿದೆ. ಭರ್ಜರಿ ಆ್ಯಕ್ಷನ್ ಮೂಲಕ ಖಳರನ್ನು ಪ್ರಭಾಸ್ ಸದೆಬಡಿಯುತ್ತಿರುತ್ತಾರೆ. ಕೊನೆಗೆ ಪಥ್ವಿರಾಜ್ ಸುಕುಮಾರನ್ ಅವರನ್ನು ಕೂಡ ತೋರಿಸಲಾಗಿದೆ.

ಆದರೆ, ಪ್ರಭಾಸ್ ರಗಡ್ ಲುಕ್ ನೋಡಲು ಕಾಯುತ್ತಿದ್ದ ಅಭಿಮಾನಿಗಳು ಸಿಕ್ಕಾಪಟ್ಟೆ ನಿರಾಶರಾಗಿದ್ದಾರೆ. ಟೀಸರ್‌ನಲ್ಲಿ ಪ್ರಭಾಸ್ ಮುಖ ತೋರಿಸಿಲ್ಲ ಎಂಬ ನಿರಾಶೆ ಪ್ರಭಾಸ್ ಅಭಿಮಾನಿಗಳಿಗೆ ಬೇಸರವಾಗಿದೆ. ಹೀಗಾಗಿ, Disappointed ಹ್ಯಾಶ್ಟ್ಯಾಗ್ ಹಾಕಿ ಅಭಿಮಾನಿಗಳು  ಟ್ವೀಟ್ ಮಾಡುತ್ತಿದ್ದು, ಸದ್ಯ ಇದೇ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ಸೆಪ್ಟೆಂಬರ್ 28ಕ್ಕೆ ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ತಮಿಳು, ಮಲಯಾಳಂ  ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

suddiyaana