‘ಸೀತೆ’ಯಾಗಿ ಬಾಲಿವುಡ್‌ಗೆ ‘ಸಾಯಿ ಪಲ್ಲವಿ’ ಬಿಗ್ ಎಂಟ್ರಿ

‘ಸೀತೆ’ಯಾಗಿ ಬಾಲಿವುಡ್‌ಗೆ  ‘ಸಾಯಿ ಪಲ್ಲವಿ’ ಬಿಗ್ ಎಂಟ್ರಿ

ಪಿಂಪಲ್ ಮತ್ತು ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಈಗ ಬಿಟೌನ್‌ ಕಡೆ ಮುಖ ಮಾಡಿದ್ದಾರೆ. ಗುಂಗುರು ಕೂದಲ ಚೆಲುವೆ ಸಾಯಿ ಪಲ್ಲವಿ ಗಾರ್ಗಿ ಚಿತ್ರದ ನಂತರ ಸ್ವಲ್ಪ ಬ್ರೇಕ್ ಪಡೆದಿದ್ದು, ಈಗ ಬಾಲಿವುಡ್‌ ಸಿನಿಮಾದಲ್ಲಿ ನಟಿಸಲಿದ್ದಾರೆ. ರೌಡಿ ಬೇಬಿ ನಟಿಸಿದ ಸಿನಿಮಾ ಹಿಟ್ ಆಗುತ್ತೋ ಇಲ್ವೋ.. ಆದರೆ, ತನ್ನ ನಟನೆಯಲ್ಲೇ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯೋ ಸಾಯಿ ಪಲ್ಲವಿ ಈಗ ಸೀತಾ ಮಾತೆಯ ಪಾತ್ರ ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ :  ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ‘ಡಿವೈನ್ ಸ್ಟಾರ್’ ಪೂಜೆ

ಬಹುಭಾಷೆಯಲ್ಲಿ ತೆರೆಕಂಡಿದ್ದ ಗಾರ್ಗಿ ಸಿನಿಮಾ ಅಷ್ಟೇನು ಯಶಸ್ಸು ಕಾಣದಿದ್ದರೂ ಸಾಯಿಪಲ್ಲವಿ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದ ಸಾಯಿಪಲ್ಲವಿ ನಟನೆಯನ್ನು ಎಲ್ಲರೂ ಕೊಂಡಾಡಿದ್ದರು. ಇದಾದ ನಂತರ ಸ್ವಲ್ಪ ಸಮಯ ಯಾವ ಸಿನಿಮಾದಲ್ಲೂ ಕೆಲಸ ಮಾಡಿರಲಿಲ್ಲ. ಇದೀಗ ಸಾಯಿಪಲ್ಲವಿ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ. ನಿರ್ಮಾಪಕ ಮಧು ಮಂತೇನಾ ನಿರ್ಮಾಣದಲ್ಲಿ ರಾಮಾಯಣ ಮಹಾಕಾವ್ಯವನ್ನು ತೆರೆ ಮೇಲೆ ತರಲಾಗುತ್ತಿದೆ. ಇದರಲ್ಲಿ ಸೀತೆಯಾಗಿ ಸಾಯಿಪಲ್ಲವಿ ನಟಿಸುತ್ತಿದ್ದಾರೆ. ಮೊದಲು ಸೀತೆಯ ಪಾತ್ರಕ್ಕೆ ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆಯ ಹೆಸರು ಕೇಳಿಬರ್ತಿತ್ತು. ಈಗ ಸಾಯಿಪಲ್ಲವಿ ನಟಿಸುವುದು ಪಕ್ಕಾ ಆಗಿದೆ. ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್ ಮತ್ತು ರಾವಣನ ಪಾತ್ರಕ್ಕೆ ಹೃತಿಕ್ ರೋಷನ್ ನಟಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 2023ರಲ್ಲಿ ಸಿನಿಮಾ ಸೆಟ್ಟೇರಲಿದೆ.

suddiyaana