ಜುಲೈ 31 ರವರೆಗೆ ನಾಗರಹೊಳೆ ವಲಯದಲ್ಲಿ ಸಫಾರಿ ಬಂದ್‌!

ಜುಲೈ 31 ರವರೆಗೆ ನಾಗರಹೊಳೆ ವಲಯದಲ್ಲಿ ಸಫಾರಿ ಬಂದ್‌!

ಹುಣಸೂರು: ಸಫಾರಿ ಪ್ರಿಯರೇ ನಿಮಗೊಂದು ಮಹತ್ವದ ಮಾಹಿತಿ ಇದೆ. ನಾಗರಹೊಳೆ ಉದ್ಯಾನವನದಲ್ಲಿ ಜು.31 ರವರೆಗೆ ನಾಗರಹೊಳೆ ವನ್ಯಜೀವಿ ವಲಯಕ್ಕೆ ಸಫಾರಿ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಉದ್ಯಾನವನದ ಎಲ್ಲ ವಲಯಗಳಲ್ಲೂ ಉತ್ತಮ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ನಾಗರಹೊಳೆ ಸಫಾರಿ ಲೈನ್‌ಗಳಲ್ಲಿ ಮರಗಳು ಬಿದ್ದಿರುವುದರಿಂದ ಜೊತೆಗೆ ಮಳೆಯಿಂದಾಗಿ ಸಫಾರಿ ರಸ್ತೆಗಳಲ್ಲಿ ವಾಹನ ಸಂಚಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜು.31ರವರೆಗೆ ನಾಗರಹೊಳೆ ವನ್ಯಜೀವಿ ವಲಯಕ್ಕೆ ಸಫಾರಿ ಹೋಗುವುದನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಪ್ರಯಾಣಿಸುವಾಗ ಎಚ್ಚರ.. ಘಾಟಿಯ 34 ಕಡೆಗಳಲ್ಲಿ ಭೂ ಕುಸಿತ ಭೀತಿ!

ವನ್ಯಧಾಮ ವೀಕ್ಷಣೆಗೆ ಬರುವ ವನ್ಯಪ್ರಿಯರ ಸುರಕ್ಷತೆಯ ಹಿತದೃಷ್ಟಿಯಿಂದ ನಾಗರಹೊಳೆ ವನ್ಯಜೀವಿ ವಲಯದ ನಾಣಚ್ಚಿ ಗೇಟ್ ಹಾಗೂ ವೀರನಹೊಸಹಳ್ಳಿ ಗೇಟ್‌ನಿಂದ ಆರಂಭಗೊಳ್ಳುತ್ತಿದ್ದ ಸಫಾರಿಯನ್ನು  ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಆದರೆ ನಾಗರಹೊಳೆ ಉದ್ಯಾನ ವ್ಯಾಪ್ತಿಯ ದಮ್ಮನಕಟ್ಟೆ(ಕಾಕನಕೋಟೆ) ಸಫಾರಿ ಕೇಂದ್ರವು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

suddiyaana