ಸಲಾರ್ ಸಿನಿಮಾಗೆ ಸಿಕ್ತು ‘ಎ’ ಸರ್ಟಿಫಿಕೇಟ್ – 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ನೋಡುವಂತಿಲ್ಲ

ಸಲಾರ್ ಸಿನಿಮಾಗೆ ಸಿಕ್ತು ‘ಎ’ ಸರ್ಟಿಫಿಕೇಟ್ – 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು  ನೋಡುವಂತಿಲ್ಲ

ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಿನಿಮಾ ಸಲಾರ್. ಪ್ರಭಾಸ್ ಅವರು ‘ಸಲಾರ್’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಕೂಡಾ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ 18 ವಯಸ್ಸಿನ ಕೆಳಗಿನವರು ನೋಡುವಂತಿಲ್ಲ.

ಇದನ್ನೂ ಓದಿ:ಅನಿಮಲ್ ಸಿನಿಮಾದ ಆ ದೃಶ್ಯ ನೋಡಿ ಹೆತ್ತವರಿಗೆ ಆಘಾತ – ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯ ಬೇಕಿತ್ತಾ ಎಂದು ನಟಿ ತೃಪ್ತಿಗೆ ಹೆತ್ತವರ ಪ್ರಶ್ನೆ

ಹಿಂಸೆಯ ವಿಜೃಂಭಣೆ, ಅಸಭ್ಯ ಭಾಷೆ ಬಳಕೆ, ಮಿತಿಮೀರಿದ ರೋಮ್ಯಾನ್ಸ್ ಇದೆಲ್ಲವೂ ಇದೆ ಅನ್ನೋ ಕಾರಣಕ್ಕೆ ಬಾಲಿವುಡ್‌ನ ಅನಿಮಲ್ ಸಿನಿಮಾಗೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿತ್ತು. ಆದರೆ, ಸಿನಿಮಾ ಮಾತ್ರ ಸೂಪರ್ ಹಿಟ್ ಆಗಿದೆ. 1,000 ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿದೆ. ಈಗ ಮತ್ತೊಂದು ಮಹತ್ವಾಕಾಂಕ್ಷಿ ‘ಸಲಾರ್’ ಸಿನಿಮಾಗೂ ಸೆನ್ಸಾರ್ ಬೋರ್ಡ್‌ನಿಂದ ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ಪ್ರಭಾಸ್ ಅವರು ‘ಸಲಾರ್’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರ ಸಿನಿಮಾಗಳಲ್ಲಿ ಅಭಿಮಾನಿಗಳು ಆ್ಯಕ್ಷನ್ ಬಯಸುತ್ತಾರೆ. ‘ಸಲಾರ್’ ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ದೃಶ್ಯಗಳು ಇರಲಿವೆ ಎಂದು ‘ಹೊಂಬಾಳೆ ಫಿಲ್ಸ್’ ಈಗಾಗಲೇ ಹೇಳಿದೆ. ಅದ್ದರಿಂದ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಯಾವುದೇ ಸಿನಿಮಾಗೆ ‘ಎ’ ಪ್ರಮಾಣಪತ್ರ ಸಿಕ್ಕರೆ 18 ವರ್ಷಕ್ಕಿಂತ ಕಿರಿಯರು ಆ ಸಿನಿಮಾವನ್ನು ನೋಡುವಂತಿಲ್ಲ. ಇದರಿಂದ ಮಕ್ಕಳ ಜೊತೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗಲಿದೆ. ಡಿಸೆಂಬರ್ 22ಕ್ಕೆ ಸಲಾರ್ ಸಿನಿಮಾ ರಿಲೀಸ್ ಆಗಲಿದೆ.

Sulekha