ಡಿಸೆಂಬರ್ 22ರಂದು ಸಲಾರ್ ಸಿನಿಮಾ ರಿಲೀಸ್ – ಶಾರುಖ್ ಖಾನ್ ಚಿತ್ರದ ಜೊತೆಗೆ ಪ್ರಭಾಸ್ ಸಿನಿಮಾ ಫೈಟ್..!

ಡಿಸೆಂಬರ್ 22ರಂದು ಸಲಾರ್ ಸಿನಿಮಾ ರಿಲೀಸ್ – ಶಾರುಖ್ ಖಾನ್ ಚಿತ್ರದ ಜೊತೆಗೆ ಪ್ರಭಾಸ್ ಸಿನಿಮಾ ಫೈಟ್..!

ಪ್ರಭಾಸ್ ಅಭಿಮಾನಿಗಳು ಇಷ್ಟು ದಿನ ಕಾಯುತ್ತಾ ಇರುವುದು ಸಲಾರ್ ಸಿನಿಮಾಕ್ಕಾಗಿ. ಇದೀಗ ಹೊಂಬಾಳೆ ಫಿಲ್ಮ್ಸ್ ಪ್ರಭಾಸ್ ಅಭಿಮಾನಿಗಳಿಗಾಗಿ ‘ಕಮಿಂಗ್ ಬ್ಲಡಿ ಸೂನ್’ ಎಂಬ ಖಡಕ್ ಕ್ಯಾಪ್ಷನ್ ಕೊಟ್ಟು ಸಲಾರ್ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದೆ. ಸಲಾರ್ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ಡಿಸೆಂಬರ್ 22ರಂದು ಸಲಾರ್ ರಿಲೀಸ್ ಆಗಲಿದೆ.

ಇದನ್ನೂ ಓದಿ: 800 ಸಿನಿಮಾದಲ್ಲಿ ನಟಿಸದಂತೆ ವಿಜಯ್ ಸೇತುಪತಿಗೆ ರಾಜಕಾರಣಿಯ ಒತ್ತಡ – ಕಾರಣ ಬಹಿರಂಗ ಪಡಿಸಿದ ಮುತ್ತಯ್ಯ ಮುರಳೀಧರನ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಲಾರ್ ಸಿನಿಮಾ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಲಾರ್ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಹೊಸ ಡೇಟ್ ಬಗ್ಗೆ ತಿಳಿಯಲು ಕಾದಿದ್ದ ಪ್ರಭಾಸ್ ಅಭಿಮಾನಿಗಳಿಗೆ ಕಡೆಗೂ ಗುಡ್ ನ್ಯೂಸ್ ಸಿಕ್ಕಿದೆ. ಡಿಸೆಂಬರ್ 22ರಂದು ‘ಸಲಾರ್’ ಬಿಡುಗಡೆ ಆಗಲಿದೆ. ‘ಕಮಿಂಗ್ ಬ್ಲಡಿ ಸೂನ್’ ಎಂಬ ಖಡಕ್ ಕ್ಯಾಪ್ಷನ್ ಮತ್ತು ಪೋಸ್ಟರ್ ಮೂಲಕ ರಿಲೀಸ್ ಡೇಟ್ ತಿಳಿಸಲಾಗಿದೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ಎಂಬ ಕಾರಣಕ್ಕೆ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

ಡಿಸೆಂಬರ್ 22 ರಂದು ಬಾಲಿವುಡ್ ಕಿಂಗ್‌ಖಾನ್ ಶಾರುಖ್ ಖಾನ್ ಸಿನಿಮಾ ಕೂಡಾ ರಿಲೀಸ್ ಆಗಲಿದೆ. ಈಗಾಗಲೇ ಒಂದರ ಹಿಂದೆ ಒಂದು ಸಿನಿಮಾದ ಸಕ್ಸಸ್‌ ಖುಷಿಯಲ್ಲಿದ್ದಾರೆ ಶಾರುಖ್ ಖಾನ್. ಪಠಾಣ್ ಮತ್ತು ಜವಾನ್ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿವೆ. ಈ ಗೆಲುವಿನ ನಂತರ ಶಾರುಖ್ ಖಾನ್ ಡಂಕಿ (Dunki) ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ. ಈ ಹೊತ್ತಲ್ಲಿ ಸಲಾರ್ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇದು ಪ್ರಭಾಸ್ ಅಭಿಮಾನಿಗಳ ಚಿಂತೆಗೂ ಕಾರಣವಾಗಿದೆ.

ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಗೆ  ಶ್ರುತಿ ಹಾಸನ್ ಜೊತೆಯಾಗಿದ್ದಾರೆ. ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್, ಟಿನು ದೇಸಾಯಿ, ಈಶ್ವರಿ ರಾವ್ ಮುಂತಾದವರು ‘ಸಲಾರ್’ ಸಿನಿಮಾದಲ್ಲಿ ನಟಿಸಿದ್ದಾರೆ.  ‘ಕೆಜಿಎಫ್’ ರೀತಿಯೇ ಎರಡು ಪಾರ್ಟ್ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಮೊದಲ ಪಾರ್ಟ್ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ.

Sulekha