ಎಸ್. ಎಲ್ ಭೈರಪ್ಪ ಅಂತಿಮ ಯಾನ – ಅಕ್ಷರ ಮಾಂತ್ರಿಕನಿಗೆ ಭಾವಪೂರ್ಣ ವಿದಾಯ

ಬದುಕಿನ ಯಾನ ಮುಗಿಸಿದ ಹಿರಿಯ ಸಾಹಿತಿ ಎಸ್. ಎಲ್ ಭೈರಪ್ಪ ಅವರಿಗೆ ಭಾವಪೂರ್ಣ ವಿದಾಯ ಹೇಳಲಾಗಿದೆ. ಸರ್ಕಾರಿ ಸಕಲ ಗೌರವಗಳೊಂದಿಗೆ ಅಕ್ಷರ ಮಾಂತ್ರಿಕನ ಅಂತ್ಯಕ್ರಿಯೆ ನೆರವೇರಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸರಸ್ವತಿ ಪುತ್ರ ಎಸ್.ಎಲ್ ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಿತು.
ಇದನ್ನೂ ಓದಿ:ರವೀಂದ್ರ ಕಲಾಕ್ಷೇತ್ರದಲ್ಲಿ ಸರಸ್ವತಿ ಪುತ್ರನಿಗೆ ಅಂತಿಮ ನಮನ – ಮೈಸೂರಿಗೆ ಭೈರಪ್ಪನವರ ಕೊನೆಯ ಯಾನ
ಅಕ್ಷರ ಮಾಂತ್ರಿಕ, ಕನ್ನಡ ಸಾಹಿತ್ಯವನ್ನ ಶ್ರೀಮಂತಗೊಳಿಸಿದ ಬರಹಗಾರ ಎಸ್.ಎಲ್ ಭೈರಪ್ಪ ಅವರ ಅಂತಿಮ ಯಾನ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆಯಿತು. ಹರಿಚ್ಚಂದ್ರ ಘಾಟ್ ನಲ್ಲಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಎಸ್.ಎಲ್ ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಿತು. ಶುಕ್ರವಾರ ಬೆಳಗ್ಗೆ 11 ಗಂಟೆಯ ನಂತರ ಪಾರ್ಥಿವ ಶರೀರವನ್ನು ಹರಿಚ್ಚಂದ್ರ ಘಾಟ್‌ಗೆ ಕೊಂಡೊಯ್ಯಲಾಯ್ತು. ಸರಸ್ವತಿ ಪುತ್ರನ ಅಂತ್ಯಕ್ರಿಯೆಯಲ್ಲಿ ರಾಜಕೀಯ ಗಣ್ಯರು ಭಾಗವಹಿಸಿದರು.
ಕಾದಂಬರಿ ಲೋಕದಲ್ಲಿ ಮಿನುಗುತಾರೆಯಂತೆ ಮಿನುಗಿದ ನಕ್ಷತ್ರ S.L ಭೈರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಲಾಯ್ತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯ್ತು. ಕೇಂದ್ರದ ಪ್ರತಿನಿಧಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಹೆಚ್. ಸಿ ಮಹಾದೇವಪ್ಪ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಂತ್ಯಕ್ರಿಯೆಯ ವಿಧಿವಿಧಾನಗಳು ಸರಳವಾಗಿ ಮತ್ತು ಅತ್ಯಂತ ಗೌರವಯುತವಾಗಿ ನೆರವೇರಿತು.

ನೋಡಿರಿ

