ಒಂದೇ ಉಸಿರಲ್ಲಿ ಹಾಡಿದ ಎಕ್ಸ್ ಪ್ರೆಷನ್ ಕಿಂಗ್ ಅಮೋಘವರ್ಷ – ಸರಿಗಮಪ ವಿನ್ನರ್ ಇವನೇನಾ?

ಅಮೋಘವರ್ಷ.. ವಯಸ್ಸು ಜಸ್ಟ್ 14.. ಸದ್ಯ ಸರಿಗಮಪ ಸೀಸನ್ 21 ರಲ್ಲಿ ಈತನದ್ದೇ ಹವಾ.. ಟ್ಯಾಲೆಂಟ್ ಇದ್ರೆ ಏಜ್ ಮ್ಯಾಟರ್ ಆಗಲ್ಲ ಅಂತಾ ತನ್ನ ಕಂಠದಿಂದಲೇ ಫ್ರೂವ್ ಮಾಡಿದ ಪುಟ್ಟ ಪೋರ.. ಪ್ರತಿವಾರ ಹಾಡಿಗೆ ತಕ್ಕಂತೆ ಎಕ್ಸ್ ಪ್ರೆಷನ್ ಕೊಟ್ಟು ಜಡ್ಜಸ್ ಮಾತ್ರವಲ್ಲದೇ ವೀಕ್ಷಕರ ಮನಸ್ಸಿಗೂ ಹತ್ತಿರವಾಗಿದ್ದಾನೆ. ಈ ವಾರ ಕೂಡ ಅಮೋಘವರ್ಷ ‘ಒಂದೇ ಉಸಿರಂತೆ’ ಹಾಡನ್ನು ಒಂದೇ ಉಸಿರಲ್ಲಿ ಹಾಡಿ ಎಲ್ರನ್ನೂ ಫಿದಾ ಮಾಡಿದ್ದಾನೆ.
ಇದನ್ನೂ ಓದಿ: ಭಯೋತ್ಪಾದಕರ ವಿರುದ್ಧ ಸೇನೆಯಿಂದ ಕೂಂಬಿಂಗ್ – ಇಬ್ಬರು ಉಗ್ರರ ಮನೆ ಧ್ವಂಸ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಸರಿಗಮಪ ಕೂಡ ಒಂದು. 2006 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ ಈ ಶೋನಿಂದ ಸಾಕಷ್ಟು ಪ್ರತಿಭಾವಂತರು ಬೆಳಕಿಗೆ ಬಂದಿದ್ದಾರೆ. ಈ ವೇದಿಕೆ ಮೂಲಕವೇ ಕನ್ನಡ ಸಿನಿಮಾರಂಗಕ್ಕೆ ಅದ್ಭುತ ಗಾಯಕರ ಪರಿಚಯ ಆಗಿದ್ದಾರೆ. ಸರಿಗಮಪ ಸೀಸನ್ 21 ರಲ್ಲೂ 6 ವರ್ಷ ದಿಂದ 60 ವರ್ಷದ ವರೆಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಸೀಸನ್ ನಲ್ಲಿ ಹೆಚ್ಚು ಸದ್ದು ಮಾಡ್ತಿರೋದು ಅಂದ್ರೆ ಅಮೋಘವರ್ಷ.. 14 ವರ್ಷದ ಈ ಪೋರ ಈಗ ತನ್ನ ಗಾಯನದ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದಾನೆ. ಮೆಗಾ ಆಡಿಷನ್ ನಲ್ಲೇ ನಾನು ಯಾರು? ಯಾವ ಊರು ಇಲ್ಲಿ ಯಾರೂ ಬಲ್ಲವರಿಲ್ಲ ಅಂತಾ ಹಾಡಿನ ಮೂಲಕ ಕಿಚ್ಚು ಹಚ್ಚಿದ್ದ.. ಅಷ್ಟೇ ಅಲ್ಲ ಹಾಡಿನ ಪ್ರತಿ ಸಾಲಿಗೂ ಒಂದೊಂದು ಎಕ್ಸಪ್ರೆಷನ್ ಕೊಟ್ಟು ಜಡ್ಜಸ್ ಮನಗೆದ್ದಿದ್ದ.. ಇದೀಗ ಅಮೋಘವರ್ಷ ಟ್ಯಾಲೆಂಟ್ ಇದ್ರೆ ವಯಸ್ಸು ಮ್ಯಾಟರ್ ಆಗಲ್ಲ.. ಅಂತಾ ತೋರಿಸಿಕೊಟ್ಟಿದ್ದಾನೆ. ಪ್ರತಿ ವಾರ ಘಟಾನುಘಟಿ ಸ್ಪರ್ಧಿಗಳಿಗೆ ತನ್ನ ಗಾಯನದ ಮೂಲಕವೇ ಠಕ್ಕರ್ ಕೊಡ್ತಿದ್ದಾನೆ.
ಹೌದು, ಪ್ರತಿವಾರ ಸರಿಗಮಪ ವೇದಿಕೆಯಲ್ಲಿ ಅಮೋಘವರ್ಷ ಅಮೋಘ ಪ್ರದರ್ಶನ ನೀಡ್ತಾ ಬಂದಿದ್ದಾನೆ. ಕೊಟ್ಟ ಎಲ್ಲಾ ಟಾಸ್ಕ್‌ಗಳನ್ನ ಕಂಪ್ಲೀಟ್ ಮಾಡ್ತಿದ್ದಾನೆ. ಈ ಪುಟ್ಟ ಪೋರನ ಇನ್ನೊಂದು ವಿಶೇಷತೆ ಏನಂದ್ರೆ,, ತನ್ನ ಹಾಡಿನಲ್ಲಿ ತನ್ನದೇ ಸ್ಟೈಲ್ ಕಂಡುಕೊಂಡಿದ್ದಾನೆ. ತನ್ನ ಸ್ವರದ ಮೂಲಕವೇ ಹಾಡಿಗೆ ಹೊಸ ಟಚ್ ಕೊಟ್ಟು, ಅದಕ್ಕೆ ತಕ್ಕಂತೆ ಎಕ್ಸ್‌ಪ್ರೆಷನ್ ನೀಡ್ತಾ ಬಂದಿದ್ದಾನೆ. ಇದು ಎಲ್ಲರಿಗೂ ಇಷ್ಟ ಆಗ್ತಿದೆ. ಹೀಗಾಗೇ ಅಮೋಘನನ್ನ ಎಕ್ಸ್‌ಪ್ರೆಷನ್ ಕಿಂಗ್ ಅನ್ನೋ ಬಿರುದು ಸಿಕ್ಕಿದೆ. ಈ ವಾರ ಕೂಡ ಅಮೋಘವರ್ಷ ಕಷ್ಟಕರವಾದ ಹಾಡು ಹಾಡಿ ಜಡ್ಜಸ್ ಮನ ಗೆದ್ದಿದ್ದಾನೆ. ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ನಾನು ನೀನು ಸಾಂಗ್ ಅನ್ನ ಅದ್ಬುತವಾಗಿ ಹಾಡಿದ್ದಾನೆ..
1999 ರ ಸ್ನೇಹಲೋಕ ಸಿನಿಮಾವನ್ನ, ಎಸ್. ಮಹೇಂದರ್ ನಿರ್ದೇಶಿಸಿದ್ದಾರೆ.. ಎನ್. ಭಾರತಿ ದೇವಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ರಾಮ್ ಕುಮಾರ್, ಶಶಿಕುಮಾರ್, ವಿನೋದ್ ರಾಜ್ ಮತ್ತು ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ರು. ಈ ಸಿನಿಮಾದ ಒಂದೇ ಉಸಿರಂತೆ ನಾನು ನೀನು ಹಾಡನ್ನ ರಾಜೇಶ್ ಕೃಷ್ಣನ್ ಮತ್ತು ಚಿತ್ರಾ ಹಾಡು ಹಾಡಿದ್ರು. ಇದೀಗ ಇದೇ ಹಾಡನ್ನ ಅಮೋಘವರ್ಷ ಹಾಗೂ ಆರಾಧ್ಯ ರೀಕ್ರಿಯೇಟ್ ಮಾಡಿದ್ದಾರೆ. ಇವರಿಬ್ಬರ ಹಾಡನ್ನ ವಿಜಯ್ ಪ್ರಕಾಶ್ ಮೆಚ್ಚಿಕೊಂಡಿದ್ದಾರೆ. ಲೈವ್ ನಲ್ಲಿ ಈ ಹಾಡನ್ನ ಹಾಡೋದಿಕ್ಕೆ ಬರೀ ಲಂಗ್ಸ್ ಅಲ್ಲಿ ಅಲ್ಲ.. ಎದೆಯಲ್ಲಿ ಧಮ್ ಇರ್ಬೇಕು.. ಅಂತಾ ಹೇಳಿದ್ದಾರೆ. ಈ ಹಾಡನ್ನ ಹಾಡೋದು ಜೋಕ್ ಅಲ್ಲ ಅಂತಾ ಹೇಳಿ ಸ್ಟ್ಯಾಂಡಿಂಗ್ ಅವೇಷನ್ ಕೊಟ್ಟಿದ್ದಾರೆ ರಾಜೇಶ್ ಕೃಷ್ಣನ್ . ಇನ್ನು ಈ ವಾರ ಶೋ ಗೆ ಗೆಸ್ಟ್ ಆಗಿ ಬಂದ ಅನುಪ್ರಭಾಕರ್ ಕೂಡ ಮೆಚ್ಚಿಕೊಂಡಿದ್ದಾರೆ. ಜೀವನ ಪೂರ್ತಿ ಮರಿಯೋಕೆ ಸಾಧ್ಯ ಇಲ್ಲ ಅಂತಾ ಹೇಳಿ ಅಮೋಘವರ್ಷ ಹಾಗೂ ಆರಾಧ್ಯಳನ್ನ ಹಗ್ ಮಾಡಿದ್ದಾರೆ.
ಅಂದ್ಹಾಗೆ ಅಮೋಘವರ್ಷ ಬೆಳಗಾವಿ ಹುಡುಗ.. ಈತನಿಗೆ ಅಮೋಘವರ್ಷ ಅಂತಾ ನಾಮಕರಣ ಮಾಡಿದ್ದು ಜ್ಞಾನಪೀಠ ಪ್ರಶಸ್ತಿ ವಿಜೇತ, ಜನಪದ ರತ್ನ ಚಂದ್ರಶೇಖರ ಕಂಬಾರರು ಎಂದು ಹೇಳಲಾಗ್ತಿದೆ. ಈತನಿಗೆ ಸಿಂಗಿಂಗ್ ಅಂದ್ರೆ ತುಂಬಾ ಇಷ್ಟ ಅಂತೆ.. ಸಂಗೀತದಲ್ಲೇ ಸಾಧನೆ ಮಾಡ್ಬೇಕು ಅನ್ನೋ ಕನಸು ಇದೆ ಅಂತಾ ವೇದಿಕೆ ಮೇಲೆ ಹೇಳಿಕೊಂಡಿದ್ದಾನೆ. ಇವನ ಕನಸಿಗೆ ಬೆನ್ನೆಲುಬಾಗಿ ನಿಂತವರು ಆತನ ಫ್ಯಾಮಿಲಿ. ಇದೀಗ ಸರಿಗಮಪ ಮೂಲಕ ಕರುನಾಡಿನ ಜನರ ಮನ ಗೆದ್ದಿದ್ದಾನೆ. ಮುಂದಿನ ದಿನಗಳಲ್ಲಿ ಅಮೋಘ ಕೂಡ ಸಂಗೀತ ಲೋಕದಲ್ಲಿ ಖ್ಯಾತಿ ಗಳಿಸಲಿ ಅನ್ನೋದೇ ಎಲ್ಲರ ಆಶಯ.