ಗಾನ ಕೋಗಿಲೆ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ – ಎಂ.ಎಸ್. ಸುಬ್ಬಲಕ್ಷ್ಮಿಯಾಗಿ ತೆರೆಮೇಲೆ ಸಾಯಿಪಲ್ಲವಿ

ಗಾನ ಕೋಗಿಲೆ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ – ಎಂ.ಎಸ್. ಸುಬ್ಬಲಕ್ಷ್ಮಿಯಾಗಿ ತೆರೆಮೇಲೆ ಸಾಯಿಪಲ್ಲವಿ

ನ್ಯಾಚುರಲ್ ಬ್ಯೂಟಿ, ಡಿಂಪಲ್ ಬೆಡಗಿ ಸಾಯಿ ಪಲ್ಲವಿ ತೆರೆ ಮೇಲೆ ಗಾನಕೋಗಿಲೆಯಾಗಿ ಮೆರೆಯಲಿದ್ದಾರೆ. ಬಾಲಿವುಡ್ ಸಿನಿಮಾದಲ್ಲಿ ಸೀತೆಯಾಗಿ ನಟಿಸುತ್ತಿರುವ ಸಾಯಿ ಪಲ್ಲವಿ ಈಗ ದೇಶ ಮೆಚ್ಚಿದ ಗಾಯಕಿ ಎಂ.ಎಸ್ ಸುಬ್ಬುಲಕ್ಷ್ಮಿಯವರ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಇದನ್ನೂ ಓದಿ:ಡೆವಿಲ್‌ಗಾಗಿ ದರ್ಶನ್‌ ಪತ್ನಿ ಥಿಯೇಟರ್‌ ರೌಂಡ್ಸ್!‌ – ವಾರಾಂತ್ಯ ಚಿತ್ರಮಂದಿರಗಳಿಗೆ ವಿಜಯಲಕ್ಷ್ಮೀ ಭೇಟಿ   

ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಯಾವ ರೀತಿಯ ಪಾತ್ರ ಕೊಟ್ಟರು ನ್ಯಾಯ ನೀಡಬಲ್ಲ ಅದ್ಭುತ ಕಲಾವಿದೆ. ತನ್ನ ಅದ್ಬುತವಾದ ನಟನೆಯಿಂದಲೇ ಗಮನಸೆಳೆದಿರುವ ಸಾಯಿ ಪಲ್ಲವಿ ಇದೀಗ ಗಾನಕೋಗಿಲೆಯಾಗಿ ತೆರೆ ಮೇಲೆ ಬರಲಿದ್ದಾರೆ. ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಮೂವಿ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇದರ ನಡುವೆ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಪ್ರತೀ ವಿಭಿನ್ನ ಕಥೆಯೊಂದಿಗೆ ಪರದೆ ಮೇಲೆ ಬರುವ ಸಾಯಿ ಪಲ್ಲವಿ ಈ ಬಾರಿ ಕೂಡಾ ಜನ ಮೆಚ್ಚಿದ ಗಾಯಕಿಯಾಗಿ ತೆರೆ ಮೇಲೆ ಬರಲಿದ್ದಾರೆ. ಕರ್ನಾಟಕ ಸಂಗೀತ ಗಾಯಕಿಯಾಗಿ ದೇಶವೇ ಮೆಚ್ಚಿಕೊಂಡ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನ ಚರಿತ್ರೆ ಸಿನಿಮಾದಲ್ಲಿ ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಸಿನಿಮಾವನ್ನು ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾವನ್ನು ಗೌತಮ್ ತಿನರೂರಿ ನಿರ್ದೇಶನ ಮಾಡಲಿದ್ದಾರೆ. ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ ಭಾರತೀಯ ಸಂಗೀತ ಇತಿಹಾಸದಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿ ಅವರದು ಅವಿಸ್ಮರಣೀಯ ಹೆಸರು. ಅವರು ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಾಡಿದ ಮೊದಲ ಭಾರತೀಯ ಮತ್ತು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು. ಹಾಗೆಯೇ 1930 ಮತ್ತು 40 ರ ದಶಕಗಳಲ್ಲಿ ಅವರು ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದರು ಮತ್ತು ಸಂಗೀತ ಮತ್ತು ಸಿನಿಮಾವನ್ನು ಸಂಯೋಜಿಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು. ಹಿರಿಯ ಗಾಯಕಿಯೊಬ್ಬರ ಜೀವನ ಚರಿತ್ರೆಯನ್ನು ಪರದೆಯ ಮೇಲೆ ಪರಿಚಯಿಸುವ ಪ್ರಯತ್ನ ಇದಾಗಿದೆ.

Sulekha