ಪ್ರಧಾನಮಂತ್ರಿ ರಾಜ್ಯಸಭೆಗೆ ಬಂದರೆ ಏನಾಗಲಿದೆ?. ಮೋದಿ ಅವರು ಪರಮಾತ್ಮನೇ? – ಸದನದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ

ಪ್ರಧಾನಮಂತ್ರಿ ರಾಜ್ಯಸಭೆಗೆ ಬಂದರೆ ಏನಾಗಲಿದೆ?. ಮೋದಿ ಅವರು ಪರಮಾತ್ಮನೇ? – ಸದನದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಮಣಿಪುರದ ವಿಷಯಗಳ ಕುರಿತು ಚರ್ಚೆ ನಡೆಯಲಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಪ್ರಧಾನಮಂತ್ರಿ ರಾಜ್ಯಸಭೆಗೆ ಬಂದರೆ ಏನಾಗಲಿದೆ?. ಮೋದಿ ಅವರು ಪರಮಾತ್ಮನೇ? ಅವರೇನು ದೇವರಲ್ಲ. ರಾಜ್ಯಸಭೆಗೆ ಬಂದು ಉತ್ತರ ಕೊಡಲಿ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಕೋಪಗೊಂಡಿದ್ದರೆ ಸಿಎಂ ಬಿರೇನ್ ಸಿಂಗ್ ವಜಾ ಮಾಡಬಹುದಿತ್ತು – ಮಲ್ಲಿಕಾರ್ಜುನ ಖರ್ಗೆ ಟಾಂಗ್

ರಾಜ್ಯಸಭೆಯಲ್ಲಿ ಮಣಿಪುರ ಜನಾಂಗೀಯ ಸಂಘರ್ಷದ ಬಗ್ಗೆ ವಿರೋಧಪಕ್ಷಗಳ ಸದಸ್ಯರು ಮಾತನಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಬಂದು ಈ ಬಗ್ಗೆ ಮಾತನಾಡಬೇಕು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. ಆಡಳಿತ ಪಕ್ಷದ ಸದಸ್ಯರು ನಿಯಮ 167 ರ ಅಡಿಯಲ್ಲಿ ಚರ್ಚೆ ಮಾಡಲು ಒಪ್ಪಿಕೊಂಡಿದ್ದರು. ಸದನಕ್ಕೆ ಬರುತ್ತಿದ್ದಂತೆ ತಮ್ಮ ನಿಲುವು ಬದಲಾಯಿಸಿದ್ದಾರೆ. ಮಣಿಪುರ ಬಗ್ಗೆ ಚರ್ಚೆ ಮಾಡದಿರುವುದು ಯಾಕೆ? ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿ. ಪ್ರಧಾನಮಂತ್ರಿಯೂ ಬಂದು ಮಾತನಾಡಲಿ ಎಂದು ಹೇಳಿದರು. ಇದಕ್ಕೆ ಆಡಳಿತ ಪಕ್ಷದ ನಾಯಕರು ಗದ್ದಲ ಮಾಡಿದರು. ಇದರಿಂದ ಆಕ್ರೋಶಗೊಂಡ ಖರ್ಗೆ, ಪ್ರಧಾನಿ ಏನು ದೇವರಲ್ಲ, ಸದನಕ್ಕೆ ಬಂದು ಮಾತನಾಡಲಿ ಎಂದರು. ಖರ್ಗೆ ಮಾತಿಗೆ ಸದನದಲ್ಲಿ ಗದ್ದಲ ಹೆಚ್ಚಾಯಿತು.  ಕಲಾಪ ಮುಂದೂಡಿಕೆ ಮಾಡಲಾಯಿತು.

suddiyaana