ಹೆಣ್ಣುಮಕ್ಕಳನ್ನು ಸರಕಿನಂತೆ ಮಾರಾಟ ಮಾಡುವುದು ವಿಪರ್ಯಾಸ – ಬಾಂಬೆ ಹೈಕೋರ್ಟ್

ಹೆಣ್ಣುಮಕ್ಕಳನ್ನು ಸರಕಿನಂತೆ ಮಾರಾಟ ಮಾಡುವುದು ವಿಪರ್ಯಾಸ – ಬಾಂಬೆ ಹೈಕೋರ್ಟ್

ಹೆಣ್ಣು ಮಗು ಎಂಬ ಕಾರಣಕ್ಕೆ ಕೆಲವರು ಹೆತ್ತ ಮಗುವನ್ನು ಬೀದಿಯಲ್ಲಿ ಬಿಟ್ಟು ಹೋಗುತ್ತಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಬಡತನವಿದೆ, ಮಗುವನ್ನು ಸಾಕುವಷ್ಟು ಶಕ್ತಿ ಇಲ್ಲಾ ಅಂತಾ ಮಾರಾಟ ಮಾಡುತ್ತಾರೆ. ಇಂತಹ ಸಾಕಷ್ಟು ಸುದ್ದಿಗಳನ್ನು ನಾವು ಕೇಳಿದ್ದೇವೆ. ಇದೀಗ ಇಂತಹದ್ದೇ ವಿಚಿತ್ರ ಘಟನೆ ಮಹಾರಾಷ್ಟ್ರದ ಸತಾರದಲ್ಲಿ ನಡೆದಿದೆ. ಮಹಿಳೆಯೊಬ್ಬಳು ಹಣದ ಅವಶ್ಯಕತೆ ಇದೆ ಎಂದು ಒಂದು ವರ್ಷದ ಮಗುವನ್ನೇ ಇನ್ನೊಂದು ಮಹಿಳೆಗೆ ನೀಡಿದ್ದಾಳೆ.

ಇದನ್ನೂ ಓದಿ: ಆಟವಾಡುತ್ತಿದ್ದ ಬಾಲಕನ ಮೇಲೆರಗಿತ್ತು ಚಿರತೆ – ಕುಡುಗೋಲಿನಲ್ಲೇ ಮಗುವನ್ನ ರಕ್ಷಿಸಿದ್ದೇಗೆ ತಾಯಿ..!?

ಮಗುವಿನ ಗಂಡ ಜೈಲಿನಲ್ಲಿದ್ದ. ಈ ವೇಳೆ ಮಗುವಿನ ತಾಯಿಗೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ಆಕೆ ತನ್ನ ಒಂದು ವರ್ಷದ ಮಗುವನ್ನು ಅಶ್ವಿನಿ ಬಾಬರ್ ಎಂಬಾಕೆಗೆ ಕೊಟ್ಟು ಹಣವನ್ನು ಪಡೆದಿದ್ದಳು. ಬಳಿಕ ಮಗುವಿನ ತಾಯಿ ಹಣವನ್ನು ಮರುಪಾವತಿ ಮಾಡಿ ಮಗುವನ್ನು ಹಿಂತಿರುಗಿಸುವಂತೆ ಕೇಳಿದ್ದಾಳೆ. ಆದರೆ ಅಶ್ವಿನಿ ಮಗುವನ್ನು ಕೊಡಲು ನಿರಾಕರಿಸಿದ್ದಾಳೆ. ಬಳಿಕ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಅಶ್ವಿನಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಎಸ್ ಎಂ ಮೋದಕ್ ಅವರ ಏಕ ಪೀಠವು ಪರಿಶೀಲಿಸಿದೆ.

“ಮಾರಾಟ” ಎಂಬ ಪದವನ್ನು ಬಳಸಿದ್ದು ತುಂಬಾ ನೋವಾಗಿದೆ. ಆದರೆ ಪ್ರಕರಣದ ಇನ್ನೊಂದು ಬದಿಯೆಂದರೆ ಮಗುವಿನ ಸ್ವಂತ ತಾಯಿಯೇ ಈ ಕೃತ್ಯವನ್ನು ಮಾಡಿದ್ದಾಳೆ. ಅಲ್ಲದೇ ಇದರ ಹಿಂದೆ ಹಣದ ಅವಶ್ಯಕತೆ ಇದೆ ಎಂಬುದು ಜೀವನದ ಕಠೋರ ವಾಸ್ತವ. 21 ನೇ ಶತಮಾನದಲ್ಲೂ ಹುಡುಗಿಯರನ್ನು ಸರಕು ಎಂದು ಪರಿಗಣಿಸಲಾಗಿದೆ ಮತ್ತು ಆರ್ಥಿಕ ಲಾಭಕ್ಕಾಗಿ ಮಾಧ್ಯಮವಾಗಿ ಬಳಸಲಾಗುತ್ತಿದೆ ಎಂದು ಅಶ್ವಿನಿಗೆ ಜಾಮೀನು ನೀಡುವ ವೇಳೆ ಹೈಕೋರ್ಟ್ ನ ನ್ಯಾಯಮೂರ್ತಿ ಎಸ್ ಎಂ ಮೋದಕ್ ಅವರ ಏಕ ಪೀಠವು ಅಭಿಪ್ರಾಯಪಟ್ಟಿದೆ. ಇದೀಗ ಹೆಣ್ಣು ಮಗುವನ್ನು ತಾಯಿಗೆ ಹಿಂತಿರುಗಿಸಲಾಗಿದೆ.

suddiyaana