ಬಾಲಿವುಡ್ ಗೆ ತೆಂಡೂಲ್ಕರ್‌‌ ಮಗಳು? – ಅಪ್ಪ ಹೇಳಿದ್ದೇನು? ಸಾರಾ ಪ್ಲ್ಯಾನ್‌ ಏನು?

ಬಾಲಿವುಡ್ ಗೆ ತೆಂಡೂಲ್ಕರ್‌‌ ಮಗಳು? – ಅಪ್ಪ ಹೇಳಿದ್ದೇನು? ಸಾರಾ ಪ್ಲ್ಯಾನ್‌ ಏನು?

ಸಾರಾ ತೆಂಡೂಲ್ಕರ್.. ಸಚಿನ್ ತೆಂಡೂಲ್ಕರ್ ಮುದ್ದಿನ ಮಗಳು.. ಯಾವ ಬಾಲಿವುಡ್ ಹಿರೋಯಿನ್ ಗೂ ಕಮ್ಮಿ ಇಲ್ಲ ಈ ಸುಂದರಿ… ಸಿನಿಮಾ ರಂಗಕ್ಕೆ ಕಾಲಿಡದಿದ್ದರೂ ಈಕೆ ಭಾರಿ ಫೇಮಸ್..  ಸಾರಾ ಒಂದಲ್ಲ ಒಂದು ವಿಷ್ಯಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.. ಸಾರಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದು ಯಾವಾಗ ಅಂತಾ ಫ್ಯಾನ್ಸ್ ಕೇಳ್ತಾ ಇದ್ರು.. ಇದೀಗ  ಈ ಬಗ್ಗೆ ಹೊಸ ಅಪ್ ಡೇಟ್ ಸಿಕ್ಕಿದೆ.

ಇದನ್ನೂ ಓದಿ: ಬಂಗಲೆ‌ ಖರೀದಿಸಿದ 2 ವರ್ಷದ ರಾಹಾ! –  ಸ್ಟಾರ್‌ ಕಿಡ್‌ ₹250 ಕೋಟಿಯ ಒಡತಿ!

ಸಿನಿಮಾ ರಂಗಕ್ಕೂ ಬರಲಿಲ್ಲ. ಕ್ರೀಡೆ ರಂಗಕ್ಕೂ ಇಳಿಯಲಿಲ್ಲ. ಆದ್ರೂ ಸಾರಾ ತೆಂಡೂಲ್ಕರ್ ಸಖತ್ ಸುದ್ದಿಯಲ್ಲಿರುತ್ತಾರೆ.. ಸಚಿನ್ ತೆಂಡೂಲ್ಕರ್  ಅವ್ರ ಮಗಳ ಜನಪ್ರಿಯತೆ ಗಗನಕ್ಕೇರಿದೆ. ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ಕ್ರೇಜ್ ಗಳಿಸಿರುವ ಈ ಚೆಲುವೆ, ಸದ್ಯ ಮಾಡೆಲಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಸಾರಾ ತೆಂಡೂಲ್ಕರ್ ಇತ್ತೀಚೆಗೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟು ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಪ್ರತಿಷ್ಠಿತ ತೆಂಡೂಲ್ಕರ್ ಕುಟುಂಬದಲ್ಲಿ ಹುಟ್ಟಿದ್ರೂ, ಸಾರಾ ತನ್ನದೇ ಆದ ಮಾರ್ಗವನ್ನು ಕಂಡುಕೊಂಡಿದ್ದಾರೆ.. ತನ್ನ ಸಾಧನೆಗಳಿಂದಾಗಿಯೇ ಗಮನ ಸೆಳೆದಿದ್ದಾರೆ.

ಮುಂಬೈನ ಗೌರವಾನ್ವಿತ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಸಾರಾ ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ವೈದ್ಯಕೀಯ ಅಭ್ಯಾಸ ಮಾಡಿದರು. ಪ್ರತಿಷ್ಠಿತ ವಿವಿಯಲ್ಲಿ ವೈದ್ಯಕೀಯ ಓದಿ ಪದವಿ ಪಡೆದು ವೈದ್ಯೆಯಾದರೂ, ಸಾರಾ ಭಾರತಕ್ಕೆ ಹಿಂದಿರುಗಿದ ಬಳಿಕ ಮಾಡೆಲಿಂಗ್ ಕಡೆ ವಾಲಿದ್ದಾರೆ.

ಇತ್ತೀಚೆಗಷ್ಟೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಸಾರಾ, ಪ್ರತಿಷ್ಠಿತ ಬಟ್ಟೆ ಬ್ರಾಂಡ್‌ನೊಂದಿಗೆ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿದ್ದಾರೆ. ನಿಪುಣ ನಟಿಯರಾದ ಬನಿತಾ ಸಂಧು ಮತ್ತು ತಾನಿಯಾ ಶ್ರಾಫ್ ಅವರೊಂದಿಗೆ ಸ್ಪಾಟ್‌ಲೈಟ್ ಅನ್ನು ಹಂಚಿಕೊಳ್ಳುತ್ತಾ, ಸಾರಾ ಫ್ಯಾಷನ್‌ನ ಮನಮೋಹಕ ಜಗತ್ತಿಗೆ ಪ್ರವೇಶಿಸಿ ಗಮನ ಸೆಳೆದಿದ್ದಾರೆ.

ಸಾರಾ ಇನ್ಸ್ಟಾಗ್ರಾಮ್‌ ನಲ್ಲಿ 6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟಾಪ್ ಹೀರೋಯಿನ್ ಗಳಿಗೂ ಈ ರೇಂಜ್ ನಲ್ಲಿ ಫಾಲೋವರ್ಸ್ ಇಲ್ಲ. ಅವರ ಅದ್ಭುತ ಫೋಟೋಸ್  ಮತ್ತು ಅವರ ಜೀವನದ ಗ್ಲಿಂಪ್ಸ್‌ಗಳ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.

ಅಪ್ಪ-ಅಮ್ಮನ ಮುದ್ದಿನ ಮಗಳಾಗಿರುವ ಸಾರಾ.. ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ..  ಶುಭಮನ್ ಗಿಲ್‌ ಜೊತೆ ಡೇಟಿಂಗ್ ಕೂಡ ನಡೆಸುತ್ತಿದ್ದಾರೆ ಎಂಬ ವದಂತಿಗಳೂ ಹರಿದಾಡುತ್ತಿದೆ.. ಈ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದ್ರೆ ಸಾರಾ ಆಗ್ಲಿ ಗಿಲ್ ಆಗ್ಲಿ ತಮ್ಮ‌ನಡುವೆ ಲವ್ ಇದೆ ಅಂತಾ ಎಲ್ಲೂ ಹೇಳಿಕೊಂಡಿಲ್ಲ..

ವೈದ್ಯೆ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡ್ತಾ ಇರೋ ಸಾರಾ ಈಗ ಸಿನಿಮಾರಂಗಕ್ಕೂ ಕಾಲಿಡುತ್ತಿದ್ದಾರಂತೆ. ಶೀಘ್ರದಲ್ಲೇ ಬಾಲಿವುಡ್ ಗೂ ಎಂಟ್ರಿ ಕೊಡಲಿದ್ದಾರೆ ಅಂತೆ. ನಟ ಶಾಹಿದ್ ಕಪೂರ್ ಜೊತೆಗೆ ನಟಿಸೋ ಮೂಲಕ ಸಾರಾ ತೆಂಡೂಲ್ಕರ್  ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ಅಂತಾ  ವದಂತಿಗಳು ಹರಡುತ್ತಿವೆ. ಅದ್ರೆ ಈ ಬಗ್ಗೆ ಸಚಿನ್ ತೆಂಡೂಲ್ಕರ್   ಅಂತಹ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದ್ದರೂ ಊಹೆಗಳು ಮುಂದುವರೆದಿವೆ.

Shwetha M