ರವೀಂದ್ರ ಕಲಾಕ್ಷೇತ್ರದಲ್ಲಿ ಸರಸ್ವತಿ ಪುತ್ರನಿಗೆ ಅಂತಿಮ ನಮನ – ಮೈಸೂರಿಗೆ ಭೈರಪ್ಪನವರ ಕೊನೆಯ ಯಾನ

ರವೀಂದ್ರ ಕಲಾಕ್ಷೇತ್ರದಲ್ಲಿ ಸರಸ್ವತಿ ಪುತ್ರನಿಗೆ ಅಂತಿಮ ನಮನ – ಮೈಸೂರಿಗೆ ಭೈರಪ್ಪನವರ ಕೊನೆಯ ಯಾನ

ಕರುನಾಡು ಕಂಡ ದಿಗ್ಗಜ ಸಾಹಿತಿ, ಸರಸ್ವತಿ ಪುತ್ರ ಎಸ್‌.‌ಎಲ್‌ ಭೈರಪ್ಪ ಇನ್ನು ನೆನಪು ಮಾತ್ರ. ಇವರ ಅಂತಿಮ ದರ್ಶನ ಪಡೆಯಲು ರವೀಂದ್ರ ಕಲಾಕ್ಷೇತ್ರಕ್ಕೆ ಸಾಹಿತ್ಯ ಪ್ರಿಯರು, ಗಣ್ಯರು ಮತ್ತು ಭೈರಪ್ಪನವರ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ:S. L ಭೈರಪ್ಪ ಬದುಕಿನ ಪರ್ವ ಅಂತ್ಯ – ಬದುಕಿನ ಪುಟದಲ್ಲಿ ನೋವಿದ್ದರೂ ಸಾಹಿತ್ಯ ಪ್ರಿಯರಿಗೆ ಇಷ್ಟವಾದ ಅಕ್ಷರ ಮಾಂತ್ರಿಕ

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿರುವ ಎಸ್. ಎಲ್ ಭೈರಪ್ಪನವರ ಅಂತಿಮ ದರ್ಶನಕ್ಕೆ ಗಣ್ಯರು ಆಗಮಿಸುತ್ತಿದ್ದಾರೆ. ಗುರುವಾರ ಬೆಳಗ್ಗೆ 8 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2 ಗಂಟೆಯವರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯ ನಂತರ ಪಾರ್ಥಿವ ಶರೀರವನ್ನ ಮೈಸೂರಿಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.

ಸಂಜೆ 5 ಗಂಟೆಯಿಂದ ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ 10.30ಕ್ಕೆ ಅಂತಿಮ ವಿಧಿ ವಿಧಾನ ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಶುಕ್ರವಾರ ಸೆಪ್ಟೆಂಬರ್ 26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಲಿದೆ. ಸರ್ಕಾರಿ ಗೌರವದೊಂದಿಗೆ ಎಸ್‌‌‌.ಎಲ್. ಭೈರಪ್ಪ ಅಂತ್ಯಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದೆ. ಭೈರಪ್ಪ ಹಿರಿಯ ಮಗ ಲಂಡನ್ ನಿಂದ ಗುರುವಾರ ಬೆಳಗ್ಗೆ 10 ಗಂಟೆಗೆ ಆಗಮಿಸಿದ್ದಾರೆ.

Sulekha