ಕೆಜಿಎಫ್‌ಗಿಂತ ಐದು ಪಟ್ಟು ದೊಡ್ಡದು ಸಲಾರ್! – ಏನಿದು ಸಿನಿಮಾ ಹೊಸ ಸಮಾಚಾರ!
ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನಿಮಾ ಸಲಾರ್. ಮೂರು ವರ್ಷದಿಂದ ಕಾಯುತ್ತಿದ್ದ ಗಳಿಗೆ ಹತ್ತಿರವಾಗಿದೆ. ಕಾರಣ ಸಲಾರ್ ಅಬ್ಬರಿಸಲು ಸಜ್ಜಾಗಿದೆ. ‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಇದೀಗ ಸಲಾರ್ ರಿಲೀಸ್‌ಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ಹಲವು ರಹಸ್ಯ ಬಿಚ್ಚಿಟ್ಟಿದ್ದಾರೆ ಕ್ಯಾಮೆರಾಮನ್ ಭುವನ್ ಗೌಡ. ಯಾರ್ಯಾರೊ ಏನೇನೊ ಅಂದುಕೊಂಡಿದ್ದು ಸುಳ್ಳು. ಇದು ಸತ್ಯ ಎಂದು ಗುಡುಗಿದ್ದಾರೆ. ಏನಿದು ಸಲಾರ್ ಅಪರೂಪದ ಸಮಾಚಾರ ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ತಪ್ಪಾಗಿ ತಿಳಿದು ಮೂವರು ಒತ್ತೆಯಾಳುಗಳನ್ನೇ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್ ಸೇನೆ!
ಸಲಾರ್ ಸಿನಿಮಾ ರಿಲೀಸ್‌ಗೆ ಬರೀ ಪ್ರಭಾಸ್ ಫ್ಯಾನ್ಸ್ ಮಾತ್ರ ಅಲ್ಲ, ಇಡೀ ವಿಶ್ವವೇ ಕಾಯುತ್ತಿದೆ. ಒಂದು ಕಡೆ ಪ್ರಶಾಂತ್ ನೀಲ್ ಏನು ಮಾಡಲಿದ್ದಾರೆ ಎನ್ನುವ ಕುತೂಹಲ ಇನ್ನೊಂದು ಕಡೆ ಪ್ರಭಾಸ್ ಕಾಂಬಿನೇಶನ್ ಹೆಂಗೆ ಕಿಕ್ ಏರಿಸುತ್ತದೆ ಎನ್ನುವ ಹಂಬಲ. ಎರಡೂ ಸೇರಿ ಸಲಾರ್‌ಗೆ ಭೂಮಿ ತೂಕದ ಬಲ ತಂದುಕೊಟ್ಟಿದೆ. ಈ ಹೊತ್ತಲ್ಲಿ ಕ್ಯಾಮೆರಾಮನ್ ಭುವನ್ ಗೌಡ ಹಲವು ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿದ ಪ್ರಭಾಸ್ ಅಭಿಮಾನಿಗಳು ರಣಕೇಕೆ ಹಾಕಿದ್ದಾರೆ.
ಹೌದು, ಸಲಾರ್ ಸಿನಿಮಾ ಕೆಜಿಎಫ್ ಚಿತ್ರಕ್ಕಿಂತ ಐದು ಪಟ್ಟು ದೊಡ್ಡದು ಅಂತಾ ಹೇಳಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇನ್ನೊಂದು ಫಿಲ್ಮ್ ಸಿಟಿ ನಿರ್ಮಿಸಿದಂತಾಗಿತ್ತು ನಾವು ಹಾಕಿದ ಸೆಟ್ಟುಗಳು. ನೂರು ಎಕರೆ ಪ್ರದೇಶದಲ್ಲಿ ಸೆಟ್ ನಿರ್ಮಿಸಲಾಗಿತ್ತು. ಇಂಡಿಯಾದ ಇತಿಹಾಸದಲ್ಲಿ ಇಷ್ಟು ದೊಡ್ಡ ಸೆಟ್ ನಿರ್ಮಿಸಿದ್ದು ಇಲ್ಲವೇ ಇಲ್ಲ. ಕೆಜಿಎಫ್ ಶೂಟ್ ಮಾಡಿದ್ದ ಸ್ಥಳದಲ್ಲಿ ಸಲಾರ್ ಶೂಟಿಂಗ್ ಮಾಡಿಲ್ಲ. ಅದು ಸುಳ್ಳು. ಶಿವಕುಮಾರ್ ಕಲಾ ನಿರ್ದೇಶನದಲ್ಲಿ ಹಿಂದೆಂದೂ ನೋಡದ ಕಾಣದ ಲೋಕ ತೋರಿಸಿದ್ದೇವೆ. ಕೋಟಿ ಕೋಟಿ ಸುರಿಯಲಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಲಾರ್ ಅದ್ಭುತ ಅಪರೂಪದ ಜಗತ್ತು ತೋರಿಸಲಿದೆ.
ಇಲ್ಲಿವರೆಗೆ ಇದನ್ನು ಯಾರೂ ಹೇಳಿರಲಿಲ್ಲ. ಈಗ ‘ಸಲಾರ್’ಅಸಲಿ ಸತ್ಯ ಹೊರಬಿದ್ದಿದೆ. ಸುಮಾರು 200 ಕೋಟಿ ವೆಚ್ಚದಲ್ಲಿ ಹೊಂಬಾಳೆ ಸಂಸ್ಥೆ ಇದನ್ನು ನಿರ್ಮಿಸಿದೆ. ವಿಜಯ್ ಕಿರಗಂದೂರ್ ಮತ್ತೊಮ್ಮೆ ಕನ್ನಡ ಬಾವುಟವನ್ನು ದೇಶ ವಿದೇಶದಲ್ಲಿ ಹಾರಾಡಿಸಲು ಸಜ್ಜಾಗಿದ್ದಾರೆ. ಪ್ರಶಾಂತ್ ನೀಲ್ ಕೂಡ ಜನರ ಉತ್ತರಕ್ಕೆ ಕಾಯುತ್ತಿದ್ದಾರೆ. ಮೂರು ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್ ಕೈ ಜೋಡಿಸಿ ಕುಳಿತಿದ್ದಾರೆ.