ಸರಿಗಮಪ ವಿನ್ನರ್ ಪ್ರಗತಿ ಬಡಿಗೇರ್ – ರಾಕ್ ಸ್ಟಾರ್ ಶಿವಾನಿ ರನ್ನರ್ ಅಪ್

ಸರಿಗಮಪ ವಿನ್ನರ್ ಪ್ರಗತಿ ಬಡಿಗೇರ್ – ರಾಕ್ ಸ್ಟಾರ್ ಶಿವಾನಿ ರನ್ನರ್ ಅಪ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಶೋ ಸರಿಗಮಪ ಕರುನಾಡ ಜನತೆಯ ಮನಗೆದ್ದಿದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಶೋನಲ್ಲಿ ಭಾಗವಹಿಸಿದ್ದು ತಮ್ಮ ಸುಮಧುರ ಕಂಠದಿಂದ ಜನಮನ ಗೆದ್ದಿದ್ದಾರೆ. ಇದೀಗ ಸರಿಗಮಪ ಸೀಸನ್ 19 ಗ್ರ್ಯಾಂಡ್ ಫಿನಾಲೆ ಮುಗಿದಿದ್ದು, ವಿನ್ನರ್ ಪಟ್ಟ ಪ್ರಗತಿ ಬಡಿಗೇರ್ ಮುಡಿಗೇರಿದೆ.

ಕೊಪ್ಪಳದಲ್ಲಿ ಸರಿಗಮಪ ಸೀಸನ್ 19 ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆದಿದ್ದು, ಪ್ರಗತಿ ಬಡೆಗೇರ್ ಸರಿಗಮಪ ಸೀಸನ್ 19 ನ ವಿನ್ನರ್ ಪಟ್ಟ ಅಲಂಕರಿಸಿದ್ದಾಳೆ. ರನ್ನರ್ ಅಪ್ ಪಟ್ಟವನ್ನು ಶಿವಾನಿ ಅಲಂಕರಿಸಿದ್ದರೆ, 2nd ರನ್ನರ್ ಅಪ್ ಪಟ್ಟ ತನುಶ್ರೀ  ಮುಡಿಗೇರಿದೆ.

ಇದನ್ನೂ ಓದಿ: ಅಭಿಮಾನಿಗಳ ಮನಗೆದ್ದ ಶಾಕುಂತಲೆ – ಸಮಂತಾ ಅಭಿನಯಕ್ಕೆ ಫ್ಯಾನ್ಸ್ ಫಿದಾ

ಹಾಡು ಕುಟುಂಬದ ಹೆಮ್ಮೆಯ ಮಗಳಾದ ಪ್ರಗತಿ ಬಡಿಗೇರ್ ಗೆ 21 ಲಕ್ಷ ರೂಪಾಯಿ ಬೆಲೆ ಬಾಳುವ 30-40 ಸೈಟ್ ಹಾಗೂ 4 ಲಕ್ಷ ರೂಪಾಯಿಯ ಕ್ಯಾಶ್ ಸಿಕ್ಕಿದೆ. ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಕಡೆಯಿಂದ ಟ್ರೋಫಿ ನೀಡಲಾಗಿದೆ. ಜೊತೆಗೆ ಗಾನ ಕೋಗಿಲೆ ಚಿತ್ರಾ ಕೈ ಜೊತೆಗೆ ಮೈಕ್ ಇರುವ ನೆನಪಿನ ಕಾಣಿಕೆಯೂ ಸಿಕ್ಕಿದೆ. ಈ ವೇಳೆ ಮಾತನಾಡಿದ ಪ್ರಗತಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾಳೆ.

ಇನ್ನು ರನ್ನರ್ ಅಪ್ ಶಿವಾನಿಗೆ 20 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದ್ದು, ಶಿವಾನಿ ರಾಕ್ ಸ್ಟಾರ್ ಅಂತಾ ಗುರುತಿಸಿಕೊಂಡಳು. 2nd ರನ್ನರ್ ಅಪ್ ಮಂಗಳೂರಿನ ಹುಡುಗಿ ತುನಶ್ರೀಗೆ 5 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ.

ಪೈನಲ್ ಗೆ ಪ್ರಗತಿ ಬಿ ಬಡಿಗೇರ್, ತನುಶ್ರೀ, ಕುಶಿಕ್, ಶಿವಾನಿ, ರೇವಣಸಿದ್ಧ, ಗುರುಪ್ರಸಾದ್ ಬಂದಿದ್ದರು. ಎಲ್ಲರ ಜೊತೆ ಪೈಪೋಟಿ ನಡೆಸಿ, ಪ್ರಗತಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

suddiyaana