1 ಸಾವಿರ ರೂಪಾಯಿಗಾಗಿ ಕಿಸ್ ಮಾಡ್ತಿದ್ರಂತೆ ಸೈಫ್ ಅಲಿ ಖಾನ್ – 10 ಬಾರಿ ಗಲ್ಲಕ್ಕೆ ಚುಂಬಿಸುತ್ತಿದ್ದ ಬಾಲಿವುಡ್ ನಟ

1 ಸಾವಿರ ರೂಪಾಯಿಗಾಗಿ ಕಿಸ್ ಮಾಡ್ತಿದ್ರಂತೆ ಸೈಫ್ ಅಲಿ ಖಾನ್ – 10 ಬಾರಿ ಗಲ್ಲಕ್ಕೆ ಚುಂಬಿಸುತ್ತಿದ್ದ ಬಾಲಿವುಡ್ ನಟ

ಬಾಲಿವುಡ್ ನಟ ಸೈಫ್ ಆಲಿ ಖಾನ್ ತನ್ನ ಬದುಕಿನ ಕಥೆಯೊಂದನ್ನ ವಿವರಿಸಿದ್ದಾರೆ. ಆದರೆ, ಈ ಸ್ಟೋರಿ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಟನಾಗಿ ಗುರುತಿಸಿಕೊಳ್ಳಲು ಸೈಫ್ ಪಟ್ಟಿರೋ ಪಾಡು, ನಿರ್ಮಾಪಕಿಯೊಬ್ಬರು ತನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆ ಸೈಫ್ ಅಚ್ಚರಿಯ ಹೇಳಿಕೆಯೊಂದನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ:ಬಿಗ್‌ ಬಾಸ್‌ ಅರಮನೆ ಪ್ರೋಮೋ ರಿಲೀಸ್ – ಅಸಲಿ ಹಬ್ಬ ಇವಾಗ ಶುರು.. ಕಿಚ್ಚನಿಂದ ದೊಡ್ಡ ಸೀಕ್ರೆಟ್‌ ರಿವೀಲ್!

ಬಾಲಿವುಡ್ ನಟ ಸೈಫ್ ಅಲಿ ಖಾನ್ ಆ ಕಾಲದಲ್ಲಿ ಜನಪ್ರಿಯ ನಟಿಯಾಗಿದ್ದ ಶರ್ಮಿಲಾ ಟಾಗೊರ್ ಹಾಗೂ ಕ್ರಿಕೆಟರ್ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಮಗ. ಆದರೆ, ಬಾಲಿವುಡ್ ಅಂಗಳದಲ್ಲಿ ನೆಲೆಯೂರಲು ಸೈಫ್ ಪಟ್ಟಿರೋ ಪಾಡು ಅಷ್ಟಿಷ್ಟಲ್ಲ. ಈ ಬಗ್ಗೆ ಒಂದು ಘಟನೆಯೊಂದನ್ನ ಸೈಫ್ ನೆನಪಿಸಿಕೊಂಡಿದ್ದಾರೆ. ಈ ವಿಚಾರ ನಿಜಕ್ಕೂ ಅಚ್ಚರಿ ಮತ್ತು ಆಘಾತಕಾರಿಯಾಗಿದೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೇವಲ 21ನೇ ವಯಸ್ಸಿನಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು. 25ರ ಹರೆಯದಲ್ಲೇ ಪುತ್ರಿ ಸಾರಾ ಅಲಿ ಖಾನ್ ಹುಟ್ಟಿದಾಗ ಸಂಸಾರದ ಜವಾಬ್ದಾರಿ ಹೆಗಲಮೇಲೇರಿತ್ತು. ನಂತರ ಪುತ್ರ ಇಬ್ರಾಹಿಂ ಜನಿಸಿದ ಮೇಲೆ ಆರ್ಥಿಕ ಸ್ಥಿತಿ ಸ್ವಲ್ಪ ಏರುಪೇರಾಗಿತ್ತು. ಈ ಸಂದರ್ಭದಲ್ಲಿ ಸಿನಿಮಾಗಳು ಕೈಯಲ್ಲಿದ್ದರು ಬರುತ್ತಿದ್ದ ಆದಾಯ ಅಷ್ಟಕಷ್ಟೇ. ಆಗ ಒಬ್ಬರು ನಿರ್ಮಾಪಕಿ ತಮ್ಮ ಕೈಗೆ ಪ್ರತೀ ವಾರ 1000 ರೂಪಾಯಿ ನೀಡುತ್ತಿದ್ದರು. ಆದರೆ ಪ್ರತೀ ಬಾರಿ ಹಣ ನೀಡುವಾಗ, ಆಕೆ “ಗಲ್ಲಕ್ಕೆ 10 ಬಾರಿ ಚುಂಬಿಸಬೇಕು” ಎಂದು ವಿಚಿತ್ರ ಷರತ್ತು ಹಾಕಿದ್ದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರಣದಿಂದ ಸೈಫ್ ಈ ಅವಮಾನಕರ ಷರತ್ತಿಗೂ ಒಪ್ಪಿಕೊಳ್ಳಬೇಕಾಯಿತು. ಈ ಸಂಗತಿಯು ಆ ಕಾಲದ ಅವರ ಪರಿಸ್ಥಿತಿ ಎಷ್ಟೊಂದು ಕಠಿಣವಾಗಿತ್ತೆಂಬುದಕ್ಕೆ ನಿದರ್ಶನವಾಗಿದೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಸೈಫ್ ಅಲಿ ಖಾನ್ ಬಹಿರಂಗ ಪಡಿಸಿದ್ದಾರೆ.

Sulekha