ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಶಾಕ್!- ಕೇರಳದಲ್ಲಿ ಟಫ್ ರೂಲ್ಸ್
ಕರ್ನಾಟಕ ಭಕ್ತರಿಗೆ ಹೀಗ್ಯಾಕೆ?

ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಶಾಕ್!-  ಕೇರಳದಲ್ಲಿ ಟಫ್ ರೂಲ್ಸ್ಕರ್ನಾಟಕ ಭಕ್ತರಿಗೆ ಹೀಗ್ಯಾಕೆ?

ಶಬರಿಮಲೆಯಲ್ಲಿ ನಡೆಸಿರೋ ಅಯ್ಯಪ್ಪನಿಗೆ ಕೋಟಿ ಕೋಟಿ ಭಕ್ತರಿದ್ದಾರೆ. ಕೇರಳ ಮಾತ್ರ ಅಲ್ಲದೇ ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿದಂತೆ ದೇಶದ ನಾನಾ ಭಕ್ತ ಶ್ರದ್ಧ ಭಕ್ತಿಯಿಂದ ವೃತ ಮಾಡಿ ಅಯ್ಯಪ್ಪನ ದರ್ಶನವನ್ನ ಪಡೆಯುತ್ತಾರೆ. ಈಗ ಮಂಡಲ ಪೂಜೆ ಆರಂಭ ಆಗಿದ್ದು, ದಿನಕ್ಕೆ ಲಕ್ಷಾಂತರ ಭಕ್ತರು ಕೇರಳಕ್ಕೆ ಹೋಗುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಶಬರಿಮಲೆಯತ್ತ ಯಾತ್ರೆ ಹೊರಟಿದ್ದಾರೆ. ಆದರೆ ಈ ಬಾರಿ ಕೇರಳ ಸರ್ಕಾರವು ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಶಾಕ್‌ ನೀಡಿದೆ. ಕೇರಳದಲ್ಲಿ ಮೆದುಳು ಜ್ವರ ಅಥವಾ ಅಮಿಬಾ ಜ್ವರ ಜನರ ಜೀವ ತೆಗೆಯುತ್ತಿದ್ದು, ಭಕ್ತರಿಗೆ ಇದ್ರಿಂದ ತೊಂದ್ರೆ ಆಗದಂತೆ ಟಫ್ ರೂಲ್ಸ್ ತರಲಾಗಿದೆ.

ಇದನ್ನೂ ಓದಿ: ಸಂಪುಟ ಪುನಾರಚನೆಗೆ ಹೈಕಮಾಂಡ್‌ ಗ್ರೀನ್‌ಸಿಗ್ನಲ್!‌ – ಸಿಎಂ ಸಿದ್ದರಾಮಯ್ಯ ಭೇಟಿಯಾದ ಶಾಸಕರು

ನಮ್ಮ ದೇಶದಲ್ಲಿ ಯಾವುದೇ ದೊಡ್ಡ ಕಾಯಿಲೆ ಬರುವುದು ಕೇರಳದಿಂದಲೇ.. ಈಗ ಕೂಡ ಕೇರಳದಲ್ಲಿ ಮೆದುಳು ಜ್ವರನ್ನ ಕಾಡುತ್ತಿದೆ. ಈ ಕಾಯಿಲೆಗೆ ಈಗ ಸಾಕಷ್ಟು ಬಲಿ ಆಗಿದೆ. ಈ ನಡುವೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಓಪನ್ ಆಗಿದ್ದು, ದಿನಕ್ಕೆ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಮೆದಳು ಜ್ವರದಿಂದಾಗಿ  ಕೇರಳ ಆರೋಗ್ಯ ಇಲಾಖೆಯು ಶಬರಿಮಲೆ ಭಕ್ತರ ಸಾಕಷ್ಟು ರೂಲ್ಸ್ ತಂದಿದೆ.

ಅಯ್ಯಪ್ಪ ಭಕ್ತರಿಗೆ ರೂಲ್ಸ್ 

* ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಯಾತ್ರಿಕರು ತಮ್ಮ ಆರೋಗ್ಯ ದಾಖಲೆಗಳು ಮತ್ತು ಔಷಧಿ  ಜೊತೆಯಲ್ಲೇ ತೆಗೆದುಕೊಂಡು ಹೋಗಬೇಕು

*ಶಬರಿಮಲೆ ಯಾತ್ರೆಗೆ ತಯಾರಿ ನಡೆಸುವಾಗ ನಿಯಮಿತ ಔಷಧಿಗಳನ್ನು ನಿಲ್ಲಿಸಬಾರದು

*  ಶಬರಿಮಲೆ ನದಿಗಳಲ್ಲಿ ಸ್ನಾನ ಮಾಡುವ ಭಕ್ತರು ತಮ್ಮ ಮೂಗಿಗೆ ನೀರು ಬರದಂತೆ ನೋಡಿಕೊಳ್ಳಬೇಕು

* ಭಕ್ತರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಶಬರಿಮಲೆ ಯಾತ್ರೆಗೆ ಮುಂಚಿನ ದಿನಗಳಲ್ಲಿ ನಡಿಗೆಯಂತಹ ಸರಳ ವ್ಯಾಯಾಮವನ್ನು ಶಿಫಾರಸು

* ಆರೋಗ್ಯ ಸಮಸ್ಯೆಯಾದ್ರೆ ವೈದ್ಯಕೀಯ ಸಹಾಯವನ್ನು ಪಡೆಯಲು ಸೂಚನೆ

* ತುರ್ತು ಸಂದರ್ಭಗಳಲ್ಲಿ ಭಕ್ತರು 04735 203232 ಸಂಖ್ಯೆ ಸಂಪರ್ಕ

* ಭಕ್ತರು ಕಾಯಿಸಿದ ನೀರನ್ನು ಮಾತ್ರ ಕುಡಿಯಿರಿ, ತಿನ್ನುವ ಮೊದಲು ಕೈ ತೊಳೆಯಿರಿ, ತೊಳೆದ ಹಣ್ಣುಗಳನ್ನು ಸೇವಿಸಿ, ಉತ್ತಮ ಆಹಾರವನ್ನು ಸೇವಿಸಲು ಸಲಹೆ

* ಶಬರಿಮಲೆಯಲ್ಲಿ ಬಯಲು ಮಲವಿಸರ್ಜನೆ ನಿಷೇಧ, ಶೌಚಾಲಯಗಳನ್ನು ಬಳಸಿದ ನಂತರ ಸರಿಯಾಗಿ ಕೈ ತೊಳೆಯಬೇಕು

* ಕಸವನ್ನ  ತೊಟ್ಟಿಗಳಲ್ಲಿ ಮಾತ್ರವೇ ಹಾಕಬೇಕು

*  ಹಾವು ಕಡಿತದ ಸಂದರ್ಭದಲ್ಲಿ, ಯಾತ್ರಿಕರು ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು

* ರಾತ್ರಿಯ ಸಮಯದಲ್ಲಿ ಯಾವುದೇ ಭಕ್ತರಿಗೆ ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಚಾರಣ ಮಾಡಲು ಅವಕಾಶ ಇರಲ್ಲ

ಭಕ್ತರಿಗೆ ವ್ಯವಸ್ಥೆ ಹೇಗಿದೆ?

* ಶಬರಿಮಲೆ ತೀರ್ಥಯಾತ್ರೆಯ ಮಾರ್ಗಗಳಲ್ಲಿ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ತರಬೇತಿ ಪಡೆದ ಸ್ವಯಂಸೇವಕ ಆರೋಗ್ಯ ಕಾರ್ಯಕರ್ತರ  ನಿಯೋಜನೆ

* ಎಲ್ಲ ಭಾಷೆಗಳಲ್ಲಿ ಜಾಗೃತಿ ಸಾಮಗ್ರಿ ಸಿದ್ಧ

* ಪಂಪಾದಿಂದ ಸನ್ನಿಧಾನಕ್ಕೆ ಹೋಗುವ ಮಾರ್ಗದಲ್ಲಿ ತುರ್ತು ವೈದ್ಯಕೀಯ ಕೇಂದ್ರ

*ಪತ್ತನಂತಿಟ್ಟ ಜನರಲ್ ಆಸ್ಪತ್ರೆಯಲ್ಲಿ ತುರ್ತು ಹೃದ್ರೋಗ ಸೇವೆ

* ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗಳಿಗೆ ಆಂಬ್ಯುಲೆನ್ಸ್‌ ಲಭ್ಯ

* ಸನ್ನಿಧಾನಂ ಮತ್ತು ಪಂಪಾ ನಡುವೆ ವಿಶೇಷ ಆಂಬ್ಯುಲೆನ್ಸ್ ಸೇವೆ

Kishor KV