ಭಾರತದ ಭವಿಷ್ಯದ ಕ್ರಿಕೆಟ್ ತಾರೆ ಸಚಿನ್ ದಾಸ್ – ಅಂಡರ್-19 ಸೆಮೆಫೈನಲ್ ಹೀರೋ ಬೆಳೆದು ಬಂದ ಹಾದಿ ತುಂಬಾನೇ ರೋಚಕ
ಅಂಡರ್-19 ಏಕದಿನ ವಿಶ್ವಕಪ್ ಸಮರದಲ್ಲಿ ಭಾರತದ ಒಬ್ಬ ಹುಡುಗ ಈಗ ಫ್ಯೂಚರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಟೀಮ್ ಇಂಡಿಯಾ ಈಗ ಸೋಲಿಲ್ಲದ ಸರದಾರನಂತೆ, ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇದಕ್ಕೆ ಕಾರಣ ಸಚಿನ್ ದಾಸ್ ಅನ್ನೋ ಯಂಗ್ ಕ್ರಿಕೆಟರ್. ಮಹಾರಾಷ್ಟ್ರದ ಪುಣೆ ಮೂಲದ ಈ ಯಂಗ್ ಬ್ಯಾಟ್ಸ್ಮನ್ನ ಸ್ಟೋರಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ.
ಇದನ್ನೂ ಓದಿ: ದಾರಿಯಲ್ಲಿ ಹೋಗುವಾಗ ಪ್ರತ್ಯಕ್ಷವಾದ ಕ್ರಿಕೆಟ್ ದೇವರು –ಅಭಿಮಾನಿಗೆ ಸಚಿನ್ ತೆಂಡೂಲ್ಕರ್ ಸರ್ಪ್ರೈಸ್
ಸಚಿನ್ ದಾಸ್ರ ತಂದೆ ಸಚಿನ್ ತೆಂಡೂಲ್ಕರ್ ಫ್ಯಾನ್. ಸಚಿನ್ ದಾಸ್ರ ತಾಯಿ ಪೊಲೀಸ್ ಆಫೀಸರ್ ಆಗಿದ್ದಾರೆ. ತಾಯಿಗೆ ಮಾತ್ರ ಮಗನಿಗೆ ಸಚಿನ್ ಅನ್ನೋ ಹೆಸರು ಇಡೋದು ಬೇಕಾಗಿರಲಿಲ್ಲ. ನಮ್ಮ ಮಗ ಕ್ರಿಕೆಟ್ನತ್ತ ಫೋಕಸ್ ಮಾಡೋದು ಬೇಡ ಅನ್ನೋದು ಅವರ ಉದ್ದೇಶವಾಗಿತ್ತು. ಆದ್ರೆ ತಂದೆ ಮಾತ್ರ ಮಗನನ್ನ ಕ್ರಿಕೆಟರ್ ಮಾಡಬೇಕು ಅನ್ನೋದನ್ನ ನಿರ್ಧರಿಸಿಯೇ ಬಿಟ್ಟಿದ್ರು. ಹೀಗಾಗಿ ತಮ್ಮ ರೋಲ್ ಮಾಡೆಲ್ ಸಚಿನ್ ಹೆಸರನ್ನೇ ಮಗನಿಗೆ ನಾಮಕರಣ ಮಾಡ್ತಾರೆ. ಸಣ್ಣ ವಯಸ್ಸಲ್ಲೇ ಸಚಿನ್ ಧಾಸ್ಗೆ ಕ್ರಿಕೆಟ್ ಪ್ರಾಕ್ಟೀಸ್ ಕೂಡ ಶುರು ಮಾಡ್ತಾರೆ. ಮಗನಿಗೆ ನಾಲ್ಕೂವರೆ ವರ್ಷವಾಗಿದ್ದಾಗಲೇ ಹಾಫ್ ಟರ್ಫ್ನಲ್ಲಿ ಟ್ರೈನಿಂಗ್ ಶುರುವಾಗುತ್ತೆ. ಶೇಖ್ ಅಜರ್ ಅನ್ನೋರು ಸಚಿನ್ ಧಾಸ್ ಫಸ್ಟ್ ಕೋಚ್ ಅಗಿರ್ತಾರೆ. ಇವತ್ತು ಸಚಿನ್ ಧಾಸ್ ಅಂಡರ್-19 ವರ್ಲ್ಡ್ಕಪ್ನಲ್ಲಿ ಮಿಂಚಿದ್ದಾರೆ ಅಂದ್ರೆ ಅದಕ್ಕೆ ಮೇನ್ ರೀಸನ್ ಅವರ ತಂದೆ ಮತ್ತು ಕೋಚ್ ಶೇಖ್ ಅಜರ್. ಸಚಿನ್ ಧಾಸ್ ಈಗ ಒಬ್ಬ ಬೆಸ್ಟ್ ಫಿನಿಷರ್ ಆಗಿ ಟೀಂ ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಮ್ಯಾಚ್ಗಳನ್ನ ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಇಲ್ಲಿ ಸಚಿನ್ ಧಾಸ್ ವಿಚಾರದಲ್ಲಿ ಆಗಿರೋದು ಇದೇ ನೋಡಿ. ಧಾಸ್ ತಂದೆ ತೆಂಡೂಲ್ಕರ್ ಫ್ಯಾನ್.. ಹೀಗಾಗಿ ಮಗ ಕ್ರಿಕೆಟರ್ ಆಗಬೇಕು ಕನಸು ಕಂಡ್ರು. ಹಾಗೆ ಫ್ರಾಕ್ಟೀಸ್ ಶುರು ಮಾಡಿದ ಸಚಿನ್ ಧಾಸ್ ಈಗ ವಿರಾಟ್ ಕೊಹ್ಲಿಯನ್ನ ಫಾಲೋ ಮಾಡ್ತಿದ್ದಾರೆ. ಕ್ರಿಕೆಟ್ಗೆ ಸಂಬಂಧಿಸಿ ಭಾರತದಲ್ಲಿರೋ ಈ ತಂದೆ-ಮಕ್ಕಳ ಕನೆಕ್ಷನ್ ಇದ್ಯಲ್ಲಾ, ಇದ್ರಿಂದಾಗಿಯೇ ನಮ್ಮ ಅಂಡರ್-19 ಟೀಮ್ ಇಷ್ಟೊಂದು ಸ್ಟ್ರಾಂಗ್ ಆಗಿರೋದು.
ಇನ್ನು ಚೈಲ್ಡ್ವುಡ್ ವೇಳೆ ಸಚಿನ್ ಧಾಸ್ಗೆ ಯಾರೂ ಫ್ರೆಂಡ್ಸೇ ಇರಲಿಲ್ವಂತೆ. ಯಾವುದೇ ಕಾರಣಕ್ಕೂ ಕ್ರಿಕೆಟ್ನಿಂದ ಮಗನ ಫೋಕಸ್ ಔಟಾಗಬಾರದು ಅಂತಾ ಹೊರಗಡೆ ಎಲ್ಲೂ ಕಳಿಸ್ತಾ ಇರಲಿಲ್ಲ. ಹಾಗೆಯೇ ತಾಯಿ ಪೊಲೀಸ್ ಆಫೀಸರ್ ಆಗಿರೋ ಕಾರಣ ಡಿಸಿಪ್ಲಿನ್ ಬಗ್ಗೆ ಕೇಳೋದೇ ಬೇಡ. ಶಿಸ್ತು ಅನ್ನೋದು ಸಚಿನ್ ದಾಸ್ಗೆ ರಕ್ತದಲ್ಲೇ ಬಂದಿತ್ತು.