ಬೆನ್ ಸ್ಟೋಕ್ಸ್ SHAPE OUT – ಕ್ಯಾಪ್ಟನ್ಸಿ ಜೊತೆ ಕರಿಯರ್ ಖತಂ?
ಕುಡಿದ ಮತ್ತಲ್ಲಿ ಕಿರಿಕ್ ಬೇಕಿತ್ತಾ?

ಬೆನ್ ಸ್ಟೋಕ್ಸ್ SHAPE OUT – ಕ್ಯಾಪ್ಟನ್ಸಿ ಜೊತೆ ಕರಿಯರ್ ಖತಂ?ಕುಡಿದ ಮತ್ತಲ್ಲಿ ಕಿರಿಕ್ ಬೇಕಿತ್ತಾ?

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡ್ತಿರೋ ಇಂಗ್ಲೆಂಡ್​ ತಂಡದಲ್ಲಿ ಈಗ ಬಿರುಗಾಳಿಯೇ ಎದ್ದಿದೆ. ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ತಮ್ಮ ಕ್ಯಾಪ್ಟನ್ಸಿ ಜೊತೆ ನಿವೃತ್ತಿಯನ್ನೇ ಘೋಷಣೆ ಮಾಡೋ ಹಂತಕ್ಕೆ ಬಂದಿದ್ದಾರೆ. ಗೆಲುವಿನ ಅಲೆಯಲ್ಲಿ ಒಂದು ಕ್ಷಣ ಮೈಮರೆತಿದ್ದಕ್ಕೆ ತಮ್ಮ ಕರಿಯರ್​ನೇ ಕಳೆದುಕೊಳ್ಳೋ ಚಾನ್ಸಸ್ ಕೂಡ ಇದೆ.

ಇದನ್ನೂ ಓದಿ : MIನಲ್ಲಿ ಸೂರ್ಯ Vs ಪಾಂಡ್ಯ ಜಗಳ!? ODIನಿಂದ ಸಿರಾಜ್ OUT, ಪ್ರಸಿದ್ಧ್ IN

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೀತಿದೆ. ಜೂನ್ 4ರಿಂದ 7ರವರೆಗೆ ನಡೆದ ಮೊದಲ ಮ್ಯಾಚಲ್ಲಿ ಇಂಗ್ಲೆಂಡ್ ತಂಡ 115 ರನ್​ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಆದ್ರೆ ಪಂದ್ಯದ ಕೊನೇ ದಿನ ಅಂದ್ರೆ ಕಳೆದ ಭಾನುವಾರ ರಾತ್ರಿ ಇದೇ ಗೆಲುವಿನ ಗುಂಗಲ್ಲಿ ನಾಯಕ ಬೆನ್ ಸ್ಟೋಕ್ಸ್ ಮತ್ತು ಬೌಲರ್ ಗಸ್ ಅಟ್ಕಿನ್ಸನ್ ಲಂಡನ್​ನ ನೈಟ್​ಕ್ಲಬ್​ಗೆ ಹೋಗಿ ಚೆನ್ನಾಗಿ ಮತ್ತೇರಿಸಿಕೊಂಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗಿದ್ರೆ ಏನೂ ಆಗ್ತಿರಲಿಲ್ಲ. ಇಂಗ್ಲೆಂಡ್​ನ ರಗ್ಬಿ ಕ್ಲಬ್ ಆದ ಸರಾಸೆನ್ಸ್‌ನ ಆಟಗಾರರು ಸಹ ಅದೇ ಕ್ಲಬ್‌ನಲ್ಲಿದ್ದರು. ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದು, ರಗ್ಬಿ ಕ್ಲಬ್ ಆಟಗಾರನೊಬ್ಬ ಅಟ್ಕಿನ್ಸನ್‌ಗೆ ಗುದ್ದುವ ಹಂತಕ್ಕೆ ಹೋಗಿದ್ದರು. ಈ ವೇಳೆ ಅಟ್ಕಿನ್ಸನ್ ತಪ್ಪಿಸಿಕೊಂಡಿದ್ದಾರೆ. ಆದರೆ ಗುದ್ದಾಟದಲ್ಲಿ ಇಸಿಬಿ ಭದ್ರತಾ ಅಧಿಕಾರಿ ಗಾಯಗೊಂಡಿದ್ದಾರೆ. ಹೊಲಿಗೆ ಹಾಕುವಷ್ಟರ ಮಟ್ಟಿಗೆ ಇಂಜುರಿ ಆಗಿದೆ.  ಇದೇ ಈಗ ಅವ್ರ ಭವಿಷ್ಯಕ್ಕೂ ಕುತ್ತು ತಂದಿದೆ.

ಕ್ಯಾಪ್ಟನ್ಸಿಗೆ ರಾಜೀನಾಮೆಯೋ.. ನಿವೃತ್ತಿಯನ್ನೇ ಘೋಷಣೆ ಮಾಡ್ತಾರೋ?

ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ತೀವ್ರ ಮುಜುಗರ ತಂದಿಟ್ಟಿರೋ ನೈಟ್‌ ಕ್ಲಬ್‌ನಲ್ಲಿ ನಡೆದ ಗಲಾಟೆ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನಿಖೆ ಆರಂಭಿಸಿದೆ. ತನಿಖೆ ವೇಳೆ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್, ರಗ್ಬಿ ಆಟಗಾರನೊಂದಿಗೆ ಜಗಳ ಆಡಿದ್ದಾರೆ ಅನ್ನೋದು ಸಾಬೀತಾಗಿದೆ. ಹಾಗೇ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮುಗಿದ ನಂತರ ತಂಡದ ಶಿಷ್ಟಾಚಾರ ಉಲ್ಲಂಘನೆ ಬಗ್ಗೆಯೂ ತನಿಖೆಯಾಗ್ತಿದೆ. ಈಗಾಗಲೇ ಎರಡನೇ ಟೆಸ್ಟ್‌ ಪಂದ್ಯಕ್ಕೆ ತಂಡವನ್ನು ಘೋಷಿಸಲಾಗಿದ್ದು ಜೋರೂಟ್​​ಗೆ ಕ್ಯಾಪ್ಟನ್ಸಿ ನೀಡಲಾಗಿದೆ. ಜೂನ್ 17ರಿಂದ ಎರಡನೇ ಪಂದ್ಯ ಆರಂಭವಾಗಲಿದ್ದು ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕ್​ನ್ಸನ್​ರನ್ನ ತಂಡದಿಂದ ಕೈಬಿಡಲಾಗಿದೆ. ಈ ವಿವಾದದ ಬಳಿಕ ಬೆನ್ ಸ್ಟೋಕ್ಸ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಘಟನೆ ಆದ್ಮೇಲೆ ಬೆನ್ ಸ್ಟೋಕ್ಸ್‌ಗೆ ಇಸಿಬಿ ಕೆಲವೊಂದು ಚಾಯ್ಸ್ ಕೂಡ ನೀಡಿದೆ. ಅಂದ್ರೆ ಸ್ವಯಂಪ್ರೇರಣೆಯಿಂದ ನಾಯಕತ್ವ ತ್ಯಜಿಸುವುದು. ಅಥವಾ ಕ್ಯಾಪ್ಟನ್ಸಿಯಿಂದ ಕೆಳಗಿಳಿಯದೇ ಇದ್ರೆ ಮಂಡಳಿಯೇ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ನಾಯಕತ್ವದಿಂದ ತೆಗೆದುಹಾಕಬಹುದು. ಆಲ್ರೆಡಿ ಕ್ಯಾಪ್ಟನ್ಸಿಯಿಂದ ತೆಗೆದು ಹಾಕಿರೋದ್ರಿಂದ ನಿವೃತ್ತಿಯನ್ನೂ ಘೋಷಿಸ್ತಾರಾ ಅನ್ನೋ ಮಾತುಗಳು ಕೇಳಿ ಬರ್ತಿವೆ.  ಇಂಟ್ರೆಸ್ಟಿಂಗ್ ಅಂದ್ರೆ ಟೆಸ್ಟ್ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಸ್ಟೋಕ್ಸ್ ಬೆಸ್ಟ್ ಪ್ಲೇಯರ್. ವಿಶ್ವದ ಬೆಸ್ಟ್ ಆಲ್​​ರೌಂಡರ್ ಕೂಡ. ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪರ 121 ಟೆಸ್ಟ್ ಪಂದ್ಯಗಳಲ್ಲಿ 34.58 ಸರಾಸರಿಯಲ್ಲಿ 7,228 ರನ್ ಗಳಿಸಿದ್ದಾರೆ. 114 ಏಕದಿನ ಪಂದ್ಯಗಳಲ್ಲಿ 41.22 ಸರಾಸರಿಯಲ್ಲಿ 3,463 ರನ್ ಗಳಿಸಿದ್ದಾರೆ. 43 ಟಿ20 ಪಂದ್ಯಗಳಲ್ಲಿ 21.66 ಸರಾಸರಿಯಲ್ಲಿ 585 ರನ್ ಗಳಿಸಿದ್ದಾರೆ. ಇನ್ನು ಇಂಗ್ಲೆಂಡ್ ಆಟಗಾರರ ಈ ಮತ್ತಿನ ರಂಪಾಟ ಇದೇ ಮೊದಲೇನಲ್ಲ. ಕಳೆದ ಜನವರಿಯಲ್ಲೂ ಇಂಥದ್ದೇ ಗಲಾಟೆ ಮಾಡ್ಕೊಂಡಿದ್ರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಗ್ಲೆಂಡ್ ಆಟಗಾರರು ಇದೇ ರೀತಿ ವರ್ತಿಸಿದ್ರು. ಇದ್ರಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಟಗಾರರು ತಡರಾತ್ರಿ ಹೊರಗೆ ಹೋಗುವುದನ್ನು ನಿಷೇಧಿಸುವ ನಿಯಮವನ್ನು ಜಾರಿಗೆ ತಂದಿತ್ತು. ಅಂದ್ರೆ ಮಿಡ್‌ನೈಟ್ ಕರ್ಫ್ಯೂ ನಿಯಮ ತಂದಿದ್ರು. ಆದ್ರೀಗ ರೂಲ್ಸ್ ಬ್ರೇಕ್ ಮಾಡಿ ಮತ್ತೆ ಜಾಗತಿಕ ಮಟ್ಟದಲ್ಲಿ ಅವಮಾನವಾಗುವಂತೆ ನಡೆದುಕೊಂಡಿದ್ದಾರೆ. ಹೀಗಾಗಿ ಕ್ರಿಕೆಟ್ ರೆಗ್ಯುಲೇಟರ್ ತನಿಖೆಗೆ ಒಪ್ಪಿಸಿದೆ. ಈ ಸ್ವತಂತ್ರ ಸಂಸ್ಥೆಗೆ ಆಟಗಾರರ ವಿರುದ್ಧ ದೊಡ್ಡ ಮೊತ್ತದ ದಂಡ ವಿಧಿಸುವ ಹಾಗೂ ಅನಿರ್ದಿಷ್ಟಾವಧಿ ನಿಷೇಧ ಹೇರುವ ಸಂಪೂರ್ಣ ಅಧಿಕಾರವಿದೆ. ಹೀಗಾಗಿ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಕ್ರಿಕೆಟ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇನ್ನು ಬೆನ್ ಸ್ಟೋಕ್ಸ್ ಇತ್ತೀಚೆಗಷ್ಟೇ ಸರ್ಜರಿಗೆ ಒಳಗಾಗಿ ಬಂದಿದ್ರು.

ಮುಖಕ್ಕೆ ಬಾಲ್ ಬಿದ್ದು ಮೂಳೆ ಮುರಿದು ಶಸ್ತ್ರಚಿಕಿತ್ಸೆ!

ಇನ್ನು ಬೆನ್ ಸ್ಟೋಕ್ಸ್ ಇತ್ತೀಚೆಗೆ ನೆಟ್ ಪ್ರಾಕ್ಟೀಸ್ ವೇಳೆ ಚೆಂಡು ಮುಖಕ್ಕೆ ತಗುಲಿ ಕೆನ್ನೆಯ ಮೂಳೆಯೇ ಮುರಿದಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಗೂ ಒಳಲಾಗಿದ್ರು. ಡರ್ಹಾಮ್ ಅಕಾಡೆಮಿಯಲ್ಲಿ ಯುವ ಆಟಗಾರರಿಗೆ ತರಬೇತಿ ನೀಡುವಾಗ, ಬ್ಯಾಟರ್ ಬಾರಿಸಿದ ಚೆಂಡು ಸ್ಟೋಕ್ಸ್ ಅವರ ಕೆನ್ನೆಗೆ ಬಲವಾಗಿ ಬಡಿಯಿತು. ಮುರಿದ ಕೆನ್ನೆ ಮೂಳೆಯನ್ನು ಸರಿಪಡಿಸಲು ವೈದ್ಯರು ಲಂಡನ್‌ನಲ್ಲಿ ಕಾಂಪ್ಲೆಕ್ಸ್ ಸರ್ಜರಿಯನ್ನು ನಡೆಸಿದರು. ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿತ್ತಾದ್ರೂ ಸರ್ಜರಿಯ ನಂತರ ಅವರ ಮುಖದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿದ್ದು. ಮೊದಲಿನ ಫೋಟೋ ಹಾಗೂ ನಂತರದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಹೀಗೆ ಗಂಭೀರ ಗಾಯವನ್ನ ಮೆಟ್ಟಿ ಮತ್ತೆ ಮೈದಾನಕ್ಕಿಳಿದಿದ್ದ ಸ್ಟೋಕ್ಸ್ ಈಗ ಕ್ರಿಕೆಟ್​ನೇ ಬಿಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಆಟಗಾರರಾದವ್ರಿಗೆ ಮೈದಾನದಲ್ಲಿ ಡಿಸಿಪ್ಲೀನ್ ಎಷ್ಟು ಮುಖ್ಯವೋ ಮೈದಾನದ ಹೊರಗೆ ಅದನ್ನ ಕಾಪಾಡಿಕೊಳ್ಳೋದು ಕೂಡ ಅಷ್ಟೇ ಮುಖ್ಯ.

Shantha Kumari

Leave a Reply

Your email address will not be published. Required fields are marked *