ಗಂಭೀರ್‌ಗೆ BCCI ಸಪೋರ್ಟ್- ಪಡಿಕ್ಕಲ್ ಶತಕ ಜಸ್ಟ್ ಮಿಸ್

ಗಂಭೀರ್‌ಗೆ BCCI ಸಪೋರ್ಟ್-   ಪಡಿಕ್ಕಲ್ ಶತಕ ಜಸ್ಟ್ ಮಿಸ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು  

BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ ವೈಭವ್ ಸೂರ್ಯವಂಶಿ ಅವರ ಭಾರತ ತಂಡದ ಪದಾರ್ಪಣೆಯಲ್ಲಿನ ವಿಳಂಬದ ಕುರಿತಾದ ಚರ್ಚೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ನಿರ್ಧಾರವನ್ನು ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಕೋಚ್ ಗೌತಮ್ ಗಂಭೀರ್ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ  ವೈಭವ್ ಸೂರ್ಯವಂಶಿ ಪ್ರತಿಭಾವಂತರಾಗಿದ್ದರೂ, ಅವರು ತಮ್ಮ ಅವಕಾಶಕ್ಕಾಗಿ ಕಾಯಲೇಬೇಕಾಗುತ್ತದೆ ಎಂದು ಶುಕ್ಲಾ ಹೇಳಿದ್ದಾರೆ. ಈ ಮೂಲಕ ಬಿಸಿಸಿಐ ಕೋಚ್ ಗೌತಮ್‌ಗೆ ಸಪೋರ್ಟ್ ಮಾಡಿದೆ.

ಇದನ್ನೂ ಓದಿ: ಸೂರ್ಯವಂಶಿಗಾಗಿ ಲೆಜೆಂಡರ್ಸ್ WAR – ಆಡಿದ್ರೂ ಕಷ್ಟ.. ಆಡದಿದ್ರೂ ನಷ್ಟ ಹೇಗೆ?

ವೈಭವ್ ಸೂರ್ಯವಂಶಿಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು ಇಂಗ್ಲೆಂಡ್ ವಿರುದ್ಧದ  ಪಂದ್ಯದಲ್ಲಿ ಚಾನ್ಸ್ ಸಿಗಲಿದ್ಯಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಅವರ ಖಾತೆಯಲ್ಲಿ ವೈಭವ್ ತಮ್ಮ ಫೋಟೋ ಹಾಕಿ ನ್ಯೂ ಚಾಪ್ಟರ್ ಅಂತ ಪೋಸ್ಟ್ ಹಾಕಿದ್ದಾರೆ. ಇದ್ದನ್ನ ನೋಡಿದವರು ವೈಭವ್‌ಗೆ ಪ್ಲೆಯಿಂಗ್ 11ನಲ್ಲಿ ಚಾನ್ಸ್ ಸಿಗಲಿದೆ, ಅದ್ದಕ್ಕೆ ಈ ತರ ಪೋಸ್ಟ್  ಹಾಕಿದ್ದಾರೆ ಅಂತ ಚರ್ಚಿಸುತ್ತಿದ್ದಾರೆ.

ಸಾಯಿ ಸುದರ್ಶನ್ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಶತಕ ಗಳಿಸಿ ಮಿಂಚಿದ್ದಾರೆ. ಐಪಿಎಲ್‌ನಿಂದಲೂ ಉತ್ತಮ ಫಾರ್ಮ್‌ನಲ್ಲಿರುವ ಅವರು, ರೆಡ್-ಬಾಲ್ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಅಮೋಘ ಸಾಧನೆ ಮಾಡಿದ ಅವರು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10 ಶತಕಗಳನ್ನು ಪೂರೈಸಿದ್ದಾರೆ. ಇದರಿಂದ ಭಾರತ ಟೆಸ್ಟ್ ತಂಡದಲ್ಲಿ ಅವರಿಗೆ ಸ್ಥಾನ ಸಿಗುವ ಭರವಸೆ ಮೂಡಿದೆ.

ಭಾರತ ಎ ಪರ ಆರ್‌ಸಿಬಿ ಸ್ಟಾರ್ ಬ್ಯಾಟ್ಸಮನ್ ದೇವತ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು, ಬಿಸಿಸಿಐ ಗಮನ ಸೆಳೆಯುತ್ತಿದ್ದಾರೆ. ಶ್ರೀಲಂಕಾ A ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆರ್‌ಸಿಬಿ  ಸ್ಟಾರ್ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಗಳಿಸುವ ಸಮೀಪ ಬಂದರು. ಆದ್ರೆ ಶತಕ ಬಾರಿಸೋ ಟೈಂನಲ್ಲಿ ತಪ್ಪಾದ ಹೊಡೆತದಿಂದಾಗಿ ಪಡಿಕ್ಕಲ್ ಔಟಾದರು. ಪಡಿಕ್ಕಲ್ 152 ಎಸೆತಗಳಲ್ಲಿ 94 ರನ್ ಗಳಿಸಿ ಪೆವಿಲಿಯನ್‌ಗೆ ಸೇರಿದ್ದು, ಟೀಮ್ ಇಂಡಿಯಾ ಬಾಗಿಲು ತಟ್ಟಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ಏಕದಿನ ಕ್ರಿಕೆಟ್‌ಗೆ ಭವಿಷ್ಯ ಇಲ್ಲ ಅನ್ನೋ ರೀತಿಯ ಹೇಳಿಕೆ  ಬಗ್ಗೆ ಆಂತಕ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕ್ರಿಕೆಟ್ ಅನ್ನು ಜಾಗತಿಕವಾಗಿ ವಿಸ್ತರಿಸಲು ಟಿ20 ಸ್ವರೂಪ ಮಾತ್ರ ಸೂಕ್ತ. ಕ್ರಿಕೆಟ್ ಅನ್ನು ಜಾಗತಿಕ ಕ್ರೀಡೆಯನ್ನಾಗಿ ಮಾಡುವ ಐಸಿಸಿಯ ಮಹತ್ವಾಕಾಂಕ್ಷೆಗಳಿಗೆ ಈ ಸ್ವರೂಪ ನಿರ್ಣಾಯಕವಾಗಿದೆ ಎಂದು ಅಶ್ವಿನ್ ಹೇಳಿದ್ದಾರೆ. ಏಕದಿನ ಪಂದ್ಯಗಳ ಜನಪ್ರಿಯತೆ ಕುಸಿಯಲು ಕಾರಣವಾಗಿದೆ ಮತ್ತು ಈ ಸ್ವರೂಪವು ವಿಶ್ವಕಪ್‌ಗೆ ಸೀಮಿತವಾಗಿದೆ ಎಂದಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಫೈಟ್ ನಾಳೆ ನಡೆಯಲಿದ್ದು, ಇಂಗ್ಲೆಂಡ್ ಮಹಿಳಾ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡ  ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯೋಕೆ ರೋಚಕ ಕಾದಾಟ ನಡೆಸಲಿವೆ. ಟಿ20 ಮಹಿಳಾ ವಿಶ್ವಕಪ್‌ನಲ್ಲಿ 6 ಬಾರಿ ಆಸೀಸ್ ಚಾಂಪಿಯನ್ ಆಗಿದ್ದು, 7ನೇ ಬಾರಿಗೆ ಕಪ್ ಎತ್ತಿ ಹಿಡಿಯಲು ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ರೋಚಕ ಪಂದ್ಯ ನಾಳೆ ರಾತ್ರಿ 8 ಗಂಟೆಗೆ ಆರಂಭ ಆಗಲಿದೆ.

ಭಾರತದಲ್ಲಿ ಐತಿಹಾಸಿಕ ಬಿಗ್ ಬ್ಯಾಷ್ ಲೀಗ್ ಪಂದ್ಯ ಘೋಷಣೆ  ಮಾಡೋ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಸಿಡ್ನಿಗೆ ಭೇಟಿ ನೀಡುವ ಸಂದರ್ಭದಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಮೊದಲ ಬಾರಿಯ ಬಿಗ್ ಬ್ಯಾಷ್ ಲೀಗ್ ಪಂದ್ಯವನ್ನು ಘೋಷಿಸುವ ನಿರೀಕ್ಷೆಯಿದೆ. ಡಿಸೆಂಬರ್ 12 ರಂದು ಚೆನ್ನೈ ಐತಿಹಾಸಿಕ ಸೀಸನ್‌ ಉದ್ಘಾಟನಾ ಪಂದ್ಯವನ್ನು ಆಯೋಜಿಸುವ ಸಾಧ್ಯತೆಯಿದ್ದು,  ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ ಎನ್ನಲಾಗ್ತಿದೆ.

 

Kishor KV

Leave a Reply

Your email address will not be published. Required fields are marked *