ಸೈನ್ಯಕ್ಕೆ ಸೇರುವ ಆಸೆ , ಆಕಸ್ಮಿಕವಾಗಿ ಕ್ರಿಕೆಟ್ಗೆ ಎಂಟ್ರಿ – ಡೆಬ್ಯೂನಲ್ಲಿ RRಗೆ ಡಿಚ್ಚಿ ಕೊಟ್ಟ ಸಾಕಿಬ್ ಹುಸೇನ್ ಯಾರು ಗೊತ್ತಾ?

SRH Vs RR ಪಂದ್ಯದಲ್ಲಿ ಸಾಕೀಬ್ ಹುಸೇನ್ ಕೂಡ 4 ವಿಕೆಟ್ ತೆಗೆದು ಮಿಂಚಿದ್ದಾನೆ. ಬಿಹಾರದ ಗೋಪಾಲ್ಗಂಜ್ನ 21 ವರ್ಷದ ಯುವ ವೇಗಿ ಸಕಿಬ್ ಹುಸೇನ್ ತಮ್ಮ ಐಪಿಎಲ್ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ್ರು. ಐಪಿಎಲ್ ಇತಿಹಾಸದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಹಾರದ ಈ ಆಟಗಾರನ ಬಗ್ಗೆ ತಿಳಿದುಕೊಳ್ಳೋಣ.
ಸೈನ್ಯಕ್ಕೆ ಸೇರುವ ಆಸೆ , ಆಕಸ್ಮಿಕವಾಗಿ ಕ್ರಿಕೆಟ್ಗೆ ಎಂಟ್ರಿ
ಬಡ ಕುಟುಂಬದಿಂದ ಬಂದ ಸಾಕೀಬ್ ಕ್ರಿಕೆಟ್ ಬಗ್ಗೆ ಕನಸು ಕಂಡವರಲ್ಲ. ಸೈನ್ಯ ಸೇರಿ ತಮ್ಮ ಕುಟುಂಬಕ್ಕೆ ಆಧಾರವಾಗಲು ನಿರ್ಧರಿಸಿದ್ದರು. ಸೈನಿಕನಾಗಲೆಂದೇ ಅವರು ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದರು. ಆದರೆ ಸ್ಥಳೀಯ ಟೂರ್ನಿಯೊಂದರಲ್ಲಿ ಅವರು ತೋರಿದ ಬೌಲಿಂಗ್ ಪ್ರದರ್ಶನ ವೃತ್ತಿಜೀವನಕ್ಕೆ ಮಹತ್ವದ ತಿರುವು ತಂದುಕೊಟ್ಟಿತು. ಐಪಿಎಲ್ 2024 ರ ಸೀಸನ್ಗೆ ಮೊದಲು ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಸಹಿ ಮಾಡಿತ್ತು ಆದರೆ ಅವರಿಗೆ ಯಾವುದೇ ಪಂದ್ಯ ಸಿಗಲಿಲ್ಲ.. 2025ರ ಸೀಸನ್ಗೆ ಮೊದಲು ಬಿಡುಗಡೆ ಮಾಡಲಾಯಿತು. ಐಪಿಎಲ್ 2026 ರ ಹರಾಜಿನಲ್ಲಿ ಅವರನ್ನು ಎಸ್ಆರ್ಹೆಚ್ 30 ಲಕ್ಷ ರೂ.ಗೆ ಖರೀದಿಸಿತ್ತು. ಭಾರತದ ಮಾಜಿ ವೇಗಿ ವರುಣ್ ಆರನ್ ಅವರ ಗರಡಿಯಲ್ಲಿ ಪಳಗಿದ ಅವರು ಇದೀಗ ಘಾತಕ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಬಲಗೈ ವೇಗಿ 2022-23 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ಪರ ಟಿ 20 ಗೆ ಪದಾರ್ಪಣೆ ಮಾಡಿದರು. 17 ನೇ ವಯಸ್ಸಿನಲ್ಲಿ, ಅವರು ತಮ್ಮ ಎರಡನೇ ಪಂದ್ಯದಲ್ಲಿ 20 ಕ್ಕೆ 4 ವಿಕೆಟ್ ಗಳಿಸಿದ್ದರು. 2025-26 ರ ರಣಜಿ ಟ್ರೋಫಿಯಲ್ಲಿ ಸಕಿಬ್ ತಮ್ಮ ಮೊದಲ ಐದು ವಿಕೆಟ್ ಗೊಂಚಲು ಪಡೆದರು. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ 41 ಕ್ಕೆ 6 ವಿಕೆಟ್ ಪಡೆದರು.
ಹುಸೇನ್ ಪಂದ್ಯ ಮುಗಿದ ನಂತ್ರ ಟ್ವಿಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. “ತುಂಬಾ ಧನ್ಯವಾದಗಳು. ಪ್ರತಿಯೊಬ್ಬ ಆಟಗಾರನೂ ಇಂತಹ ಚೊಚ್ಚಲ ಪಂದ್ಯವನ್ನು ಆಶಿಸುತ್ತಾನೆ, ಆದ್ದರಿಂದ ಇದು ನಿಜವಾಗಿಯೂ ಒಳ್ಳೆಯದು ಎಂದು ಅನಿಸುತ್ತದೆ. ನನ್ನ ಈ ಪ್ರದರ್ಶನದ ಬಗ್ಗೆ ತುಂಬಾ ಸಂತೋಷವಾಗಿದೆ. ಬೌಲಿಂಗ್ ಕೋಚ್ ವರುಣ್ ಭಾಯ್ ಪಂದ್ಯಕ್ಕೆ ಒಂದು ದಿನ ಮೊದಲು ನಾನು ಆಡುತ್ತೇನೆ ಎಂದು ನನಗೆ ತಿಳಿಸಿದರು. ಅವರು ನನ್ನ ಮೇಲಿಟ್ಟ ನಂಬಿಕೆಗೆ ಧನ್ಯವಾಗಳು” ಎಂದು ಹುಸೇನ್ ಹೇಳಿದರು.

ನೋಡಿರಿ

