ಚುನಾವಣಾ ಆಯೋಗದ “ನ್ಯಾಷನಲ್ ಐಕಾನ್” ಆಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಆಯ್ಕೆ
ಇತ್ತೀಚಿನ ದಿನಗಳಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕೇಂದ್ರ ಚುನಾವಣಾ ಆಯೋಗ(ಇಸಿ) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು “ನ್ಯಾಷನಲ್ ಐಕಾನ್” ಎಂದು ನೇಮಕ ಮಾಡಿದೆ.
ಇದನ್ನೂ ಓದಿ: ಚೆಸ್ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟ ಭಾರತದ ಆರ್.ಪ್ರಜ್ಞಾನಂದ – ವಿಶ್ವನಾಥನ್ ಆನಂದ್ ಬಳಿಕ 18ರ ಬಾಲಕನ ಅಮೋಘ ಸಾಧನೆ
” ನ್ಯಾಷನಲ್ ಐಕಾನ್” ಆಗಿ ಆಯ್ಕೆಯಾದ ಬಳಿಕ ದೆಹಲಿಯಲ್ಲಿ ಈ ಸಂಬಂಧ ಚುನಾವಣಾ ಸಮಿತಿ ನಡುವೆ ಒಡಂಬಡಿಕೆ ಮಾಡಿಕೊಂಡ ಪತ್ರಕ್ಕೆ ತೆಂಡೂಲ್ಕರ್ ಸಹಿ ಹಾಕಿದ್ದಾರೆ. ಸುಮಾರು ಮೂರು ವರ್ಷಗಳ ಒಪ್ಪಂದ ಇದಾಗಿದ್ದು, ತೆಂಡೂಲ್ಕರ್ ಅವರು ಮೂರು ವರ್ಷಗಳ ಕಾಲ ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
“ಈ ಸಹಯೋಗವು ಮುಂಬರುವ ಚುನಾವಣೆಗಳಲ್ಲಿ ವಿಶೇಷವಾಗಿ 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ (ಲೋಕಸಭೆಗೆ) ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಲಿದೆ” ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ಆಯೋಗ ಕಳೆದ ವರ್ಷ ನಟ ಪಂಕಜ್ ತ್ರಿಪಾಠಿ ಅವರನ್ನು ನ್ಯಾಷನಲ್‌ಐಕಾನ್ ಎಂದು ನೇಮಕ ಮಾಡಿತ್ತು. ಈ ಹಿಂದೆ, 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಎಂಎಸ್ ಧೋನಿ, ಅಮೀರ್ ಖಾನ್ ಮತ್ತು ಮೇರಿ ಕೋಮ್ ಅವರಂತಹ ದಿಗ್ಗಜರನ್ನು ಚುನಾವಣಾ ಆಯೋಗದ ನ್ಯಾಷನಲ್ ಐಕಾನ್‌ಗಳಾಗಿದ್ದರು.