ಮೊದಲು ಆಟ.. ಆಮೇಲೆ ಪಟ್ಟ – ವೈಭವ್ ವಿರುದ್ಧ ಸಚಿನ್ ಸಿಡಿಮಿಡಿ
ಸೂರ್ಯವಂಶಿ ದಾರಿ ತಪ್ಪುತ್ತಾರಾ?

15ನೇ ವಯಸ್ಸಲ್ಲೇ ವೈಭವ್ ಸೂರ್ಯವಂಶಿ ವಿಶ್ವಕ್ರಿಕೆಟ್ನಲ್ಲಿ ಸದ್ದು ಮಾಡ್ತಿದ್ದಾರೆ. ಟ್ಯಾಲೆಂಟ್ನಿಂದಲೇ ಭಾರತ ತಂಡಕ್ಕೂ ಕಾಲಿಟ್ಟಿದ್ದು ಅವಕಾಶ ಸಿಕ್ಕಾಗೆಲ್ಲಾ ಧೂಳೆಬ್ಬಿಸ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಆಲ್ರೆಡಿ ನಾಯಕತ್ವವೂ ಸಿಗುತ್ತಿದೆ. ಆದ್ರೆ ವೈಭವ್ಗೆ ಸಿಗ್ತಿರೋ ಲೀಡರ್ಶಿಪ್ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೆಂಡವಾಗಿದ್ದಾರೆ.
ಇದನ್ನೂ ಓದಿ : RCB Vs MI ಫಸ್ಟ್ ಫೈಟ್ – ಬೆಂಗಳೂರಿಗೆ ಹೇಗಿದೆ ಶೆಡ್ಯೂಲ್?
ವೈಭವ್ ಸೂರ್ಯವಂಶಿ ಟ್ಯಾಲೆಂಟೆಡ್ ಪ್ಲೇಯರ್. ಅದ್ರಲ್ಲಿ ಡೌಟೇ ಇಲ್ಲ. ಕಳೆದ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ. ಅದಾದ್ಮೇಲೆ ಟೀಂ ಇಂಡಿಯಾಗೂ ಕಾಲಿಟ್ಟು ಓಪನರ್ ಆಗಿ ಹಲವು ಪಂದ್ಯಗಳಲ್ಲೂ ಆಡಿದ್ದಾರೆ. ಆದ್ರೆ 15 ವರ್ಷದ ವೈಭವ್ಗೆ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯ ತಂಡದ ಉಪನಾಯಕನಾಗಿ ಸೆಲೆಕ್ಟ್ ಮಾಡಿದಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ವಿರೋಧದ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ಕೂಡ ಇದ್ದಾರೆ.
ವೈಭವ್ ಗೆ ನಾಯಕತ್ವದ ಜವಾಬ್ದಾರಿ ಬೇಡವಿತ್ತೆಂದ ಸಚಿನ್!
ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ Reddit ನ ‘Ask Me Anything’ ಸಂವಾದದಲ್ಲಿ ಭಾಗಿಯಾಗಿದ್ರು. ಈ ವೇಳೆ ಅಭಿಮಾನಿಯೊಬ್ರ ವೈಭವ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನಿಡಿದ್ದಾರೆ. ಇಶಾನ್ ಕಿಶನ್ ನೇತೃತ್ವದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಈಸ್ಟ್ ಜೋನ್ ತಂಡದ ಉಪನಾಯಕತ್ವ ನೀಡಿರೋದ್ರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ನಾಯಕತ್ವದ ಜವಾಬ್ದಾರಿ ನೀಡುವುದು ಟೂ ಅರ್ಲಿ ಎನ್ನುವ ಮೂಲಕ ಎಕ್ಸ್ಪೀರಿಯನ್ಸ್ ಮುಖ್ಯ ಅನ್ನೋದನ್ನ ಹೇಳಿದ್ದಾರೆ. ಅಷ್ಟಕ್ಕೂ ಸಚಿನ್ ಅವ್ರ ಆಪೋಸ್ಗೆ ಕಾರಣಗಳೂ ಇದೆ.
ಯಾಕೆ ಲೀಡರ್ ಶಿಪ್ ಬೇಡವಿತ್ತು?
ವೈಭವ್ ಸೂರ್ಯವಂಶಿಗೆ ಇನ್ನೂ 15 ವರ್ಷ.. ಅನುಭವದ ಕೊರತೆ
ಕೆಂಪು ಚೆಂಡಿನ ಕ್ರಿಕೆಟ್ ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿ ಅನುಭವ ಗಳಿಸಬೇಕು
ಕ್ರೀಡಾ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಹಂತಹಂತವಾಗಿ ಬೆಳೆಯಬೇಕು
ಮುಕ್ತವಾಗಿ ಆಡಲು ಬಿಡಬೇಕು.. ಹೆಜ್ಜೆಯನ್ನು ಜಾಗರೂಕತೆಯಿಂದ ಇಡಬೇಕು
15 ವರ್ಷದ ವಯಸ್ಸಿನಲ್ಲಿ ನಾಯಕತ್ವದ ಜವಾಬ್ದಾರಿ ನೀಡಿದ್ರೆ ಬ್ಯಾಟಿಂಗ್ ಕಷ್ಟ
ಯಾವುದೇ ಹೊರೆಯಿಲ್ಲದೆ ಕೇವಲ ತಮ್ಮ ಬ್ಯಾಟಿಂಗ್ ಕಡೆ ಗಮನ ಕೊಡಬೇಕು
ಪ್ರೆಶರ್ ಟೈಮಲ್ಲಿ ಅವ್ರು ತೆಗೆದುಕೊಳ್ಳುವ ನಿರ್ಧಾರಗಳ ಮೇಲೂ ಪರಿಣಾಮ
ಹಾಗಂತ ಇಲ್ಲಿ ಸಚಿನ್ ಅವರ ಮಾತಿನ ಅರ್ಥ ವೈಭವ್ ನಾಯಕನಾಗಬಾರದು ಎಂದಲ್ಲ. ಮೊದಲು ಆಟಗಾರನಾಗಿ ಅನುಭವ ಗಳಿಸಲಿ, ನಂತರ ನಾಯಕತ್ವದ ಜವಾಬ್ದಾರಿ ಬರಲಿ ಎನ್ನುವುದು. ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಯುವ ಆಟಗಾರನ ಬೆಳವಣಿಗೆಗೆ ಟೈಂ ಕೊಡುವುದೂ ಮುಖ್ಯ ಅನ್ನೋದು ಅವ್ರ ಮಾತಿನ ಅರ್ಥ. ಅದೂ ಅಲ್ದೇ 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸಚಿನ್ ತೆಂಡೂಲ್ಕರ್ ಕೂಡ ಕಿರಿಯ ವಯಸ್ಸಿನಲ್ಲೇ ಸಿಗುವ ಅತಿಯಾದ ರೆಸ್ಪಾನ್ಸ್, ಹಾಗೇ ಜವಾಬ್ದಾರಿಗಳ ಒತ್ತಡ ಚೆನ್ನಾಗಿ ತಿಳಿದಿರುವುದರಿಂದ, ವೈಭವ್ಗೆ ಕಿವಿಮಾತುಗಳನ್ನ ಹೇಳಿದ್ದಾರೆ. ಯಾಕಂದ್ರೆ ಸಚಿನ್ ಕೂಡ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡೋದನ್ನ ನೋಡಿ ಎಂಜಾಯ್ ಮಾಡ್ತಾರೆ.

ನೋಡಿರಿ

