ಫಸ್ಟ್ ಮ್ಯಾಚಲ್ಲೇ ಸುದರ್ಶನ್ ಶೂನ್ಯ – ಸುದರ್ಶನ್‌ಗೆ ಲಕ್ ಕೈ ಕೊಡ್ತಾ?
ಮೊದಲ ಪಂದ್ಯದಲ್ಲೇ ಎಡವಿದವರೆಷ್ಟು?

ಫಸ್ಟ್ ಮ್ಯಾಚಲ್ಲೇ ಸುದರ್ಶನ್ ಶೂನ್ಯ – ಸುದರ್ಶನ್‌ಗೆ ಲಕ್ ಕೈ ಕೊಡ್ತಾ?ಮೊದಲ ಪಂದ್ಯದಲ್ಲೇ ಎಡವಿದವರೆಷ್ಟು?

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಒಳ್ಳೆಯಚಾನ್ಸ್ ಸಿಕ್ಕಿತ್ತು.. ಬಟ್ ಅವರಿಗೆ ಲಕ್ ಕೈ ಹಿಡಿದಂತೆ ಕಾಣಲಿಲ್ಲ.. ಹೌದು ಕರುಣ್ ನಾಯರ್ ಉತ್ತಮ ಫಾರ್ಮ್‌ನಲ್ಲಿರುವ ಕಾರಣ 23 ವರ್ಷದ ಸುದರ್ಶನ್ ಅವರಿಗೆ ಪ್ಲೇಯಿಂಗ್ XI ನಲ್ಲಿ ಅವಕಾಶ ಸಿಗುತ್ತದೆಯೇ ಅಥವಾ ಇಲ್ಲವೇ ಅನ್ನೋ ಸಂದೇಹವಿತ್ತು. ಆದರೆ ತಂಡದ ಆಡಳಿತ ಮಂಡಳಿ ಸಾಯಿ ಮೇಲೆ ವಿಶ್ವಾಸ ಹೊಂದಿದ್ದು ಅವರಿಗೆ ಟೆಸ್ಟ್ ಕ್ಯಾಪ್ ನೀಡಲಾಯಿತು. ಕರುಣ್ ನಾಯರ್ ಅವರಿಗೆ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಅವಕಾಶ ನೀಡಿ, ಸಾಯಿ ಸುದರ್ಶನ್‌ಗೆ 3ನೇ ಸ್ಥಾನದಲ್ಲಿ ಅವಕಾಶ ನೀಡಲಾಯ್ತು. ಆದ್ರೆ ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಪೂಜಾರರಂತಹ ದಿಗ್ಗಜರು ಆಡಿದ್ದ ಸ್ಥಾನದಲ್ಲಿ ಆಡುವ ಒತ್ತಡವನ್ನ ಸಾಯಿ ಸುದರ್ಶನ್ ಎದುರಿಸಿದರು. ಆದರೆ, ಕೆ.ಎಲ್. ರಾಹುಲ್ 42 ರನ್‌ಗೆ ಔಟಾದ ತಕ್ಷಣ ಕ್ರೀಸ್‌ಗೆ ಬಂದ ಸಾಯಿ, ಬೆನ್ ಸ್ಟೋಕ್ಸ್‌ರ ಚಾಣಾಕ್ಷ ಬೌಲಿಂಗ್‌ಗೆ ಬಲಿಯಾದರು. ಸಾಯಿ, ಲೆಗ್ ಸೈಡ್‌ನಲ್ಲಿ ಗ್ಲಾನ್ಸ್ ಆಡಲು ಯತ್ನಿಸಿದಾಗ, ಎಸೆತವು ಬ್ಯಾಟ್‌ನ ತುದಿಗೆ ತಾಗಿ ವಿಕೆಟ್ ಕೀಪರ್ ಜೇಮೀ ಸ್ಮಿತ್‌ಗೆ ಕ್ಯಾಚ್ ಒಡ್ಡಿತು. ಕೇವಲ 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದ ಸಾಯಿ, ಭಾರತವನ್ನು 92/2 ಸ್ಥಿತಿಗೆ ತಂದರು. ಇಲ್ಲಿ ಸಾಯಿ ಸುದರ್ಶನ್ ಆಡಿಲ್ಲ ಅನ್ನೋಗಿಂತ ಹೆಚ್ಚಾಗಿ ಲಕ್ ಕೈ ಕೊಡ್ತು ಅಂತಾನೇ ಹೇಳಬಹುದು..

ಸುದರ್ಶನ್​ಗೆ ಅವಕಾಶ ನೀಡಲು ಕಾರಣವೇನು? 

ವಾಸ್ತವವಾಗಿ ಸಾಯಿ ಸುದರ್ಶನ್ ಅವರಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಆದರೆ ಇದರ ಹೊರತಾಗಿಯೂ ಅವರಿಗೆ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶ ನೀಡಲಾಗಿದೆ. ಇದಕ್ಕೆ ಕಾರಣ ಸುದರ್ಶನ್ ಚೆಂಡನ್ನು ತಡವಾಗಿ ಆಡುವುದರಲ್ಲಿ ನಿಸ್ಸೀಮರು ಹಾಗೆಯೇ ದೀರ್ಘ ಇನ್ನಿಂಗ್ಸ್‌ಗಳನ್ನು ಆಡುವುಲ್ಲಿ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಇವರಿಗೆ  ಟೆಸ್ಟ್‌ನಲ್ಲಿ ಅವಕಾಶ ನೀಡಲಾಗಿದೆ. ಒಳ್ಳೆಯ ಅವಕಾಶ ಸಿಕ್ಕಿದ್ರೂ ಸುದರ್ಶನ್ ಮೊದಲ ಇನ್ನಿಂಗ್ಸ್​ನಲ್ಲಿ ನಿರಾಶೆ ಮೂಡಿಸಿದ್ದಾರೆ. ಸುದರ್ಶನ್ ಇಲ್ಲಿಯವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 7 ಶತಕಗಳನ್ನು ಬಾರಿಸಿದ್ದು 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಸುದರ್ಶನ್ ಆಯ್ಕೆಗೆ ಮತ್ತೊಂದು ಮುಖ್ಯ ಕಾರಣವೆಂದರೆ ಇತ್ತೀಚೆಗೆ ಮುಗಿದ ಐಪಿಎಲ್​ನಲ್ಲಿ ಅವರ ಪ್ರದರ್ಶನ. ಗುಜರಾತ್ ಪರ ಆರಂಭಿಕನಾಗಿ ಅಮೋಘ ಪ್ರದರ್ಶನ ನೀಡಿದ್ದ ಸುದರ್ಶನ್, ಟೂರ್ನಿಯಲ್ಲಿ 759 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು.  ಆದ್ರೆ  ಸಾಯಿ ಸುದರ್ಶನ್‌ರ ಈ ಶೂನ್ಯ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಘಟನೆಯಾಗಿದೆ. ಭಾರತದ ಟಾಪ್-3 ಬ್ಯಾಟರ್‌ಗಳ ಪೈಕಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ಸಾಯಿ ಈಗ ಸೇರಿಕೊಂಡಿದ್ದಾರೆ.

1981 ರಲ್ಲಿ ಮೊದಲ ಇನ್ನಿಂಗ್ಸ್​​ನಲ್ಲೇ ಕೃಷ್ಣಮಾಚಾರಿ ಶ್ರೀಕಾಂತ್  ವಾಂಖೆಡೆಯಲ್ಲಿ ಔಟಾದ್ರೆ, ದೇವಾಂಗ್ ಗಾಂಧಿ ಮೊಹಾಲಿಯಲ್ಲಿ  1999 ರಲ್ಲಿ ಔಟಾದ್ರು. ವಿಜಯ್ ಭಾರಧ್ವಜ್  1999, ಮೊಹಾಲಿ  ಮತ್ತು ಈಗ ಸಾಯಿ ಸುದರ್ಶನ್  2025, ಲೀಡ್ಸ್  ಶೂನ್ಯಕ್ಕೆ ಔಟ ಆಗಿದ್ದಾರೆ. )  ಉಮೇಶ್ ಯಾದವ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶೂನ್ಯಕ್ಕೆ ಔಟಾಗಿದ್ದರು. ಇದೀಗ 4 ವರ್ಷಗಳ ನಂತರ ಸಾಯಿ ಈ ಪಟ್ಟಿಗೆ ಸೇರಿದ್ದಾರೆ. ಒಟ್ಟಾರೆಯಾಗಿ ಪದಾರ್ಪಣೆ ಟೆಸ್ಟ್​ ಪಂಧ್ಯದಲ್ಲಿ ಡಕ್ ಔಟ್ ಆದ ಭಾರತದ 29ನೇ ಆಟಗಾರರಾಗಿದ್ದಾರೆ. ಒಟ್ನಲ್ಲಿ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ್ರು ಮುಂದಿನ ಪಂದ್ಯಗಳಲ್ಲಿ ತನ್ನ ತಾಕತ್ತನ್ನ ಸಾಬೀತು ಪಡಿಸಿಕೊಳ್ಳಬಹುದು..

Kishor KV