ಫಸ್ಟ್ ಹಾಫ್ ದೋಸ್ತಿ.. ಸೆಕೆಂಡ್ ಹಾಫ್ ದುಷ್ಮನ್? – ‘ಸಲಾರ್’ 2ನೇ ಟ್ರೇಲರ್ ನಲ್ಲಿ ಟ್ವಿಸ್ಟ್!
ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ 2ನೇ ಟ್ರೈಲರ್ ರಿಲೀಸ್ ಆಗಿದೆ. ಮೊದಲನೆ ಟ್ರೈಲರ್ಗೆ ಹೋಲಿಸಿದ್ರೆ 2ನೇ ಟ್ರೈಲರ್ ಹೆಚ್ಚು ಇಂಪ್ರೆಸಿವ್ ಆಗಿದೆ ಅಂತಾನೆ ಹೇಳಬಹುದು. ಹೀಗಾಗಿ ಸೆಕೆಂಡ್ ಟ್ರೈಲರ್ನ್ನ ರಿವ್ಯೂ ಹಾಗೂ ಸಲಾರ್ ಸಿನಿಮಾ ಬಗ್ಗೆ ಮಾಹಿತಿ ಇಲ್ಲಿದೆ.
ಸಲಾರ್ ಒಂದು ಕಂಪ್ಲೀಟ್ ಆ್ಯಕ್ಷನ್ ಮೂವಿ ಅನ್ನೋದು ಟ್ರೈಲರ್ ನೋಡಿದ್ರೇನೆ ಗೊತ್ತಾಗುತ್ತೆ. ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ಮಲಯಾಳಂ ನಟ ಪೃಥ್ವಿರಾಜ್ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಸಿನಿಮಾಗೆ ಇಬ್ಬರು ಹೀರೋಗಳು ಅಂತಾನೆ ಹೇಳಬಹುದು. ಪ್ರಭಾಸ್ ಮತ್ತು ಪೃಥ್ವಿರಾಜ್ ಇಬ್ಬರೂ ಜಿಗಿರಿ ದೋಸ್ತಿಗಳಾಗಿರ್ತಾರೆ. ಸೆಕೆಂಡ್ ಟ್ರೈಲರ್ನುದ್ದಕ್ಕೂ ಪ್ರಭಾಸ್ ಮತ್ತು ಫೃಥ್ವಿರಾಜ್ ಡೈಲಾಗ್ ಹೊಡ್ಕೊಂಡು ಫೈಟ್ ಮಾಡೋ ಸೀನ್ಗಳೇ ಇವೆ. ಕೆಜಿಎಫ್ ಮಾದರಿಯಲ್ಲಿ ಸಲಾರ್ಗೆ ಮಾಡಿರೋ ಸೆಟ್ ಕೂಡ ಅದ್ಧೂರಿಯಾಗಿಯೇ ಇದೆ. ಈ ಮೂವಿಯನ್ನ ಕೂಡ ಯಾವುದೋ ಮೈನಿಂಗ್ ಏರಿಯಾದಲ್ಲಿ ಶೂಟ ಮಾಡಿರುವಂತೆ ಕಾಣ್ತಿದೆ. ಮೈನಿಂಗ್ ಲಾರಿಗಳ ಅಬ್ಬರದ ಮಧ್ಯೆ ಸಾಮ್ರಾಜ್ಯಕ್ಕಾಗಿ, ಅಧಿಕಾರಕ್ಕಾಗಿ ಹೋರಾಟ ನಡೆಯುತ್ತೆ. ಕೆಜಿಎಫ್ನಲ್ಲಿ ಕೋಲಾರ್ ಗೋಲ್ಡ್ ಫೀಲ್ಡ್ನ ಒಂದು ಸಾಮ್ರಾಜ್ಯ ನಿರ್ಮಾಣ ಮಾಡಲಾಗಿತ್ತು. ಅದೇ ರೀತಿ ಇಲ್ಲೂ ಖಾನ್ಸಾರ್ ಅನ್ನೋ ಹೆಸರಲ್ಲಿ ಒಂದು ಕಿಂಗ್ಡಮ್ ಇರುತ್ತೆ. ಇಡೀ ಸಿನಿಮಾ ನಡೆಯೋದೆ ಈ ಖಾನ್ಸಾರ್ನಲ್ಲಿ..ಹೋರಾಟ ನಡೆಯೋದೆ ಈ ಕಿಂಗ್ಡಮ್ಗಾಗಿ.
ಇದನ್ನೂ ಓದಿ: ಕೆಜಿಎಫ್‌ಗಿಂತ ಐದು ಪಟ್ಟು ದೊಡ್ಡದು ಸಲಾರ್! – ಏನಿದು ಸಿನಿಮಾ ಹೊಸ ಸಮಾಚಾರ!
ಕೆಜಿಎಫ್ ಸಿನಿಮಾದ ಮೇನ್ ಅಟ್ರಾಕ್ಷನ್ ಆಗಿದ್ದಿದ್ದೇ ಗನ್. ಯಶ್ ಗನ್ ಮೂಲಕ ಪೊಲೀಸ್ ಸ್ಟೇಷನ್ನನ್ನ ಯಾವ ರೀತಿ ಧೂಳಿಪಟ ಮಾಡಿದ್ರು ಅನ್ನೋದನ್ನ ನೀವು ಸ್ಕ್ರೀನ್ನಲ್ಲಿ ನೋಡಿರ್ತೀರಾ. ಜೊತೆಗೆ ಮೈನಿಂಗ್ ಏರಿಯಾದಲ್ಲಿ ಸಾಲಾಗಿ ನಿಂತು ಯಶ್ ಫೈರಿಂಗ್ ಮಾಡಿಸ್ತಾರೆ. ಅಂಥದ್ದೇ ಸೀಕ್ವೆನ್ಸ್ ಸಲಾರ್ ಸಿನಿಮಾದಲ್ಲೂ ಇದೆ. ಇಲ್ಲೂ ಒಂದಷ್ಟು ಚಿತ್ರ ವಿಚಿತ್ರ ಗನ್ಗಳು ಬರುತ್ತೆ. ಈ ಸಿನಿಮಾದಲ್ಲಿ ಫೈರಿಂಗ್ ಸದ್ದು ಜೋರಾಗಿಯೇ ಇದೆ ಬಿಡಿ. ಇನ್ನು ಇದು ಪ್ರಭಾಸ್ ಮತ್ತು ಪೃಥ್ವಿರಾಜ್ ನಡುವಿನ ಸ್ನೇಹದ ಸೆಂಟಿಮೆಂಟ್ ಮೇಲೆ ಇರೋ ಸಿನಿಮಾ. ಚಿತ್ರದ ಮೇನ್ ಅಟ್ರಾಕ್ಷನ್ ಆಗಿರೋದೆ ಪ್ರಭಾಸ್ ಮತ್ತು ಪೃಥ್ವಿರಾಜ್. ಪ್ರಭಾಸ್ರದ್ದು ಇಲ್ಲಿ ಮೆಕ್ಯಾನಿಕ್ನ ರೋಲ್. ಒಬ್ಬ ವಾಯ್ಲೆಂಟ್ ಮೆಕಾನಿಕ್. ತನ್ನ ದೋಸ್ತಿಯಾಗಿರೋ ಪೃಥ್ವಿರಾಜ್ರ ಕಿಂಗ್ಡಮ್ನ್ನ ಉಳಿಸೋಕೆ ಅಂತಾ ದುಷ್ಮನ್ಗಳನ್ನ ಪ್ರಭಾಸ್ ಎದುರು ಹಾಕಿಕೊಳ್ತಾರೆ. ಇಲ್ಲಿ ಸಿನಿಮಾಗೆ ಸಲಾರ್ ಅನ್ನೋ ಹೆಸರು ಬಂದಿರೋದೆ ಪ್ರಭಾಸ್ ರೋಲ್ಗೆ. ಈ ಹಿಂದೆ ಪ್ರತಿಯೊಬ್ಬ ರಾಜನಿಗೂ ಸಲಾರ್ ಅಂತಾ ಇದ್ದ. ಸಲಾರ್ ಅಂದ್ರೆ ಸೇನಾ ಕಮಾಂಡರ್ ಇದ್ದಂತೆ. ರಾಜನಿಗೆ ಏನು ಬೇಕೋ ಅದನ್ನ ಮಾಡೋದು ಸಲಾರ್ನ ಕೆಲಸ. ಹೀಗಾಗಿ ಇಲ್ಲಿ ಪೃಥ್ವಿರಾಜ್ ಪಾಲಿಗೆ ಪ್ರಭಾಸ್ ಕಮಾಂಡರ್ ಇದ್ದಂತೆ. ಆದ್ರೆ 2ನೇ ಟ್ರೈಲರ್ನ ಎಂಡ್ನಲ್ಲಿ ಇಡೀ ಕಹಾನಿಗೆ ಟ್ವಿಸ್ಟ್ ಸಿಗುತ್ತೆ. ಜಿಗಿರಿ ದೋಸ್ತಿಗಳಾಗಿದ್ದವರು ಕಟ್ಟರ್ ದುಷ್ಮನ್ಗಳಾಗಿಬಿಡ್ತಾರೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಬದ್ಧ ವೈರಿಗಳಾಗೋದನ್ನ ಮೋಸ್ಟ್ಲಿ ಸೆಕೆಂಡ್ ಪಾರ್ಟ್ನಲ್ಲಿ ತೋರಿಸ್ತಾರೋ ಏನೊ. ಹಾಗೆಯೇ ನಾಯಕಿ ನಟಿಯಾಗಿ ಶೃತಿ ಹಾಸನ್ ಕಾಣಿಸಿಕೊಳ್ತಾರೆ. ಫಸ್ಟ್ ಟ್ರೈಲರ್ನಲ್ಲಿ ಒಂದು ಬಾರಿಯಷ್ಟೇ ಕಾಣಿಸಿಕೊಳ್ಳೋ ಶೃತಿ ಹಾಸನ್ ಸೆಕೆಂಡ್ ಟ್ರೈಲರ್ನಲ್ಲೂ ಅಷ್ಟೇ ಒಂದ್ಸಾರಿಯಷ್ಟೇ ಬಂದು ಹೋಗ್ತಾರೆ. ಆದ್ರೆ ಶೃತಿಯ ರೋಲ್ ನೋಡಿದ್ರೆ, ಆಕೆಗೆ ಈ ಸಲಾರ್ನ ಸ್ಟೋರಿಯನ್ನ ಯಾರೋ ಹೇಳ್ತಾ ಇರುವಂತೆ ಕಾಣ್ತಿದೆ. ಈಗ ಕೆಜಿಎಫ್ ಸಿನಿಮಾದ ಕಥೆಯನ್ನ ಒಬ್ಬ ಜರ್ನಲಿಸ್ಟ್ ಮತ್ತು ಪತ್ರಕರ್ತನ ಮೂಲಕ ಯಾವ ರೀತಿ ಹೇಳಿಸಿದ್ದಾರೋ ಅದೇ ರೀತಿ ಇಲ್ಲೂ ಸ್ಟೋರಿ ಪ್ರಸೆಂಟ್ ಮಾಡಿದಂತಿದೆ.
ಒಂದಂತೂ ನಿಜ.. ಆ್ಯಕ್ಷನ್ ಸಿನಿಮಾ ಪ್ರಿಯರಿಗೆ ಸಲಾರ್ನಲ್ಲಿ ಎಂಟೈರ್ಟೈನ್ಮೆಂಟ್ ಸಿಗೋದಂತೂ ಗ್ಯಾರಂಟಿ. ಇದೊಂದು ಮಾಸ್ ಲೆವೆಲ್ ಸಿನಿಮಾ ಅಂತಾನೆ ಹೇಳಬಹುದು. ಎಸ್ಪೆಷಲಿ ಪ್ರಾಭಾಸ್ ಕೆರಿಯರ್ಗೆ ಈ ಮೂವಿ ತುಂಬಾನೆ ಇಂಪಾರ್ಟೆಂಟ್.. ಪ್ರಭಾಸ್ಗೆ ಇದೊಂಥರಾ ಡೂರ್ OR ಡೈ ಸಿನಿಮಾ ಇದ್ದಂತೆ. ಯಾಕಂದ್ರೆ ಬಾಹುಬಲಿ ಬಳಿ ಪ್ರಭಾಸ್ರಿಂದ ಹೇಳಿಕೊಳ್ಳುವಂತಾ ಹಿಟ್ ಸಿನಿಮಾ ಯಾವುದೇ ಸಿನಿಮಾ ಬಂದಿಲ್ಲ. ಪ್ರಭಾಸ್ ಮೇಲಿದ್ದ ಎಕ್ಸ್ಪೆಕ್ಟೇಶನ್ಗೆ ಯಾವುದೂ ರೀಚ್ ಆಗಿರಲಿಲ್ಲ. ಬಾಹುಬಲಿ ಒಬ್ಬ ನಟನಾಗಿ ಪ್ರಭಾಸ್ರನ್ನ ಮತ್ತೊಂದು ಲೆವೆಲ್ಗೆ ತೆಗೆದುಕೊಂಡು ಹೋಗಿತ್ತು. ಅಂಥಾ ಹಿಟ್ ಸಿನಿಮಾವನ್ನ ಪ್ರಭಾಸ್ಗೆ ಮತ್ತೆ ಕೊಡೋಕೆ ಸಾಧ್ಯವಾಗಿಲ್ಲ. ಆದ್ರೆ ಈಗ ಪ್ರಭಾಸ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಫುಲ್ ಆ್ಯಕ್ಷನ್ ಹೀರೋ ಆಗಿ, ಮಾಸ್ ಲೆವೆಲ್ನ ಮೂವಿ ಮಾಡಿದ್ದಾರೆ. ಈಗ ಪ್ರಭಾಸ್ ಮತ್ತೆ ಚಿತ್ರರಂಗದಲ್ಲಿ ಕಮ್ಬ್ಯಾಕ್ ಮಾಡ್ತಾರಾ ನೋಡ್ಬೇಕು. ಕೇವಲ ಪ್ರಭಾಸ್ಗೆ ಮಾತ್ರವಲ್ಲ ಪೃಥ್ವಿರಾಜ್ ಪಾಲಿಗೂ ಇದು ಟರ್ನಿಂಗ್ ಪಾಯಿಂಟ್ ಆದ್ರೂ ಆಗಬಹುದು. ಯಾಕಂದ್ರೆ ಸಲಾರ್ ಒಟ್ಟು 5 ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ..ಇಲ್ಲಿ ಪೃಥ್ವಿರಾಜ್ ಕ್ಯಾರೆಕ್ಟರ್ ಕ್ಲಿಕ್ ಆಯ್ತು ಅಂದ್ರೆ ಮಲಯಾಳಂ ನಟನಿಗೂ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಡೋರ್ ಓಪನ್ ಆಗಬಹುದು. ಇನ್ನು ಡೈರೆಕ್ಟರ್ ಪ್ರಶಾಂತ್ ನೀಲ್ ಮತ್ತೊಂದು ಕೆಜಿಎಫ್ ಮಾದರಿಯ ಆಕ್ಷನ್ ಮೂವಿ ತೆಗೆದಿದ್ದಾರೆ. ಸೆಟ್, ಕಾನ್ಸೆಪ್ಟ್ ಎಲ್ಲದಕ್ಕೂ ಒಂದಷ್ಟು ಸಾಮ್ಯತೆ ಇದೆ. ಈ ಸಿನಿಮಾ ವರ್ಕೌಟ್ ಆಯ್ತು ಅಂದ್ರೆ ಪ್ರಶಾಂತ್ ನೀಲ್ಗೆ ಇನ್ನಷ್ಟು ಡಿಮ್ಯಾಂಡ್ ಬರಬಹುದು. ಫೇಲ್ ಆದ್ರೆ, ಅದೇ ಕೆಜಿಎಫ್ ರೀತಿಯ ಸಿನಿಮಾಗಳ ಕಾನ್ಸೆಪ್ಟ್ ಕೈಬಿಟ್ಟು ಹೊಸ ಎಕ್ಸ್ಪರಿಮೆಂಟ್ ಮಾಡಬೇಕಾಗಬಹುದು. ಡಿಸೆಂಬರ್ 22ಕ್ಕೆ ಸಲಾರ್ ಸಿನಿಮಾ ರಿಲೀಸ್ ಆಗ್ತಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತೆರೆ ಕಾಣ್ತಿದೆ.