ಶುಕ್ರವಾರ ಸಂಜೆಯಿಂದ ‘ಸಲಾರ್’ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್!

ಶುಕ್ರವಾರ ಸಂಜೆಯಿಂದ ‘ಸಲಾರ್’ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್!

ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನಿಮಾ ಸಲಾರ್. ಪ್ರಭಾಸ್ ಅವರು ‘ಸಲಾರ್’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಕೂಡಾ ನಟಿಸುತ್ತಿದ್ದಾರೆ. ಇದೀಗ ಕರ್ನಾಟಕದಲ್ಲಿ ‘ಸಲಾರ್’ ಚಿತ್ರದ ಅಡ್ವಾನ್ಸ್ ಬುಕಿಂಗ್ ಶುಕ್ರವಾರ ಸಂಜೆ 6:49ಕ್ಕೆ ಆರಂಭ ಆಗಲಿದೆ.

ಹೌದು, ಸಲಾರ್‌ ಸಿನಿಮಾ ಬಿಡುಗಡೆಗೆ ಕೇವಲ ಒಂದು ವಾರ  ಮಾತ್ರ ಬಾಕಿ ಉಳಿದಿದೆ. ಶುಕ್ರವಾರ ಕರ್ನಾಟಕದಲ್ಲಿ ‘ಸಲಾರ್’ ಚಿತ್ರದ ಅಡ್ವಾನ್ಸ್ ಬುಕಿಂಗ್  ಸಂಜೆ 6:49ಕ್ಕೆ ಆರಂಭ ಆಗಲಿದೆ. ಕೆಲವೇ ಸ್ಕ್ರೀನ್​ಗಳಿಗೆ ಮಾತ್ರ ಬುಕಿಂಗ್ ಓಪನ್ ಆಗಲಿದೆ. ಮುಂದಿನ ದಿನಗಳಲ್ಲಿ ಪರದೆ ಹೆಚ್ಚಿಸಲು ನಿರ್ಧರಿಸಲಾಗಿದೆ. ‘ಸಲಾರ್’ ಚಿತ್ರಕ್ಕೆ ಮೊದಲ ದಿನ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಶೋಗಳು ಸಿಗಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ಸಂಸತ್ ಭವನದಲ್ಲಿ ಭದ್ರತಾ ಲೋಪ ಪ್ರಕರಣ – ಅಟ್ಯಾಕ್ ಆದ್ಮೇಲೆ ಸಂಸತ್​​ ಸೆಕ್ಯೂರಿಟಿಯಲ್ಲಿ ಭಾರಿ ಬದಲಾವಣೆ!

ಸಲಾರ್‌ ಸಿನಿಮಾ ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬಂದಿದೆ. ಪ್ರಭಾಸ್, ಪೃಥ್ವಿರಾಜ್​ ಸುಕುಮಾರನ್, ಜಗಪತಿ ಬಾಬು ಸೇರಿ ದೊಡ್ಡ ಪಾತ್ರವರ್ಗ ಇದೆ. ತಾಂತ್ರಿಕ ವರ್ಗದಲ್ಲಿ ಕನ್ನಡದ ಅನೇಕರಿದ್ದಾರೆ. ಹೀಗಾಗಿ ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ‘ಸಲಾರ್’ಗೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹೀಗಾಗಿ, ಚಿತ್ರದಲ್ಲಿ ಭರ್ಜರಿ ವೈಲೆನ್ಸ್ ಇದೆ ಅನ್ನೋದು ಸ್ಪಷ್ಟವಾಗಿದೆ.

‘ಅನಿಮಲ್’ ಸಿನಿಮಾ ಇನ್ನೂ ಅಬ್ಬರಿಸುತ್ತಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ರಿಲೀಸ್ ಆಗಲಿದೆ. ಡಿಸೆಂಬರ್ 29ರಂದು ದರ್ಶನ್ ನಟನೆಯ ‘ಕಾಟೇರ’ ಬಿಡುಗಡೆ ಆಗಲಿದೆ. ಈ ಕಾರಣಕ್ಕೆ ‘ಸಲಾರ್’ ಚಿತ್ರಕ್ಕೆ ಸ್ಪರ್ಧೆ ಜೋರಾಗಿಯೇ ಇದೆ. ಇವುಗಳ ಮಧ್ಯೆ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ.

Shwetha M