FALLOW-ON ಅಸ್ತ್ರ ಕೈಬಿಟ್ಟ SA – 500+ ರನ್ಸ್.. ಡಿಕ್ಲೇರ್ ಘೋಷಿಸ್ತಾರಾ?
ಟೆಂಬಾ ರಣತಂತ್ರ.. ಎಡವಿದ್ದೆಲ್ಲಿ ಭಾರತ?

ಟೆಸ್ಟ್ ಮ್ಯಾಚ್ ನಡೀತಿರೋದು ಭಾರತದಲ್ಲೇ ಆದ್ರೂ ಡಾಮಿನೇಷನ್ ಮಾತ್ರ ಸೌತ್ ಆಫ್ರಿಕಾ ತಂಡದ್ದು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಅವ್ರದ್ದೇ ಪಾರುಪತ್ಯ. ಭಾರತ ಮ್ಯಾಚ್ ಗೆಲ್ಲೋದಿರ್ಲಿ ಡ್ರಾ ಮಾಡಿಕೊಳ್ಳೋದು ಕಷ್ಟನೇ ಇದೆ. ಇಂಥಾ ಸಿಚುಯೇಷನ್ನಲ್ಲಿ ಕ್ರಿಕೆಟ್ ಫ್ಯಾನ್ಸ್ಗೆ ಒಂದು ಡೌಟ್ ಕಾಡ್ತಿದೆ. ಅದೇನಂದ್ರೆ ಭಾರತ ಆಲೌಟ್ ಆದ್ಮೇಲೆ ಬಿಗ್ ಲೀಡ್ನಲ್ಲಿದ್ರೂ ಸೌತ್ ಆಫ್ರಿಕಾ ಯಾಕೆ ಭಾರತಕ್ಕೆ ಫಾಲೋ ಆನ್ ಹೇರಲಿಲ್ಲ ಅನ್ನೋದು. ಬಹುಶಃ ಟೆಂಬಾ ಈ ಪ್ಲ್ಯಾನ್ ಮಾಡಿದ್ರೆ ಮಂಗಳವಾರನೇ ಮ್ಯಾಚ್ ಮುಗಿತಿತ್ತು. ದಕ್ಷಿಣ ಆಫ್ರಿಕಾ ವಿನ್ ಆಗ್ತಿತ್ತು.
ಇದನ್ನೂ ಓದಿ : ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ – ಮುಹೂರ್ತದ ದಿನವೇ ನಿಂತ ಸ್ಮೃತಿ ಮಂಧಾನ ಮದುವೆ
ಗುವಾಹಟಿಯಲ್ಲಿ ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌತ್ ಆಫ್ರಿಕಾ ಫಸ್ಟ್ ಇನ್ನಿಂಗ್ಸ್ನಲ್ಲಿ ಆಲ್ಮೋಸ್ಟ್ ಒಂದೂಮುಕ್ಕಾಲು ದಿನ ಭಾರತೀಯ ಬೌಲರ್ಗಳ ಬೆವರಿಳಿಸಿದ್ರು. ಹಾಗೇ ಭಾರತದ ಇನ್ನಿಂಗ್ಸ್ ಸ್ಟಾರ್ಟ್ ಆದ್ಮೇಲೆ ಬೌಲರ್ಗಳ ಸರದಿ. ಬ್ಯಾಟರ್ಗಳನ್ನ ಕ್ರೀಸ್ ಕಚ್ಚಿ ನಿಲ್ಲೋಕೂ ಬಿಡ್ದೇ ಪೆವಿಲಿಯನ್ಗೆ ಅಟ್ಟಿದ್ರು. 1, 2, ಹಾಗೇ ಮೂರನೇ ದಿನದಾಟದಲ್ಲೂ ಅವ್ರದ್ದೇ ಮೇಲುಗೈ. ಹೀಗಿದ್ರೂ ಟೆಂಬಾ ಮಾಡಿದ ನಿರ್ಧಾರವೇ ಕನ್ಫ್ಯೂಸಿಂಗ್ ಆಗಿದೆ. ಫಾಲೋ ಆಲ್ ಹೇರೋಕೆ ಅವಕಾಶ ಇದ್ರೂ ಹೇರಿಲ್ಲ.
489 ರನ್ ಗಳ ಟಾರ್ಗೆಟ್.. 201 ರನ್ ಗಳಿಗೆ ಭಾರತ ಆಲೌಟ್!
ಸೌತ್ ಆಫ್ರಿಕಾ ಪೇರಿಸಿದ್ದ ರನ್ಗಳನ್ನ ನೋಡಿದ್ದಾಗ್ಲೆ ಈ ಮ್ಯಾಚ್ ಬಹುಶಃ ಡ್ರಾನಲ್ಲಿ ಕೊನೆಯಾಗುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರ ಆಗಿತ್ತು. ಯಾಕಂದ್ರೆ ಮೊದಲ ಎರಡು ದಿನವೂ ಬ್ಯಾಟಿಂಗ್ ಮಾಡಿದ್ದ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 489 ರನ್ಗಳನ್ನ ಪೇರಿಸಿ ಆಲೌಟ್ ಆಗಿತ್ತು. ಎರಡನೇ ದಿನದಾಟದ ಕೊನೆಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಭಾರತ ಮೂರನೇ ದಿನ ಮೂರನೇ ಸೆಷನ್ ಆರಂಭಕ್ಕೇ ಆಲೌಟ್ ಆಯ್ತು. ಅಷ್ಟು ದೊಡ್ಡ ಮೊತ್ತ ಇದ್ರೂ ಭಾರತದ ಬ್ಯಾಟಿಂಗ್ನಲ್ಲಿ ಸೀರಿಯಸ್ನೆಸ್ ಕಾಣ್ಲಿಲ್ಲ. ಯಶಸ್ವಿ ಜೈಸ್ವಾಲ್ ಅರ್ಧಶತಕ ಹಾಗೇ ವಾಷಿಂಗ್ಟನ್ ಸುಂದರ್ 48 ರನ್ ಗಳಿಸಿದ್ದು ಬಿಟ್ರೆ ಉಳಿದಿ ಬ್ಯಾಟರ್ಗಳಿಂದ ರನ್ಸ್ ಬರ್ಲಿಲ್ಲ. ಕುಲ್ದೀಪ್ 19 ರನ್ ಗಳಿಸಿ ಬೆಟರ್ ಎನಿಸಿಕೊಂಡ್ರು. ಈ ಮೂಲಕ 201 ರನ್ಗಳಿಗೆ ಭಾರತ ಆಲೌಟ್ ಆಯ್ತು. ಸೋ ಅಲ್ಲಿಗೆ ಮೊದಲ ಇನ್ನಿಂಗ್ಸ್ನಲ್ಲೇ ಸೌತ್ ಆಫ್ರಿಕಾ 288 ರನ್ಗಳ ಮುನ್ನಡೆ ಹೊಂದಿತ್ತು. ನಿಯಮಗಳ ಪ್ರಕಾರ 200 ರನ್ಗಳಿಗಿಂತ ಜಾಸ್ತಿ ಲೀಡ್ ಇದ್ದ ಕಾರಣ ಸೌತ್ ಆಫ್ರಿಕಾ ಭಾರತಕ್ಕೆ ಫಾಲೋ ಆನ್ ಹೇರೋ ಅವಕಾಶ ಇತ್ತು. ಅಂದ್ರೆ ಉಳಿದ 288 ರನ್ಗಳನ್ನ ಚೇಸ್ ಮಾಡೋಕೆ ಭಾರತ ಮತ್ತೆ ಇನ್ನಿಂಗ್ಸ್ ಆರಂಭಿಸಬೇಕಿತ್ತು. ಆದ್ರೆ ಸೌತ್ ಆಫ್ರಿಕಾ ನಾಯಕ ಟೆಂಬಾ ಬವುಮಾ ಅಚ್ಚರಿ ಎನ್ನುವಂತೆ ಫಾಲೋ ಆನ್ ಹೇರದಿರಲು ನಿರ್ಧಾರ ಮಾಡಿದ್ರು. ಌಂಡ್ 288 ರನ್ಗಳ ಲೀಡ್ನೊಂದಿಗೆ 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ್ರು. ಅದ್ರಂತೆ ದಕ್ಷಿಣ ಆಫ್ರಿಕಾ ಪರ ಆಡಂ ಮಾರ್ಕ್ರಂ ಮತ್ತು ರಿಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಿದ್ದು ಇಬ್ಬರೂ ಅದ್ಭುತ ಜೊತೆಯಾಟ ಆಡ್ತಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ 26 ರನ್ಗಳ ಜೊತೆಯಾಟದೊಂದಿಗೆ ಸದ್ಯ ಸೌತ್ ಆಫ್ರಿಕಾ 312 ರನ್ಗಳ ಮುನ್ನಡೆ ಸಾಧಿಸಿದೆ. ಬಹುಶಃ ಟೆಂಬಾ ಬವುಮಾ ನಿರ್ಧಾರ ನೋಡ್ತಿದ್ರೆ ನಾಲ್ಕನೇ ದಿನದಾಟದಲ್ಲಿ 500ಪ್ಲಸ್ ರನ್ಸ್ ಪೇರಿಸಿ ಡಿಕ್ಲೇರ್ ಘೋಷಣೆ ಮಾಡೋ ಚಾನ್ಸಸ್ ಇದೆ. ಬಿಗ್ ಟಾರ್ಗೆಟ್ ಬೆನ್ನತ್ತುವಾಗ ಭಾರತ ಒಂದು ಬೇಗನೇ ಔಟ್ ಆಗೋ ಚಾನ್ಸಸ್ ಇದೆ. ಅಥವಾ ಕಂಪ್ಲೀಟ್ ರನ್ಸ್ ಚೇಸ್ ಮಾಡೋಕೆ ಸಾಧ್ಯವಾಗದೇ ಡ್ರಾನಲ್ಲಿ ಕೊನೆಗೊಳ್ಬೋದು. ಬಟ್ ಭಾರತ ಈ ಪಂದ್ಯವನ್ನ ಗೆಲ್ಲುತ್ತೆ ಅನ್ನೋದು ಕಷ್ಟ. ಡ್ರಾನಲ್ಲಿ ಕೊನೆಗೊಳಿಸಿದ್ರೆ ಅದೇ ದೊಡ್ಡ ಸಾಧನೆಯಾಗುತ್ತೆ.
ಬುದ್ಧಿ ಕಲಿಯದ ಭಾರತ!
- ದೇಶೀ ಸ್ಟಾರ್ಸ್ ಕರುಣ್ & ಸರ್ಫರಾಜ್ ಕೈ ಬಿಟ್ಟದ್ದು
- ವೈಟ್ ಬಾಲ್ ಹೀರೋ ಸಾಯಿ ಸುದರ್ಶನ್ ಗೆ ಚಾನ್ಸ್
- ರಿಷಭ್ ಪಂತ್ ಇದ್ದಾಗ ಧ್ರುವ್ ಜುರೇಲ್ ಆಡಿಸಿದ್ದು
- ಹಳೇ ಬಾಲ್ ರಿವರ್ಸ್ ಸ್ವಿಂಗ್ ಕಿಂಗ್ ಶಮಿ ಕೈಬಿಟ್ಟದ್ದು
- ಮುತುಸ್ವಾಮಿ & ಯಾನ್ಸನ್ ವಿಕೆಟ್ ತೆಗೆಯುವಲ್ಲಿ ಫೇಲ್
ಹೀಗೆ ಭಾರತ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಹೆಜ್ಜೆ ಹೆಜ್ಜೆಗೂ ಎಡವುತ್ತಲೇ ಬಂದಿದೆ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡರಲ್ಲೂ ಸೌತ್ ಆಫ್ರಿಕಾಗಿಂದ ವೀಕ್ ಆಗಿ ಕಾಣ್ತಿದೆ. ಭಾರತದ ಪಿಚ್ನಲ್ಲಿ ಟೆಂಬಾ ಪಡೆ ಮೇಲುಗೈ ಸಾಧಿಸಿದೆ. ಸೋ ನಾಲ್ಕನೇ ದಿನದಾಟದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಸೌತ್ ಆಫ್ರಿಕಾವನ್ನ ಆಲೌಟ್ ಮಾಡಿ ಭಾರತ ಬ್ಯಾಟಿಂಗ್ ಶುರು ಮಾಡ್ಬೇಕು. ಕೊನೇ ದಿನದಾಟದ ಅಂತ್ಯದವರೆಗೂ ಬ್ಯಾಟಿಂಗ್ ಕಾಯ್ದುಕೊಂಡ್ರೆ ಮಾತ್ರವೇ ಡ್ರಾ ಆಗೋಕೆ ಚಾನ್ಸ್ ಇದೆ. ಇಲ್ಲಾಂದ್ರೆ ನ್ಯೂಜಿಲೆಂಡ್ನಂತೆಯೇ ಸೌತ್ ಆಫ್ರಿಕಾ ವಿರುದ್ಧ ಕ್ಲೀನ್ ಸ್ವೀಪ್ ಆಗೋದು ಗ್ಯಾರಂಟಿ.

ನೋಡಿರಿ

