10 ಗಂಟೆ ಕ್ಯೂ.. ಭಕ್ತರ ಪರದಾಟ – ಪಾರ್ಕಿಂಗ್ ಫುಲ್.. ದರ್ಶನವಿಲ್ಲದೇ ವಾಪಸ್!

ಇದೇ 17 ರಿಂದ ಶಬರಿಮಲೆ ಅಯ್ಯಪ್ಪನ ಸನ್ನಧಿಯಲ್ಲಿ ಮಂಡಲ ಪೂಜೆ ಆರಂಭ ಆಗಿದೆ. ದೇಶದ ನಾನಾ ಭಾಗದಿಂದ ಭಕ್ತರ ದಂಡೆ ಹರಿದು ಬರ್ತಿದೆ. ಆದ್ರೆ ಕೇರಳ ಸರ್ಕಾರ ಸರಿಯಾದ ವ್ಯವಸ್ಥೆಯನ್ನೇ ಮಾಡಿಲ್ಲ, ಕೇವಲ ಮೆದಳು ಜ್ವರದ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಹೊರತು ಭಕ್ತರ ದರ್ಶನಕ್ಕೆ ವ್ಯವಸ್ಥೆಗಳು ಸರಿಯಾಗಿ ಇಲ್ಲ ಅನ್ನೋದ್ದನ್ನ ಅಲ್ಲಿಗೆ ಹೋಗಿರೋ ಭಕ್ತರೇ ಹೇಳುತ್ತಿದ್ದಾರೆ.. ನೋಡಿ ಈ ದೃಶ್ಯಗಳನ್ನ ಜನರಿಗೆ ಕುರುವುದ್ದಕ್ಕೆ ಇರಲಿ ಕಾಲು ಇಡೋಕೆ ಜಾಗ ಇಲ್ಲ. ಮಕ್ಕಳನ್ನ, ಇರಿಮುಡಿಯನ್ನ ಹೊತ್ತ ಅಯ್ಯಪ್ಪ ಭಕ್ತರು ಪರಾಡುತ್ತಿದ್ದಾರೆ. ದರ್ಶನ ಪಡೆಯೋಕೆ ಏನಿಲ್ಲ ಅಂದ್ರೂ 10 ಗಂಟೆಗೂ ಹೆಚ್ಚು ಕಾಲ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣ ಆಗಿದೆ.. ಅದ್ರಲ್ಲೂ ಇರುಮುಡಿಯನ್ನ ಹೊತ್ತು ನಿಲ್ಲೋದು ತುಂಬಾ ಕಷ್ಟ.. ಅಲ್ಲಿನ ಯಾತ್ರಿಕರು ಹೇಳುವ ಪ್ರಕಾರ ಶಬರಿಮಲೆ ಯಾತ್ರಿಕರಿಗೆ ಬೇಕಾದ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಹ ಕೇರಳ ಸರ್ಕಾರ ಸೋತಿದೆಯಂತೆ.. ಲಕ್ಷ ಲಕ್ಷ ಸಂಖ್ಯೆಯಲ್ಲಿ ಬರುತ್ತಿರುವ ಭಕ್ತರು, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ದೊಡ್ಡ ಪ್ರಮಾಣದಲ್ಲಿ ಕಾಲ್ತುಳಿತ ಉಂಟಾಗುವ ಸಾಧ್ಯತೆ ಕೂಡ ಉಂಟು ಅಂತ ಹೇಳುತ್ತಿದ್ದಾರೆ. ಉಸಿರುಗಟ್ಟಿ ಚಿಕ್ಕ ಮಕ್ಕಳು ಸೇರಿ ಹಿರಿಯರು ಒದ್ದಾಡುವಂತೆ ಆಗ್ತಿದೆ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ವರ್ಷದ ನಮ್ಮ ದೇಶದಲ್ಲಿ 4-5 ಕಾಲ್ತುಳಿತ ನಡೆದಿದೆ. ತಿರುಪತಿ, ಬೆಂಗಳೂರು, ದಳಪತಿ ರ್ಯಾಲಿ ಸೇರಿದಂತೆ ಸಾಕಷ್ಟು ಕಡೆ ಜನರ ನೂಕುನುಗ್ಗಲಿನಿಂದ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ರೂ ಕೂಡ ಭಕ್ತರಿಗೆ ಸರಿಯಾದ ವ್ಯವಸ್ಥೆ ಮಾಡುವಲ್ಲಿ ಕೇರಳ ಸರ್ಕಾರ ಸೋತಿದೆ. ಇವರಿಗೆ ದೇವಸ್ಥಾನದ ದುಡ್ಡು ಬೇಕು, ಆದ್ರೆ ಭಕ್ತರ ಮೇಲೆ ಇವರಿಗೆ ಕರುಣೆ ಇಲ್ಲ ಅಂದ್ರೆ ಹೇಗ್ ಹೇಳಿ.
ಇದನ್ನೂ ಓದಿ : ಹಾಡಹಗಲೇ ಬೆಂಗಳೂರಿನಲ್ಲಿ ದರೋಡೆ! – ನೋಡ ನೋಡುತ್ತಿದ್ದಂತೆ 7 ಕೋಟಿ ದೋಚಿದ ಖದೀಮರು!
ಆಹಾರ, ನೀರು ಇಲ್ಲದೇ ಗಂಟೆ ಗಂಟಲೇ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಪಾರ್ಕಿಂಗ್‌ಗಳು ಫುಲ್ ಆಗಿದೆ. ವಾಹನಗಳನ್ನ ಹೇಗ್ ಬೇಕೋ ಹಾಗ್ ಹಾಕಲಾಗಿದೆ. ಒಂದು ವಾಹನ ಪಾರ್ಕಿಂಗ್‌ನಿಂದ ತೆಗೆಯೋಕೆ ಗಂಟೆಗಂಟಲೇ ಕಾಯಬೇಕಿದೆ. ತೀವ್ರ ಜನಸಂದಣಿಯಿಂದಾಗಿ ಯಾತ್ರಾರ್ಥಿಗಳು 18 ಮೆಟ್ಟಿಲುಗಳ ಮುಂದೆ ಹಾಕಿಕೋ ಬ್ಯಾರಿಕೇಡ್‌ಗಳನ್ನು ಮುರಿದು ಹೋಗುವಂತೆ ಆಗ್ತಿದೆ. . ಅನೇಕ ಭಕ್ತರು ದರ್ಶನ ಸಿಗದೆ ವಾಪಸ್ ಆಗುತ್ತಿದ್ದಾರೆ. ಯಾಕಂದ್ರೆ ಆ ನೂಕು ನುಗ್ಗಲಿಲ್ಲ ಹೋಗುವುದ್ದಕ್ಕೆ ಆಗಲ್ಲ. ಕಾಲ್ತುಳಿತ ಆದ್ರೆ ನೂರಾರು ಪ್ರಾಣ ಕೂಡ ಹೋಗುತ್ತೆ. ಹೀಗಾಗಿ ಪಂಪಾ ಮೂಲಕ ಬಂದ ಕೆಲವರು ಪಂಡಲಂ ವಲಿಯಾ ಕೋಯಿಲ್ ದೇವಸ್ಥಾನ ಕ್ಕೆಹೋಗಿ ನೆಯ್ಯಭಿಷೇಕ ನೆರವೇರಿಸಿ, ಮಾಲೆಗಳನ್ನ ತೆಗೆದು ಮನೆಗೆ ವಾಪಸ್ ಹೋಗುತ್ತಿದ್ದಾರೆ. ಬೆಂಗಳೂರು ಮತ್ತು ಸೇಲಂನಿಂದ ಬಂದ ಯಾತ್ರಾರ್ಥಿಗಳು ಪಂಪಾದಲ್ಲಿ ಗಂಟೆಗಟ್ಟಲೆ ಕಾಯ್ದು ನಂತರ ಹೊರಟುಹೋಗಿದ್ದಾರೆ. ಯಾತ್ರಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸನ್ನಿಧಾನಕ್ಕೆ ಹೋಗಲು ಸಾಧ್ಯವಾಗದ ಕಾರಣ, ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ನಿಲಕ್ಕಲ್ ಬ್ಯಾರಿಕೇಡ್ ವ್ಯವಸ್ಥೆಯ ಅನುಪಸ್ಥಿತಿ, ಕಡಿಮೆಯಾದ ಪೊಲೀಸ್ ನಿಯೋಜನೆ, ಮತ್ತು ಕೇಂದ್ರ ಪಡೆಗಳ ಕೊರತೆ ಜನಸಂದಣಿಗೆ ಕಾರಣವಾಗುತ್ತಲೇ ಇದೆ. ಇದು ಕೇವಲ ದೇವಸ್ಥಾನ ಓಪನ್ ಆಗಿ 3 ದಿನದಲ್ಲಿ ಆಗಿರುವುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಹೀಗಾಗಿ ಇಲ್ಲಿನ ವ್ಯವಸ್ಥೆಗಳು ಬೇಗ ಸರಿಯಾಗಬೇಕು.. ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವರು ಸ್ಪಾಟ್ ಬುಕ್ಕಿಂಗ್ ಮಾಡಿಯೇ ಹೋಗಿ ಸ್ಪಾಟ್ ಬುಕ್ಕಿಂಗ್ ಮಾಡದೇ ಹೋಗಬೇಡಿ. ಹಾಗೇ ಅಲ್ಲಿನ ಸೌಲಭ್ಯಗ ಬಗ್ಗೆ ತಿಳಿದು ನೋಡಿ ಹೋಗಿ. ಎರಡು ದಿನ ಲೇಟ್ ಆದ್ರೂ ಪರವಾಗಿಲ್ಲ. ಅಲ್ಲಿ ಹೋಗಿ ಆ ರಷ್‌ನಲ್ಲಿ ಪರದಾಡಬೇಡಿ..
ಇದು ಒಂದ್ಕಡೆಯಾದ್ರ ಅಮಿಬಾ ಜ್ವರ ಭಕ್ತರಿಗೆ ಮತ್ತಷ್ಟು ಭಯ ಹುಟ್ಟಿಸಿದೆ. ಈಗಾಲೇ ಈ ವೈರಸ್ ಬಗ್ಗೆ ಕೇರಳ ಸರ್ಕಾರ ಗೈಡ್‌ಲೈನ್ ಹೊರಡಿಸಿದೆ. ಈಗ ನಮ್ಮ ರಾಜ್ಯದ ಆರೋಗ್ಯ ಇಲಾಖೆ ಕೂಡ ಈ ಭಕ್ತರಿಗೆ ಸಲಹೆ ನೀಡಿದೆ. ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್ ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಅಂದ್ರೆ ಕೇರಳದಲ್ಲಿ ಸ್ನಾನ ಮಾಡಿದ 7 ದಿನಗಳ ಒಳಗೆ ಜ್ವರ ತೀವು ತಲೆನೋವು, ವಾಕರಿಕೆ/ ವಾಂತಿ, ಕುತ್ತಿಗೆ ಬಿಗಿತ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಯಾದ್ರೆ ನಿರ್ಲಕ್ಷ್ಯ ಮಾಡದೇ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಲು ಸೂಚನೆ ನೀಡಲಾಗಿದೆ. ಇನ್ನೂ ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ. ನಿಂತ ನೀರಿನಲ್ಲಿ ಈ ವೈರಸ್ ಇದ್ದು, ಅದು ನಮ್ಮ ಮೂಗಿನ ಮೂಲಕ ಮೆದಳನ್ನ ಸೇರಿ ಹಾನಿ ಮಾಡುತ್ತೆ.. ಆದಷ್ಟು ಅಯ್ಯಪ್ಪ ಭಕ್ತರು ಈ ಬಗ್ಗೆ ಎಚ್ಚರಿಕೆ ವಹಿಸಿ, ಹಾಗೇ ಅಲ್ಲಿನ ವ್ಯವಸ್ಥೆಗಳ ಬಗ್ಗೆ ತಿಳಿದುಕೊಂಡು ಮುಂಜಾಗ್ರತೆಯಿಂದ ಹೋಗಿ. ಈ ಮಾಹಿತಿಯನ್ನ ಆದಷ್ಟು ಶೇರ್ ಮಾಡಿ.

ನೋಡಿರಿ

