ಪ್ರಭಾಸ್ ಮತ್ತು ಪೃಥ್ವಿರಾಜ್ ಜೋಡಿಯ ಸಲಾರ್ ಸಿನಿಮಾ ಹೇಗಿದೆ? – ಕಣ್ಣೀರಿಡ್ತಿರೋದ್ಯಾಕೆ ಪ್ರಭಾಸ್ ಫ್ಯಾನ್ಸ್?
ಕೆಲ ವಾರಗಳ ಹಿಂದೆಯಷ್ಟೇ ರಣ್ಬೀರ್ ಕಪೂರ್ ಅಭಿನಯದ ಬಾಲಿವುಡ್ ಸಿನಿಮಾ ಎನಿಮಲ್ ರಿಲೀಸ್ ಆಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಎನಿಮಲ್ ಮೂವಿಯಲ್ಲಿ ವಾಯ್ಲೆನ್ಸ್ ಅನ್ನೋದು ಇನ್ನೊಂದು ಲೆವೆಲ್ನಲ್ಲಿ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಂದಷ್ಟು ಮಂದಿ ಅತಿಯಾದ ವಾಯ್ಲೆನ್ಸ್ಗೆ ತೀವ್ರ ಟೀಕಾ ಪ್ರಹಾರ ಮಾಡಿದ್ರು. ಸಮಾಜಕ್ಕೆ ರಾಂಗ್ ಮೆಸೇಜ್ ಕಳುಹಿಸಲಾಗ್ತಿದೆ ಅಂತೆಲ್ಲಾ ಹೇಳಿದ್ರು. ಈವನ್ ಪಾರ್ಲಿಮೆಂಟ್ನಲ್ಲೂ ಸಂಸದರೊಬ್ಬರು ಎನಿಮಲ್ ಮೂವಿ ವಿರುದ್ಧ ಮಾತನಾಡಿದ್ರು. ಇನ್ನೊಂದಷ್ಟು ಮಂದಿ ಜಸ್ಟ್ ಎಂಟರ್ಟೈನ್ಮೆಂಟ್ ಆ್ಯಂಗಲ್ನಲ್ಲಷ್ಟೇ ಸಿನಿಮಾ ನೋಡ್ಬೇಕು ಅಂತಾ ಸಮರ್ಥಿಕೊಂಡಿದ್ರು. ಇಷ್ಟೆಲ್ಲಾ ಚರ್ಚೆಗಳಾಗ್ತಿರೋದ್ರ ಮಧ್ಯೆಯೇ ಈಗ ಎನಿಮಲ್ನ ಅಪ್ಪ ಬಂದಿದ್ದಾನೆ. ಸಲಾರ್.. ಆಕ್ಷನ್ & ಎಮೋಷನಲ್ ಮೂವಿ.. ಕೆಲವರಂತೂ ಥಿಯೇಟರ್ನಿಂದ ಕಣ್ಣೀರಿಟ್ಟುಕೊಂಡೇ ಹೊರ ಬಂದಿದ್ದಾರೆ. ಹಾಗಿದ್ರೆ ಪ್ರಭಾಸ್ ಮತ್ತು ಪೃಥ್ವಿರಾಜ್ ಜೋಡಿಯ ಈ ಸಲಾರ್ ಮೂವಿ ಹೇಗಿದೆ? ಇದಕ್ಕೆ ಜನರ ರಿಯಾಕ್ಷನ್ ಏನು ಅನ್ನೋದ್ರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಉಗ್ರಂ ಸಿನಿಮಾ ಎಳೆಯನ್ನೇ ಇಟ್ಟುಕೊಂಡು ಸಲಾರ್ ಮಾಡಿದ್ರಾ ಪ್ರಶಾಂತ್ ನೀಲ್ – ಪ್ರಭಾಸ್ ಚಿತ್ರದ ಬಗ್ಗೆ ಫ್ಯಾನ್ಸ್ ಹೇಳೋದೇನು?
ವರ್ಧಾ ಮತ್ತು ದೇವ.. ಪ್ರಭಾಸ್ ಮತ್ತು ಪ್ರಥ್ವಿರಾಜ್ ಇಬ್ಬರೂ ಚೈಲ್ಡ್ವುಡ್ ಫ್ರೆಂಡ್ಸ್ಗಳಾಗಿರ್ತಾರೆ. ಒಂದೇ ಮಾತಲ್ಲಿ ಹೇಳೋದಾದ್ರೆ ಚಡ್ಡಿ ದೋಸ್ತಿಗಳಾಗಿರ್ತಾರೆ. ಒಬ್ಬರಿಗೊಬ್ಬ ಪ್ರಾಣವನ್ನೇ ಕೊಡಬಲ್ಲ ಸ್ನೇಹಿತರು. ಪ್ರಭಾಸ್ ಮತ್ತು ಪ್ರಥ್ವಿರಾಜ್ ಚೈಲ್ಡ್ವುಡ್ ಫ್ರೆಂಡ್ಶಿಪ್ನ ಬಗ್ಗೆ ಆ್ಯಕ್ಟ್ ಮಾಡಿದ ಚೈಲ್ಡ್ ಆ್ಯಕ್ಟರ್ಸ್ಗಳಿಬ್ಬರೂ ಏಕ್ ನಂಬರ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಇಬ್ಬರೂ ಕೂಡ ಸಿನಿಮಾದ ಆರಂಭದಲ್ಲೇ ಪ್ರೇಕ್ಷಕರ ಹೃದಯ ಗೆಲ್ಲೋದ್ರಲ್ಲಿ ಡೌಟೇ ಇಲ್ಲ. ಅಲ್ಲಿಂದ ಕಥೆ ಕಂಟಿನ್ಯೂ ಆಗುತ್ತೆ, ಇನ್ನೊಂದಷ್ಟು ವರ್ಷ ಮುಂದಕ್ಕೆ ಹೋದಾಗ ಹೊಸ ಕ್ಯಾರೆಕ್ಟರ್ನ ಎಂಟ್ರಿಯಾಗುತ್ತೆ. ಅಮೆರಿಕದಲ್ಲಿ ವಾಸವಿದ್ದ ಕೃಷ್ಣಕಾಂತ್ ಅನ್ನೋ ವ್ಯಕ್ತಿಯ ಪುತ್ರಿಯಾಗಿ ಶೃತಿ ಹಾಸನ್ ಭಾರತಕ್ಕೆ ಬರ್ತಾರೆ. ಕೆಲ ವ್ಯಕ್ತಿಗಳು ಆಕೆಯನ್ನ ಕೊಂದು ಕೃಷ್ಣಕಾಂತ್ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಯತ್ನಿಸ್ತಾರೆ. ಆಗ ಶೃತಿ ಹಾಸನ್ ಪ್ರಭಾಸ್ನ ತಾಯಿ ಬಳಿ ಹೋಗ್ತಾರೆ. ಪ್ರಭಾಸ್ ಒಂದು ಕೋಲ್ ಮೈನಿಂಗ್ನಲ್ಲಿ ಕೆಲಸ ಮಾಡ್ತಿರ್ತಾರೆ. ಹಾಗೆಯೇ ದುಷ್ಮನ್ಗಳಿಂದ ಶೃತಿ ಹಾಸನ್ರ ರಕ್ಷಣೆ ನಿಲ್ತಾರೆ. ಆದ್ರೆ ಪ್ರಭಾಸ್ನ ತಾಯಿ ಮಾತ್ರ ತನ್ನ ಪುತ್ರ ಹಿಂಸಾಚಾರದಲ್ಲಿ ಭಾಗಿಯಾಗಬಾರದು. ವಾಯ್ಲೆನ್ಸ್ನಿಂದ ದೂರವಿರಬೇಕು ಅಂತಾ ಬಯಸಿರ್ತಾರೆ. ಎಷ್ಟರ ಮಟ್ಟಿಗೆ ಅಂದ್ರೆ ಪ್ರಭಾಸ್ ಕೈಯಲ್ಲಿ ಕೇಕ್ ಕಟ್ ಮಾಡುವಂಥಾ ಪ್ಲಾಸ್ಟಿಕ್ ಚಾಕು ನೋಡಿಯೇ ಪ್ರಭಾಸ್ ತಾಯಿ ಟೆನ್ಷನ್ಗೆ ಒಳಗಾಗ್ತಾಳೆ. ಹಳೆಯ ದಿನಗಳಲ್ಲಾ ಘಟನೆಗಳು ಆಕೆಯ ಚಿಂತೆಗೆ ಕಾರಣವಾಗಿರುತ್ತೆ. ಹೀಗಾಗಿ ಮಗನನ್ನ ಗ್ಯಾಂಗ್ ವಾರ್ನಿಂದ ದೂರವಿಡೋಕೆ ಬಯಸಿರ್ತಾಳೆ. ಆದ್ರೆ ಅಣೆಕಟ್ಟು ಕಟ್ಟಿ ನದಿ ನೀರನ್ನ ಏನೋ ತಡೀಬಹುದು. ಆದ್ರೆ ಸಮುದ್ರವನ್ನ ತಡಿಯೋಕೆ ಸಾಧ್ಯವೇ ಇಲ್ವಲ್ಲ..ಇದು ಸಲಾರ್ ಸಿನಿಮಾದ ಡೈಲಾಗೇ..ಈ ಡೈಲಾಗ್ನಿಂದಲೇ ಪ್ರಭಾಸ್ ಕ್ಯಾರೆಕ್ಟರ್ ಏನು ಅನ್ನೋದನ್ನ ನೀವು ಅರ್ಥ ಮಾಡಿಕೊಳ್ಳಬಹುದು. ಶೃತಿ ಹಾಸನ್ರನ್ನ ಸೇವ್ ಮಾಡೋಕೆ ಪ್ರಭಾಸ್ ಆಕ್ಷನ್ ಅವತಾರ ತಾಳ್ತಾರೆ. ಆರಂಭದಲ್ಲೇ ಆಕ್ಷನ್ ಶುರುವಾದ್ರೂ ಭಾರಿ ಫೇಮಸ್ ಆಗಿರೋ ಪ್ರಭಾಸ್ ಮುಷ್ಠಿ ಹೊಡೆತ ಸಿನಿಮಾ ಶುರುವಾಗಿ ಒಂದು ಗಂಟೆ ಬಳಿಕ ಬರೋದು. ಈ ಒಂದು ಮುಷ್ಠಿ ಹೊಡೆತಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿ ಹೋಗಿದ್ದಾರೆ.
ಈ ಮುಷ್ಠಿ ಗುದ್ದಿನಿಂದ ಮಾಸ್ ಮಸಾಲಾ ಆ್ಯಕ್ಷನ್ ಸಿನಿಮಾ ಇನ್ನೊಂದು ಲೆವೆಲ್ನಲ್ಲಿ ಹೋಗುತ್ತೆ. ಅಷ್ಟಕ್ಕೂ ಶೃತಿ ಹಾಸನ್ರನ್ನ ಕೊಲ್ಲೋಕೆ ಯತ್ನಿಸೋ ಆ ದುಷ್ಮನ್ ಯಾರು? ಅವರು ಸೇಡು ತೀರಿಸಿಕೊಳ್ಳೋಕೆ ಮುಂದಾಗಿರೋದ್ಯಾಕೆ? ಪ್ರಭಾಸ್ ಮತ್ತು ತಾಯಿಯ ಹಿನ್ನೆಲೆ ಏನು? ಖಾನ್ಸಾರ್ ಸಾಮ್ರಾಜ್ಯಕ್ಕೂ ಇವರಿಗೂ ಇರೋ ಲಿಂಕ್ ಏನು ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಇವೆಲ್ಲವೂ ಗೊತ್ತಾಗ್ಬೇಕು ಅಂದ್ರೆ ಸಿನಿಮಾ ನೋಡ್ಲೇಬೇಕು. ಸಿನಿಮಾದ ಫಸ್ಟ್ ಹಾಫ್ನಲ್ಲಿ ನೀವು ಟ್ರೈಲರ್ನಲ್ಲಿ ಎಲ್ಲೂ ನೋಡದ ದೃಶ್ಯಗಳೇ ಇವೆ. ಸಿನಿಮಾ ಕೊನೆವರೆಗೂ ಸಾಕಷ್ಟು ಟ್ವಿಸ್ಟ್ & ಟರ್ನ್ಗಳನ್ನ ಪಡೆದುಕೊಳ್ಳುತ್ತಲೇ ಸಾಗುತ್ತೆ. ಇಂಟರ್ವಲ್ಗೂ ಮುನ್ನವೇ ಸಿನಿಮಾಗೆ ಹೊಸ ಟ್ವಿಸ್ಟ್ ಸಿಗುತ್ತೆ. ಇನ್ನು ಅಸಲಿ ಆ್ಯಕ್ಷನ್ ಶುರುವಾಗೋದೆ ಸೆಕೆಂಡ್ ಹಾಫ್ನಿಂದ. ಇಲ್ಲಿ ನಡೆಯೋದೆ ಸೀಸ್ಫೈರ್ ಸಮರ. ಇಂಟರ್ವಲ್ಗೂ ಮುನ್ನ ಇದ್ದ ಸಸ್ಪೆನ್ಸ್ ಎಲ್ಲಾ ಸೆಕೆಂಡ್ ಪಾರ್ಟ್ನಲ್ಲಿ ರಿವೀಲ್ ಆಗ್ತಾ ಹೋಗುತ್ತೆ. ಆ್ಯಕ್ಷನ್ ಮತ್ತು ಎಮೋಷನಲ್ ಎರಡೂ ಸೆಕೆಂಡ್ ಹಾಫ್ನಲ್ಲಿದೆ. ಇನ್ನು ಕೆಜಿಎಫ್ನಲ್ಲಿ ಯಶ್ ದೊಡ್ಡಮ್ಮನ ಮೂಲಕ ಪೊಲೀಸ್ ಸ್ಟೇಷನ್ ಉಡೀಸ್ ಮಾಡಿ ಬಳಿಕ ಅದ್ರಿಂದಲೇ ಸಿಗರೇಟ್ ಹಚ್ಚಿಕೊಳ್ತಾರಲ್ಲಾ ಅಂಥದ್ದೇ ಒಂದು ಐಕಾನಿಕ್ ಸೀನ್ ಸಲಾರ್ ಸಿನಿಮಾದ ಸೆಕೆಂಡ್ ಹಾಫ್ನಲ್ಲಿದೆ. ಮಗುವೊಂದನ್ನ ರಕ್ಷಿಸಿದ ಬಳಿಕ ಪ್ರಭಾಸ್ ಐಕಾನಿಕ್ ಸೀನ್ ತೆರೆದುಕೊಳ್ಳುತ್ತೆ. ಹಾಗೆಯೇ ಬಾಹುಬಲಿಯಲ್ಲಿ ಖಡ್ಗ ಬಿಸಿದಂತೆ ಇಲ್ಲೂ ಪ್ರಭಾಸ್ ತಲ್ವಾರ್ ಮೂಲ ತೆಲೆಗಳನ್ನ ಉರುಳಿಸ್ತಾರೆ. ಕೈ ಕಾಲು ಕಡೀತಾರೆ..ಒಂದ್ಸಾರಿ ಬಾಹುಬಲಿಯೂ ಕಣ್ಣಮುಂದೆ ಪಾಸ್ ಆಗೋದು ಗ್ಯಾರಂಟಿ. ಇನ್ನು ಸಿನಿಮಾದ ಬೆಸ್ಟ್ ಪಾರ್ಟ್ ಯಾವುದು ಅಂತಾ ಕೇಳಿದ್ರೆ, ಸ್ಕ್ರೀನ್ನಲ್ಲಿ ಪ್ರಭಾಸ್ ಪ್ರಸೆನ್ಸ್. ಪ್ರಭಾಸ್ ಕಣ್ಣೇ ಇಲ್ಲಿ ಮೇನ್ ಅಟ್ರಾಕ್ಷನ್. ಪ್ರಭಾಸ್ ಕಣ್ಣುಗಳೇ ಸ್ಟೋರಿ ಹೇಳುತ್ತೆ. ಅಂತೂ ಸಲಾರ್ ಸಿನಿಮಾ ಪ್ರಭಾಸ್ ಕೆರಿಯರ್ಗೆ ದೊಡ್ಡ ಬೂಸ್ಟರ್ ಆಗೋದ್ರಲ್ಲಿ ನೋ ಡೌಟ್. ಇನ್ನು ಬಿಜಿಎಂ ಅಂತೂ ಕೇಲೋದೇ ಬೇಡ. ನೆಕ್ಸ್ಟ್ ಲೆವೆಲ್ನಲ್ಲಿದೆ. ಜೊತೆಗೆ ಸಿನಿಮಾದಲ್ಲಿರೋ ಪ್ರತಿಯೊಬ್ಬರೂ ಕೂಡ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಇನ್ನು ಆ್ಯಕ್ಷನ್ ಅಂತೂ ಕೇಳೋದೆ ಬೇಡ. ಆಗಲೇ ಹೇಳಿದ ಹಾಗೆ ಎನಿಮಲ್ ಸಿನಿಮಾದ ಬಾಪ್ ಅಂದ್ರೆ ಸಲಾರ್. ಹಾಗೆಯೇ ಸಲಾರ್ನಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸೀನ್ ಇದೆ. ಸೆಕೆಂಡ್ ಹಾಫ್ನಲ್ಲಿ ಕಾಳಿ ಮಾ ತನ್ನ ತಾಯಿಯನ್ನ ಕಳುಹಿಸಿದ್ದಾಳೆ ಅನ್ನೋ ಒಂದು ಡೈಲಾಗ್ ಬರುತ್ತೆ. ಆ ಡೈಲಾಲ್ಗೆ ಸರಿಯಾಗಿ ಒಂದು ಸೀನ್ ಕೂಡ ಇದೆ. ದಟ್ ಈಸ್ ಮಿಸ್ಟರ್ ಕೆಜಿಎಫ್ ಯಶ್ ಎಂಟ್ರಿ.. ಥಿಯೇಟರ್ನಲ್ಲಿ ಮತ್ತೊಮ್ಮೆ ವಿಸಿಲ್ ಬೀಳೋದು ಇದಕ್ಕೇನೇ. ಇನ್ನು ಸಿನಿಮಾದಲ್ಲಿ ತುಂಬಾನೆ ಕ್ಯಾರೆಕ್ಟರ್ಸ್ಗಳಿದ್ದಾವೆ. ಅದು ಸ್ವಲ್ಪ ಕನ್ಫ್ಯೂಸ್ ಮಾಡುತ್ತೆ. ಹಾಗೆಯೇ ಯಾರಿಗೆ ಯಾರ ಜೊತೆ ಏನು ರಿಲೇಶನ್? ಯಾರಿಗೆ ಯಾರು ಏನಾಗ್ಬೇಕು? ಅವರು ಇವರಿಗೆ ಹೊಡಿಯೋದ್ಯಾಕೆ? ಇವರು ಅವರಿಗೆ ಹೊಡಿಯೋದ್ಯಾಕೆ? ಯಾರಿಗೆ ಯಾರ ಜೊತೆಗೆ ದುಷ್ಮನಿ ಇರೋದು ಅನ್ನೋ ಬಗ್ಗೆಯೂ ಕೆಲವರಿಗೆ ಒಂದಷ್ಟು ಕನ್ಫ್ಯೂಸ್ ಆಗಬಹುದು. ಎಸ್ಪೆಷಲಿ ಸೆಕೆಂಡ್ ಹಾಫ್ನಲ್ಲಿ. ಹೀಗಾಗಿ ಕೆಲವರಿಗೆ 2, 3 ಬಾರಿ ಸಿನಿಮಾದ ನೋಡಿದ ಬಳಿಕವೇ ಸ್ಟೋರಿ ಅರ್ಥವಾಗಬಹುದೋ ಏನೋ. ಫಸ್ಟ್ ಹಾಫ್ನಲ್ಲಂತೂ ಸಿನಿಮಾ ಸ್ಟೋರಿ ಏನು ಅನ್ನೋ ಬಗ್ಗೆ ಸ್ವಲ್ಪವೂ ಕ್ಲ್ಯಾರಿಟಿ ಸಿಗೋದಿಲ್ಲ. ಈ ಕನ್ಫ್ಯೂಷನ್ಗಳೆಲ್ಲಾ ಇರೋದ್ರಿಂದ ಸಿನಿಮಾ ಕೊನೆತನಕವೂ ಇಂಟ್ರೆಸ್ಟಿಂಗ್ ಆಗಿರೋದು. ಪ್ರಭಾಸ್ ಆ್ಯಕ್ಟಿಂಗ್ ಅಂತೂ ದಿ ಬೆಸ್ಟ್. ಪ್ರಭಾಸ್ ಅಲ್ಲ ಇನ್ನು ಪ್ರ-ಬಾಸ್..ಆಕ್ಷನ್ ಸಿನಿಮಾದ ಬಾಸ್ ಅಂತಾನೆ ಕರೀಬಹುದು. ಹಾಗೆಯೇ ಮಲಯಾಳಂ ನಟ ಪೃಥ್ವಿರಾಜ್ ಆ್ಯಕ್ಟಿಂಗ್ ಕೂಡ ತುಂಬಾನೆ ಇಂಪ್ರೆಸಿವ್ ಆಗಿದೆ. ಪೃಥ್ವಿರಾಜ್ ಕೆರಿಯರ್ಗೂ ಅಷ್ಟೇ ಇದೊಂದು ಟರ್ನಿಂಗ್ ಪಾಯಿಂಟ್ ಆಗಬಹುದು. ಹೇಳಿ ಕೇಳಿ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಮೂವಿ.. ಹೀಗಾಗಿ ಬಾಕ್ಸಾಫೀಸ್ ಧೂಳಿಪಟ ಮಾಡೋದ್ರಲ್ಲಿ ಡೌಟೇ ಇಲ್ಲ. ಟೋಟಲಿ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಮತ್ತೊಂದು ಮಾಸ್ ಮಸಾಲಾ ಆ್ಯಕ್ಷನ್ ಮೂವಿ ಮಾಡಿ ಭಾರತೀಯ ಚಿತ್ರರಂಗವನ್ನೇ ಶೇಕ್ ಮಾಡ್ತಾ ಇದ್ದಾರೆ. ಸಿನಿಮಾ ನೋಡಿದ ಕೆಲ ಮಂದಿಯಂತೂ ಪ್ರಭಾಸ್ ಎಂಥಾ ಮೂವಿ ಮಾಡಿದ್ಯಪ್ಪಾ ಖುಷಿಯಲ್ಲಿ ಕಣ್ಣೀರಿಟ್ಟಿದ್ದಾರೆ. ಭಾವೋದ್ವೇಗಕ್ಕೊಳಗಾಗಿ ಮಾತನಾಡಿದ್ದಾರೆ.