ಅಸ್ಸಾಂನ ಅಟ್ಟಾಡಿಸಿ ಗೆದ್ದ ಕರ್ನಾಟಕ – ಸಂಜು ಟ್ರೋಲ್‌ಗೆ ಅಶ್ವಿನ್ ಪಂಚ್

ಅಸ್ಸಾಂನ ಅಟ್ಟಾಡಿಸಿ ಗೆದ್ದ ಕರ್ನಾಟಕ –  ಸಂಜು ಟ್ರೋಲ್‌ಗೆ ಅಶ್ವಿನ್ ಪಂಚ್

ಕ್ರಿಕೆಟ್ ಲೋಕದ  ಇಂಟ್ರೆಸ್ಟಿಂಗ್ ಸುದ್ದಿಗಳು

ರಣಜಿ ಟ್ರೋಫಿಯಲ್ಲಿ ಕರ್ನಾಟಕ ಅಸ್ಸಾಂ ವಿರುದ್ಧ ಇನ್ನಿಂಗ್ಸ್ ಗೆಲುವು ದಾಖಲಿಸಿದೆ.  ಕರ್ನಾಟಕದ ಬ್ಯಾಟರ್‌ ಕೆ.ವಿ. ಅನೀಶ್ ಅಜೇಯ 142 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದಾರೆ. ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ  577 ರನ್‌ ಗಳಿಸಿ ಬಾರಿ ಮುನ್ನಡೆ ಸಾಧಿಸಿತ್ತು.. ಅಸ್ಸಾಂ ಎರಡು ಇನ್ನಿಂಗ್ಸ್‌ನಿಂದ 300 ರ ಗಡಿ ದಾಟಲು ಆಗದೇ ಹೀನಾಯವಾಗಿ ಸೋತಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಹಿಡಿದ ಕ್ಯಾಚ್‌ ಸಖತ್ ವೈರಲ್ ಆಗ್ತಿದೆ.  ಅದರಲ್ಲೂ ಕ್ಯಾಚ್ ಹಿಡಿದ ನಂತರ ಕೊಹ್ಲಿ ವಿಶಿಷ್ಠ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಬಿಲ್ಲು-ಬಾಣ ಹಿಡಿದು ನಿಂತಿರುವಂತೆ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗ್ತಿದೆ.

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಗಿಲ್ , ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ರಗ್ಬಿ ದಂತಕಥೆ ಕೆವೆನ್ ಮೀಲಾಮು ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ, ‘ಆಲ್ ಬ್ಲ್ಯಾಕ್ಸ್’  ತಂಡದ  ದಿಗ್ಗಜ ಆಟಗಾರ ಮೀಲಾಮು ಟೀಂ ಇಂಡಿಯಾ ಆಟಗಾರರಿಗೆ ಅವರ ಹೆಸರಿರುವ ವಿಶೇಷ ಜರ್ಸಿಗಳನ್ನು ಉಡುಗೊರೆಯಾಗಿ ನೀಡಿದರು.

ನ್ಯೂಜಿಲೆಂಡ್ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇತ್ತೀಚಿನ ಪಂದ್ಯದಲ್ಲಿ ಡಕ್‌ಔಟ್ ಆಗಿದ್ದ ಜೈಸ್ವಾಲ್ ಈ ಬಾರಿ 155 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಮೈಲಿಗಲ್ಲನ್ನೂ ತಲುಪಿದ್ದಾರೆ. ಮುಂಬರುವ ಟೆಸ್ಟ್ ಸರಣಿಗೂ ಮುನ್ನ ಈ ಪ್ರದರ್ಶನ ಜೈಸ್ವಾಲ್ ಆತ್ಮವಿಶ್ವಾಸ ಹೆಚ್ಚಿಸಿದೆ.

ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಾಪಸಾತಿ ಬಗ್ಗೆ ನಾಯಕ ಶುಭಮನ್ ಗಿಲ್ ಮಹತ್ವದ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಂಡದ ಏಳನೇ ಮತ್ತು ಎಂಟನೇ ಕ್ರಮಾಂಕದ ಸ್ಥಾನಗಳನ್ನು ಹಾರ್ದಿಕ್ ಮರಳಿದ ಬಳಿಕ ಉತ್ತಮವಾಗಿ ನಿರ್ಧರಿಸಬಹುದು ಎಂದು ಹೇಳಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡುವ ಹಾರ್ದಿಕ್ ಅವರಂತಹ ಆಟಗಾರನ ಕೌಶಲ್ಯಕ್ಕೆ ಪರ್ಯಾಯವಿಲ್ಲ ಎಂಬುದು ಗಿಲ್ ಅಭಿಪ್ರಾಯ.

ಸಂಜು ವಿಷ್ಯದಲ್ಲಿ ತಮ್ಮನ್ನ ಟ್ರೋಲ್ ಮಾಡಿದವರಿಗೆ R. ಅಶ್ವಿನ್ ಬಟ್ಟೆ ಸುತ್ತಿ ಹೊಡೆದಿದ್ದಾರೆ.  ಅಭಿಮಾನಿಯೊಬ್ಬ ಸಂಜು ಐದು ಪಂದ್ಯಗಳಲ್ಲಿ ಕೇವಲ 107 ರನ್ ಗಳಿಸಿದ ಆಟಗಾರನನ್ನು ಹೇಗೆ ಫಸ್ಟ್ ಚಾಯ್ಸ್ ಆಗಿ ಪರಿಗಣಿಸುತ್ತೀರಿ ಎಂದು ಅಶ್ವಿನ್‌ಗೆ ವ್ಯಂಗ್ಯವಾಡಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಶ್ವಿನ್, “ಸಂಜು ನನ್ನ ಮೊದಲ ಆಯ್ಕೆ. ಆದರೆ, ಆತನೇ ನಿನ್ನ ಫುಲ್ ಟೈಮ್ ಅಬ್ಸೆಷನ್ ” ಎಂದು ಖಡಕ್ ಉತ್ತರ ನೀಡಿದ್ದಾರೆ. ಈ ಮೂಲಕ ಸಂಜು ಅವರನ್ನು ಟೀಕಿಸುವ ಅಭಿಮಾನಿಗೆ ತಿರುಗೇಟು ನೀಡಿದ್ದಾರೆ

ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡದ ಪರ ಆಡುತ್ತಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ಪೃಥ್ವಿ ಶಾ ಅವರನ್ನು ಬೌಲ್ಡ್ ಮಾಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಶಮಿ ಅವರ ಈ ಪ್ರದರ್ಶನ ಗಮನ ಸೆಳೆದಿದೆ. ರಾಷ್ಟ್ರೀಯ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿರುವ ಶಮಿಗೆ ರಣಜಿ ಪಂದ್ಯಗಳು ಉತ್ತಮ ವೇದಿಕೆಯಾಗಿವೆ.

ಇದನ್ನೂ ಓದಿ: ODIಗೆ ಪಾಟಿದಾರ್ .. ರಿಂಕು ಫಿನಿಶರ್ – PAKಗೆ ಅಭಿ-ವೈಭವ್ ಚಾಲೆಂಜ್

ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದ ಈ ಹೈ-ಪ್ರೊಫೈಲ್ ಡೀಲಿಂಗ್‌ಗೆ RR ಎಂಟ್ರಿ ಕೊಟ್ಟಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಂಜಾಬ್ ಕಿಂಗ್ಸ್ ಬಹುತೇಕ ಎಲ್ಲಾ ಸಿದ್ಧತೆ ನಡೆಸಿತ್ತು. ಹಾರ್ದಿಕ್ ಬದಲಿಗೆ ತನ್ನ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಹಾಗೂ ವಿಷ್ಣು ವಿನೋದ್ ಅವರನ್ನು ಮುಂಬೈಗೆ ಬಿಟ್ಟುಕೊಡಲು ಪಂಜಾಬ್ ಒಪ್ಪಿಕೊಂಡಿತ್ತು. ಆದ್ರೆ ಈಗ ಹಾರ್ದಿಕ್ ಪಾಂಡ್ಯಗಾಗಿ ಯುವ ಸ್ಫೋಟಕ ದಾಂಡಿಗ ಯಶಸ್ವಿ ಜೈಸ್ವಾಲ್ ಹಾಗೂ ಸ್ಟಾರ್ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಬಿಟ್ಟುಕೊಡಲು ಸಿದ್ಧ ಎನ್ನುವ ಮೂಲಕ MIಗೆ RR ಬಿಗ್ ಆಫರ್ ನೀಡಿದೆ.

ತಮಗೆ ಅತ್ಯಂತ ನೆಚ್ಚಿನ ನಾಯಕರು ಯಾರು ಎಂಬುವುದ್ದನ್ನ ಸಚಿನ್ ಹೇಳಿದ್ದಾರೆ.  ನಾನು ಆಡಿದ ನಾಯಕರಲ್ಲಿ ಗಂಗೂಲಿ ಮತ್ತು ಧೋನಿ ನನ್ನ ಪಟ್ಟಿಯಲ್ಲಿ ಖಂಡಿತವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.  1990 ರ ದಶಕದ ಕೊನೆಯ ಅವಧಿಯನ್ನು ಭಾರತೀಯ ಕ್ರಿಕೆಟ್‌ನ ಅತ್ಯಂತ ಕಷ್ಟದ ಮತ್ತು ಕರಾಳ ಹಂತ ಎಂದು ಅವರು  ಸಚಿನ್ ತೆಂಡೂಲ್ಕರ್  ಹೇಳಿದ್ದಾರೆ.

ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಮ್ಯಾಕ್ಸ್‌ವೆಲ್ 149 ಏಕದಿನ, 130 ಟಿ20 ಹಾಗೂ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2023ರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದಲೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದ ಮ್ಯಾಕ್ಸ್‌ವೆಲ್ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿದೆ.

Kishor KV

Leave a Reply

Your email address will not be published. Required fields are marked *