ಈ ದಿನದಂದು ಶಬರಿಮಲೆಯಲ್ಲಿ ವಿಶೇಷ ಪೂಜೆ! – ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಇದ್ಯಾ?

ಅಯ್ಯಪ್ಪ ಸ್ವಾಮಿ ಅಂದ್ರೆ ಭಕ್ತಿ. ಅದೆಷ್ಟೋ ಭಕ್ತರು ಒಮ್ಮೆಯಾದ್ರೂ ಅಯ್ಯಪ್ಪನ ದರ್ಶನ ಪಡೆಯಬೇಕು ಎಂದು ಕಾಯ್ತಾ ಇರ್ತಾರೆ. ಅಷ್ಟೇ ಮಡಿಯಿಂದ ದೂರದ ಊರುಗಳಿಂದ ದೇವರ ದರ್ಶನಕ್ಕೆ ಬರ್ತಾರೆ. ಇದೀಗ ಅಯ್ಯಪ್ಪನ ಭಕ್ತರಿಗೆ ಮಹತ್ವದ ಸುದ್ದಿಯಿದೆ. ಈ ದಿನದಂದು ಶಬರಿಮಲೆಯಲ್ಲಿ ವಿಶೇಷ ಪೂಜೆ ನಡೆಯಲಿದೆ.
ಇದನ್ನೂ ಓದಿ: ರಾತ್ರಿ ವೇಳೆ ಲೇಟ್ ಆಗಿ ನಿದ್ದೆ ಬರ್ತಿದ್ಯಾ? – ಈ ಒಂದು ತಪ್ಪು ನಿಮ್ಮ ನಿದ್ದೆ ಕೆಡಿಸುತ್ತೆ ಹುಷಾರ್!
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಹೋಗುವ ಭಕ್ತರಿಗೆ ಮಹತ್ವದ ಸುದ್ದಿ. ಮೇ ತಿಂಗಳಲ್ಲಿ 14 ರಿಂದ 19 ರವರೆಗೆ ಇಡವ ಮಾಸ ಮಾಸಿಕ ಪೂಜೆ ಮತ್ತು ಅತ್ಯಂತ ವಿಶೇಷವಾದ ವಿಗ್ರಹ ಪ್ರತಿಷ್ಠಾಪನಾ ಪೂಜೆ ಮೇ 25 (ಸಂಜೆ 5) ರಿಂದ 26 (ರಾತ್ರಿ 10) ರವರೆಗೆ ಇದೆ. ಈ ವೇಳೆ ಭಕ್ತರಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಇನ್ನು ಜೂನ್ 14 ರಿಂದ 19 ರವರೆಗೆ ಮಿಥುನ ಮಾಸ ಮಾಸಿಕ ಪೂಜೆ, ಜುಲೈ 16 ರಿಂದ 21 ರವರೆಗೆ ಕರ್ಕಿಡಕ ಮಾಸ ಮಾಸಿಕ ಪೂಜೆ, ಆಗಸ್ಟ್ 16 ರಿಂದ 21 ರವರೆಗೆ ಚಿಂಗಮ್ ಮಾಸ ಮಾಸಿಕ ಪೂಜೆ ನಡೆಯಲಿದ್ದು, ಆಗಸ್ಟ್ ತಿಂಗಳಲ್ಲೇ ಓಣಂ ಪೂಜೆ ಆಗಸ್ಟ್ 24 ರಿಂದ 28 ರವರೆಗೆ (ಸಂಜೆ 5 ರಿಂದ ರಾತ್ರಿ 10) ಹಾಗೂ ಓಣಂ ದಿನ ಆಗಸ್ಟ್ 26 ರಂದು ಇದೆ. ಸೆಪ್ಟೆಂಬರ್ 16 ರಿಂದ 21 ರವರೆಗೆ ಕನ್ನಿ ಮಾಸ ಮಾಸಿಕ ಪೂಜೆ, ಅಕ್ಟೋಬರ್ 17 ರಿಂದ 22 ರವರೆಗೆ ತುಲಾ ಮಾಸ ಮಾಸಿಕ ಪೂಜೆ ನಡೆಯಲಿದೆ.
ನವೆಂಬರ್ನಲ್ಲಿ ನವೆಂಬರ್ 6 ರಿಂದ 7 ರವರೆಗೆ ಶ್ರೀ ಚಿತ್ರ ಅಟ್ಟ ತಿರುನಾಳ್ ಮತ್ತು ನವೆಂಬರ್ 16 ರಿಂದ ಡಿಸೆಂಬರ್ 27 ರವರೆಗೆ ನಡೆಯುವ ಅತ್ಯಂತ ಪ್ರಮುಖವಾದ ಮಂಡಲ ಪೂಜಾ ಮಹೋತ್ಸವ ಇದೆ. ಡಿಸೆಂಬರ್ 27 ರಂದು ಮಂಡಲ ಪೂಜೆ, ಮತ್ತೆ ಡಿಸೆಂಬರ್ 30, 2026 ರಿಂದ ಜನವರಿ 20, 2027 ರವರೆಗೆ ಮಕರವಿಳಕ್ಕು ಮಹೋತ್ಸವ — ಜನವರಿ 14, 2027 ರಂದು ಮಕರವಿಳಕ್ಕು ದಿನ.
ದರ್ಶನ ಸಮಯ ಬೆಳಗ್ಗೆ 5 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಮಧ್ಯಾಹ್ನ 3-4 ರಿಂದ ರಾತ್ರಿ 10 ಗಂಟೆವರೆಗೆ ಇರಲಿದ್ದು, ತಿಂಗಳ ಪೂಜಾ ದಿನಗಳಂದೂ sabarimalaonline.org ಮೂಲಕ Virtual Queue / ಆನ್ಲೈನ್ ಸ್ಲಾಟ್ ಬುಕ್ ಮಾಡಿಕೊಳ್ಳುವುದು ಉತ್ತಮ.

ನೋಡಿರಿ

