ಲೀಗ್ ಪಂದ್ಯದಲ್ಲಿ ಯುಎಇ ವಿರುದ್ಧ ಭರ್ಜರಿಯಾಗಿ ಗೆದ್ದ ದಕ್ಷಿಣ ಆಫ್ರಿಕಾ

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ಕ್ಕೆ ಅರ್ಹತೆ ಪಡೆದಿರುವ ದಕ್ಷಿಣ ಆಫ್ರಿಕಾ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿಯೂ ಯುಎಇ ವಿರುದ್ಧ ಆರು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಕಾರ್ಬಿನ್ ಬಾಷ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಯುಎಇ 20 ಓವರ್‌ಗಳನ್ನು ಮುಗಿಸಿದರೂ ಕೇವಲ 122 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಕೇವಲ 13.2 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 123 ರನ್‌ಗಳನ್ನು ಗಳಿಸಿ ಗೆದ್ದು ಬೀಗಿತು. ಸಿ ಗುಂಪಿನಲ್ಲಿ ಹರಿಣ ಪಡೆ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಲೀಗ್ ಹಂತವನ್ನು ಮುಗಿಸಿತು.
ಇದನ್ನೂ ಓದಿ: ಲಾರಿ ಮತ್ತು ಬೈಕ್ ಡಿಕ್ಕಿ – ಗಂಡ, ಹೆಂಡತಿ, ಮಗು ಸ್ಥಳದಲ್ಲೇ ಸಾ*ವು
ಯುಎಇ ನೀಡಿದ್ದ 123 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಇನಿಂಗ್ಸ್ ಆರಂಭಿಸಿದ ಏಡೆನ್ ಮಾರ್ಕ್ರಮ್ ಹಾಗೂ ಕ್ವಿಂಟನ್ ಡಿ ಕಾಕ್ ಮೊದಲನೇ ವಿಕೆಟ್‌ಗೆ 32 ರನ್ ಗಳಿಸಿತು. ಕೇವಲ 11 ಎಸೆತಗಳಲ್ಲಿ 28 ರನ್ ಸಿಡಿಸಿದ ಏಡೆನ್ ಮಾರ್ಕ್ರಮ್ ಸ್ಪೋಟಕ ಆರಂಭವನ್ನು ಪಡೆದಿದ್ದರು. ಆದರೆ, ಅವರು ಹೈದರ್ ಅಲಿ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಕ್ವಿಂಟನ್ ಡಿ ಕಾಕ್ ಕೇವಲ 14 ರನ್ ಗಳಿಸಿ ಔಟ್ ಆದರು.
ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ರಯಾನ್ ರಿಕೆಲ್ಟನ್ ಹಾಗೂ ಡೆವಾಲ್ಡ್ ಬ್ರೆವಿಸ್ ಅವರು ಮೂರನೇ ವಿಕೆಟ್‌ಗೆ 49 ರನ್‌ಗಳನ್ನು ಕಲೆ ಹಾಕಿದರು. ಅದ್ಭುತವಾಗಿ ಬ್ಯಾಟ್ ಮಾಡಿದ ರಯಾನ್ ರಿಕೆಲ್ಟನ್ ಅವರು 16 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ 30 ರನ್ ಚಚ್ಚಿದರು. ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಡೆವಾಲ್ಡ್ ಬ್ರೆವಿಸ್ ಅವರು, 25 ಎಸೆತಗಳಲ್ಲಿ 36 ರನ್‌ಗಳನ್ನು ಸಿಡಿಸಿದರು. ಈ ಇಬ್ಬರೂ ಪಂದ್ಯವನ್ನು ಮುಗಿಸುವಲ್ಲಿ ವಿಫಲರಾದರು. ಆದರೆ, ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್ ಹಾಗೂ ಜೇಸನ್ ಸ್ಮಿತ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ನೋಡಿರಿ

