ಸೈಫ್ ಕೇಸ್‌ಗೆ ಬಿಗ್ ಟ್ವಿಸ್ಟ್ – ತಪ್ಪಾದ ವ್ಯಕ್ತಿಗಳನ್ನ ಅರೆಸ್ಟ್ ಮಾಡಿದ್ರಾ?
ಇನ್ಶೂರೆನ್ಸ್ ಗೋಲ್ಮಾಲ್ ಮಾಡಿದ್ರಾ ಸೈಫ್?|

ಸೈಫ್ ಕೇಸ್‌ಗೆ ಬಿಗ್ ಟ್ವಿಸ್ಟ್  – ತಪ್ಪಾದ ವ್ಯಕ್ತಿಗಳನ್ನ ಅರೆಸ್ಟ್ ಮಾಡಿದ್ರಾ?ಇನ್ಶೂರೆನ್ಸ್ ಗೋಲ್ಮಾಲ್ ಮಾಡಿದ್ರಾ ಸೈಫ್?|

ಸೈಫ್ ಅಲಿ ಖಾನ್ ಚಾರು ಇರಿತ ಕೇಸ್‌ನಲ್ಲಿ ಪೊಲೀಸರು ಅವಸರಕ್ಕೆ ಬಿದ್ದು ಅವಾಂತರ ಮಾಡಿದ್ದಾರಾ ಅನ್ನೋ ಅನುಮಾನಗಳು ಹೆಚ್ಚಾಗಿದೆ. ಈ ಬೆನ್ನಲ್ಲೇ ಇದೇ ಪ್ರಕರಣದಲ್ಲಿ ಮತ್ತೊಂದು ಅವಾಂತರ ಬಯಲಿಗೆ ಬಂದಿದೆ. ಸೈಫ್ ಮೇಲೆ ದಾಳಿ ನಡೆದ ಬೆನ್ನಲ್ಲೇ ಸಿಸಿಟಿವಿಯಲ್ಲಿ ಕಾಣಿಸಿಕೊಂಡ ವ್ಯಕ್ತಿಗೆ ಹೋಲುವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಈ ಯವಕನ ತಪ್ಪಾಗಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಪರಿಣಾಮ ಯುವಕ ಇದೀಗ ನರಕ ಯಾತನೆ ಅನುಭವಿಸುಂತವಾಗಿದೆ. ಈತ ಕೆಲಸ ಕಳೆದುಕೊಂಡಿದ್ದಾನೆ, ಪಿಕ್ಸ್ ಆಗಿದ್ದ ಮದುವೆ ಕೂಡ ಕ್ಯಾನ್ಸಲ್ ಆಗಿದೆ.

ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಆತುರಕ್ಕೆ ಬಿದ್ದ ಪೊಲೀಸರು ಹಲವು ಎಡವಟ್ಟು ಮಾಡಿದ್ದಾರೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 31 ವರ್ಷದ ಆಕಾಶ್ ಕೈಲಾಶ್ ಕನೋಜಿಯಾ ಅನ್ನೋ ಯುವಕ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಸೈಫ್ ಮೇಲಿನ ದಾಳಿಯಾದ ಬಳಿಕ ಮುಂಬೈ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಎಲ್ಲಾ ರೈಲು ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹಲವು ಪೊಲೀಸ್ ಠಾಣೆಗಳಿಗೆ ಕಳುಹಿಸಿತ್ತು. ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ಚತ್ತಿಸೀಘಡ ಮೂಲದ ಅಕಾಶ್ ಕೈಲಾಶ್ ಕನೋಜಿಯಾ ತನ್ನ ಅಜ್ಜಿಯ ಆರೋಗ್ಯ ಹದಗೆಟ್ಟ ಕಾರಣ ಮುಂಬೈನಿಂದ ಚತ್ತೀಸಘಡದ ನೆಹ್ಲಾದಲ್ಲಿರುವ ಮನೆಗೆ ತೆರಳಿದ್ದರು. ಆದರೆ ಕೈಲಾಶ್ ಕನೋಜಿಯಾ, ಸಿಸಿಟಿವಿಯಲ್ಲಿ ಕಾಣಿಸಿಕೊಂಡ ಆರೋಪಿಗೆ ಹೋಲಿಕೆ ಇದೆ ಅನ್ನೋ ಕಾರಣಕ್ಕೆ ರೈಲ್ಪೆ ಪೊಲೀಸರು ದುರ್ಗ್ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು.

ಜನವರಿ 18 ರಂದು ಕನೋಜಿಯಾನನ್ನು ಬಂಧಿಸಲಾಗಿತ್ತು. ಬಳಿಕ ರೈಲ್ವೇ ಪೊಲೀಸರು ಕನೋಜಿಯಾನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದರು. ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆದ ಎರಡನೇ ದಿನಕ್ಕೆ ಆಕಾಶ್ ಕೈಲಾಶ್‌ನ್ನ ಪೊಲೀಸರು ವಶಕ್ಕೆ ಪಡೆದಿದ್ದರು.. ದುರಂತ ಅಂದರೆ ಅನುಮಾನದ ಮೇಲೆ ಕನೋಜಿಯಾನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೀಗಿರುವಾಗ ಈತನ ಫೋಟೋ, ವಿಡಿಯೋಗಳು ಎಲ್ಲೂ ಹೊರಬರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೊಲೀಸರ ಮೇಲಿತ್ತು. ಆದರೆ ಈತನ ಫೋಟೋಗಳು ಸೋಶಿಯಲ್ ಮೀಡಿಯಾ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು.

 

ಇತ್ತ ಮುಂಬೈ ಪೊಲೀಸರ ವಿಚಾರಣೆ ವೇಳೆ ತಪ್ಪಾಗಿ ಈತನ ವಶಕ್ಕೆ ಪಡೆಯಲಾಗಿದೆ ಅನ್ನೋದು ಅರಿವಾಗಿತ್ತು. ಹೀಗಾಗಿ ಕನೋಜಿಯಾನನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಕನೋಜಿಯಾ ಬದುಕಿನ ತಾಳತಪ್ಪಿತ್ತು. ಕಾರಣ ಈತನ ಫೋಟೋಗಳು, ವಿಡಿಯೋಗಳು ಎಲ್ಲೆಡೆ ಹರಿದಾಡಿತ್ತು. ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ಆರೋಪಿ ಎಂದು ಎಲ್ಲೆಡೆ ಸುದ್ದಿ ಹರಿದಾಡಿತ್ತು. ಅಜ್ಜಿಯ ಆರೋಗ್ಯ ವಿಚಾರಿಸಿ, ಕೆಲವೇ ತಿಂಗಳಲ್ಲಿ ಮದುವೆಯಾಗಲಿರುವ ತನ್ನ ಹುಡುಗಿಯನ್ನು ಭೇಟಿಯಾಗಲು ಹೋದ ಕನೋಜಿಯಾ ಕೆಲ ದಿನ ಪೊಲೀಸರ ವಶಕ್ಕೆ ಕಳೆಯಬೇಕಾಯಿತು. ಅಷ್ಟರಲ್ಲಿ ಈತನ ಮುಂಬೈನಲ್ಲಿನ ಕೆಲಸ ಕಳದುಕೊಳ್ಳಬೇಕಾಯಿತು.

ಆರೋಪಿಗಳಿಗೆ ತಮ್ಮ ಕಂಪನಿಯಲ್ಲಿ ಕೆಲಸವಿಲ್ಲ ಎಂದು ಖಾಸಗಿ ಕಂಪನಿ ಕನೋಜಿಯಾನನ್ನು ಅಮಾನತು ಮಾಡಿತ್ತು. ಇತ್ತ ಫಿಕ್ಸ್ ಆಗಿದ್ದ ಮದುವೆ ಕೂಡ ರದ್ದಾಗಿದೆ. ಈ ಘಟನೆ ಬಳಿಕ ಹುಡುಗಿ ಕುಟುಂಬಸ್ಥರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಈತ ಭೇಟಿಯಾಗಿ ಪರಿಸ್ಥಿತಿ ವಿವರಿಸಲು ಪ್ರಯತ್ನಿಸಿದ್ದಾನೆ. ಆದರೆ ಹುಡುಗಿ ಕುಟುಂಬಸ್ಥರು ಭೇಟಿಗೂ ಅವಕಾಶ ನೀಡಿಲ್ಲ. ಹೀಗಾಗಿ ಮುಂಬೈ ಪೊಲೀಸರು ನನ್ನ ಜೀವನ ಹಾಳು ಮಾಡಿದ್ದಾರೆಂದು ಅಳಲು ತೋಡಿಕೊಳ್ಳುತ್ತಿದ್ದಾನೆ.

ಬಾಂಗ್ಲಾ ಪ್ರಜೆ ಫಿಂಗರ್ ಪ್ರಿಂಟ್ ಕೂಡ ಮ್ಯಾಚ್ ಆಗುತ್ತಿಲ್ಲ

ಕನೋಜಿ ಆರೋಪಿ ಅಲ್ಲ ಗೊತ್ತಾಗುತ್ತಿದ್ದಂತೆಕ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹೆಜಾದ ಎಂಬುವವನ್ನು ಬಂಧಿಸಲಾಗಿತ್ತು. ಆದ್ರೀಗ ಸೈಫ್ ಅಲಿ ಖಾನ್ ಮನೆಯಲ್ಲಿ ಸಂಗ್ರಹಿಸಲಾಗಿದ್ದ ಫಿಂಗರ್ಪ್ರಿಂಟ್ಗಳ ಪೈಕಿ ಒಂದೂ ಮ್ಯಾಚ್ ಆಗುತ್ತಿಲ್ಲವಂತೆ. ಮುಂಬೈನ ಸಿಐಡಿ ಇಂತಹದ್ದೊಂದು ವರದಿಯನ್ನು ಒಪ್ಪಿಸಿದೆ. ಇದರಿಂದ ಮುಂಬೈ ಪೊಲೀಸ್‌ಗೆ ಹಿನ್ನೆಡೆಯಾಗಿದೆ. ಈ ಮೂಲಕ ಮುಂಬೈ ಪೊಲೀಸರು ನಿರಾಪರಾಧಿಗಳನ್ನ ಬಂಧಿಸುತ್ತಿದ್ದಾರಾ? ಎಂಬ ಪ್ರಶ್ನೆಗಳು ಕೂಡ ಮೂಡುತ್ತಿವೆ. ಮಿಡ್ ಡೇ ಮಾಡಿದ ವರದಿಯಲ್ಲಿ ಸೈಫ್ ಮನೆಯಲ್ಲಿ ಆರೋಪಿ ಶರೀಫುಲ್ ಫಿಂಗರ್ಫ್ರಿಂಟ್ಸ್ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಅಸಲಿಗೆ ಸೈಫ್ ಅಲಿ ಖಾನ್ ಇರಿತ ಪ್ರಕರಣದ ತನಿಖೆ ಎತ್ತ ಕಡೆ ಸಾಗುತ್ತಿದೆ? ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣದ ಬಳಿಕ ಮುಂಬೈ ಪೊಲೀಸರು ಕೃತ್ಯ ಎಸಗಿದವನನ್ನು ಹುಡುಕಾಡುವುದಕ್ಕೆ ಶತ ಪ್ರಯತ್ನ ಮಾಡಿದ್ದರು. ಸಿಸಿಟಿವಿ ಫುಟೇಜ್ ಅನ್ನು ಆಧರಿಸಿ ಹುಡುಕಾಟ ಶುರು ಮಾಡಿದ್ದರು. ಸುಮಾರು 40 ತಂಡಗಳು ದುಷ್ಕರ್ಮಿಯನ್ನು ಬಂಧಿಸುವುದಕ್ಕೆ ಮುಂದಾಗಿದ್ದರು.  ಬಳಿಕ ಶರೀಫ್ಫುಲ್ ಇಸ್ಲಾಂ ಅನ್ನು ಬಂಧಿಸಲಾಗಿತ್ತು. ಆದ್ರೀಗ ಫಿಂಗರ್‌ ಫ್ರಿಂಟ  ಮ್ಯಾಚ್ ಆಗದೇ ಇರೋದು ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ. ಒಟ್ಟು 19 ಫಿಂಗರ್ಫ್ರಿಂಟ್ಸ್ ಸ್ಯಾಂಪಲ್‌ಗಳನ್ನು ಸೈಫ್ ಅಲಿ ಖಾನ್ ಮನೆಯಿಂದ ಸಂಗ್ರಹಿಸಲಾಗಿತ್ತು. ಇವುಗಳಲ್ಲಿ ಒಂದೇ ಒಂದು ಫಿಂಗರ್ಫ್ರಿಂಟ್ ಕೂಡ ಆರೋಪಿ ಮ್ಯಾಚ್ ಆಗುತ್ತಿಲ್ಲ. ಈ ಬೆಳವಣಿಗೆ ಈಗ ಮುಂಬೈ ಪೊಲೀಸರು ಮೇಲೆ ಒತ್ತಡವನ್ನು ಹೆಚ್ಚಾಗುವಂತೆ ಮಾಡಿದೆ. ಈ ವಿಷಯ ಹೊರ ಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮುಂಬೈ ಪೊಲೀಸರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಬಂಧಿಸಿರುವ ಆರೋಪಿ ಶರೀಫುಲ್ ಅವರ ಫಿಂಗರ್ ಫ್ರಿಂಟ್‌ಗಳನ್ನ  ಸಿಐಡಿಯ ಫಿಂಗರ್ಪ್ರಿಂಟ್ಸ್ ಬ್ಯೂರೋದ ಪರೀಕ್ಷಾ ವಿಭಾಗಕ್ಕೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ಪರೀಕ್ಷೆ ಮಾಡಿದಾಗ, ಆರೋಪಿಯ ಫಿಂಗರ್ಫ್ರಿಂಟ್ಸ್ ಮ್ಯಾಚ್ ಆಗದೇ ಇರುವುದು ಬೆಳಕಿಗೆ ಬಂದಿದೆ. ಈ ವರದಿಯನ್ನು ಸಿಐಡಿ ಅಧೀಕ್ಷಕರಿಗೆ ರವಾನೆ ಮಾಡಲಾಗಿದೆ ಎಂದು ಮಿಡ್ ಡೇ ವರದಿಯನ್ನು ಮಾಡಿದೆ. ದುಷ್ಕರ್ಮಿ ಸೈಫ್ ಅಲಿ ಖಾನ್ ಮನೆಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಮುಖ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.  ಹೀಗಾಗಿ ಮುಂಬೈ ಪೊಲೀಸರು ಹಂಚಿದ್ದ ಫೋಟೊಗಳಲ್ಲಿ ಕ್ಲಾರಿಟಿ ಇರಲಿಲ್ಲ. ಹೀಗಾಗಿ ರೈಲ್ವೆ ಪೊಲೀಸರು ಕೂಡ ಗೊಂದಲಕ್ಕೆ ಒಳಗಾಗಿ ಬೇರೆ ಯಾರನ್ನೋ ಅರೆಸ್ಟ್ ಮಾಡಿರಬಹುದು ಎಂದು ಅಂದಾಹಿಸಲಾಗಿದೆ. ಸದ್ಯ ಆರೋಪಿಯ ಫಿಂಗರ್ಪ್ರಿಂಟ್ಸ್ ಮ್ಯಾಚ್ ಆಗದೇ ಇರುವುದು ಮುಂಬೈ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

 ಸೈಫ್ ಮೇಲೆ ಹೆಚ್ಚಾಯ್ತು ಅನುಮಾನ

ಅಟ್ಯಾಕ್ ಆಗಿದ್ರಿಂದ ಸೈಫ್ ಅಲಿ ಖಾನ್‌ ಬೆನ್ನು ಮೂಳೆಯ ಮೇಲೆ ತೀವ್ರ ಗಾಯ ಮತ್ತು ಕುತ್ತಿಗೆಯ ಮೇಲೆ ಗಾಯಗಳಾಗಿತ್ತು. ಹಲ್ಲೆಯಾದ ಕೂಡಲೇ ಅವರನ್ನು ಬಾಂದ್ರಾದಿಂದ ಲೀಲಾವತಿ ಆಸ್ಪತ್ರೆಗೆ  ಸೇರಿಲಾಹಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಅವರ ಬೆನ್ನುಮೂಳೆಯಲ್ಲಿ ಮುರಿದ ಚಾಕುವಿನ ಭಾಗವನ್ನು ಹೊರತೆಗೆದರು. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ರೆ ಸುಮಾರು ಒಂದು ವಾರದ ಸೈಫ್ ಅಲಿ ಖಾನ್ ಚಿಕಿತ್ಸಾ ವೆಚ್ಚ ₹36 ಲಕ್ಷ ಎಂದು ವರದಿಯಾಗಿದೆ. ಸೈಫ್ ಅಲಿ ಖಾನ್ ₹35.95 ಲಕ್ಷ ಆರೋಗ್ಯ ವಿಮಾ ಕ್ಲೇಮ್ ಮಾಡಿದ್ದಾರೆ ಎಂದು ಪ್ರಮುಖ ಆರೋಗ್ಯ ವಿಮಾ ಕಂಪನಿ ನಿವಾ ಬುಪಾ ತಿಳಿಸಿದೆ. ಕ್ಲೇಮ್ ಮಾಡಿದ್ದರಲ್ಲಿ ₹25 ಲಕ್ಷವನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದೆ. ಸಂಪೂರ್ಣ ಚಿಕಿತ್ಸೆಯ ನಂತರ ಅಂತಿಮ ಬಿಲ್‌ಗಳನ್ನು ಸಲ್ಲಿಸಿದ ನಂತರ ಉಳಿದ ಮೊತ್ತವನ್ನು ಪಾವತಿಸಲಾಗುವುದು ಎಂದು ನಿವಾ ಬುಪಾ ಹೇಳಿದೆ. ಸೈಫ್ ಆರೋಗ್ಯ ವಿಮಾ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಚಿಕಿತ್ಸಾ ವೆಚ್ಚ, ಅವರ ಬಿಡುಗಡೆ ದಿನಾಂಕಗಳ ವಿವರಗಳನ್ನು ಬಹಿರಂಗಪಡಿಸಿದೆ. ಈ ವಿಷಯದ ಬಗ್ಗೆ ಮುಂಬೈನ ವೈದ್ಯಕೀಯ ತಜ್ಞರ ಸಂಸ್ಥೆ ‘ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್’ ಸೈಫ್ ವಿಮಾ ಕ್ಲೇಮ್‌ಗಳನ್ನು ಪ್ರಶ್ನಿಸಿದೆ. ಸೈಫ್ ವಿಮೆಯನ್ನು ಬೇಗನೆ ಅನುಮೋದಿಸಿದ ವಿಧಾನವನ್ನು ಪ್ರಶ್ನಿಸಿ ವೈದ್ಯಕೀಯ ತಜ್ಞರ ಸಂಸ್ಥೆ ವಿಮಾ ನಿಯಂತ್ರಣ ಸಂಸ್ಥೆ IRDAI ಗೆ ಪತ್ರ ಬರೆದಿದೆ. ‘‘ಸೈಫ್ ಅಲಿ ಖಾನ್ ಅವರಿಗೆ ತಮ್ಮ ವಿಮಾ ಪಾಲಿಸಿಯಡಿಯಲ್ಲಿ ನಗದು ರಹಿತ ಚಿಕಿತ್ಸೆಗಾಗಿ ₹25 ಲಕ್ಷ ಮಂಜೂರು ಮಾಡಲಾಗಿದೆ ಎಂಬ ಇತ್ತೀಚಿನ ವರದಿಗಳ ಬಗ್ಗೆ ನಮ್ಮ ಕಳವಳ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಲು ಪತ್ರ ಬರೆಯುತ್ತಿದ್ದೇವೆ. ಸಾಮಾನ್ಯ ಪಾಲಿಸಿದಾರರೊಂದಿಗೆ ಹೋಲಿಸಿದರೆ ಸೈಫ್ ಅಲಿ ಖಾನ್‌ಗೆ ಹೆಚ್ಚಿನ ಆದ್ಯತೆ ನೀಡಿದಂತೆ ಕಾಣುತ್ತಿದೆ’’ ಎಂದು ಹೇಳಿದೆ. ಇದು ಸೆಲೆಬ್ರಿಟಿಗಳು, ಗಣ್ಯ ವ್ಯಕ್ತಿಗಳು, ಕಾರ್ಪೊರೇಟ್ ಪಾಲಿಸಿ ಹೊಂದಿರುವವರಿಗೆ ಅನುಕೂಲಕರ ನಿಯಮಗಳು, ಹೆಚ್ಚಿನ ನಗದು ರಹಿತ ಚಿಕಿತ್ಸಾ ಮಿತಿಗಳನ್ನು ಪಡೆಯುತ್ತಿದ್ದಾರೆ, ಆದರೆ ಸಾಮಾನ್ಯ ನಾಗರಿಕರು ಸಾಕಷ್ಟು ಕವರೇಜ್, ಕಡಿಮೆ ಮರುಪಾವತಿ ದರಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವೈದ್ಯರ ಸಂಸ್ಥೆ ಹೇಳಿದೆ. ಸೈಫ್ ಅಲಿ ಖಾನ್ ಆರೋಗ್ಯ ವಿಮೆ ಸಾಮಾನ್ಯರು ಮತ್ತು ಗಣ್ಯರ ನಡುವೆ ಅನ್ಯಾಯದ ಅಸಮಾನತೆಯನ್ನು ಸೃಷ್ಟಿಸುತ್ತಿದೆ ಎಂದು ಮೆಡಿಕಲ್ ಕನ್ಸಲ್ಟೆಂಟ್ಸ್ ಅಸೋಸಿಯೇಷನ್ ಹೇಳಿದೆ. ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ವಿಮೆ ಎಲ್ಲರಿಗೂ ರಕ್ಷಣೆಯಾಗಿರಬೇಕು ಎಂದು ಬಯಸುತ್ತೇವೆ ಎಂದು ತಿಳಿಸಿದೆ. ಈ ವಿಷಯವನ್ನು ತನಿಖೆ ಮಾಡಬೇಕು ಮತ್ತು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಪಾಲಿಸಿದಾರರನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಸಂಸ್ಥೆ IRDAI ಅನ್ನು ಒತ್ತಾಯಿಸಿದೆ. ಒಟ್ನಲ್ಲಿ ಸೈಫ್ ಅಲಿ ಖಾನ್ ಕೇಸ್‌ನಲ್ಲಿ ಸಾಕಷ್ಟು ಗೊಂದಲಗಳಿದ್ದು, ಪೊಲೀಸರು ಆದಷ್ಟು ಬೇಗ ಈ  ಸಮಸ್ಯೆಗಳಿಗೆ ಹಾರ ನೀಡಬೇಕಿದೆ.

Kishor KV