ಮುಂಬೈ ಸಾಮ್ರಾಜ್ಯ ಪತನ ಮಾಲೀಕರ ನಂಬಿಕೆ ಕಳ್ಕೊಂಡ್ರಾ ಪಾಂಡ್ಯ?
ಬುಮ್ರಾ ಗುಟ್ಟು ಎಲ್ಲರಿಗೂ ಗೊತ್ತಾಯ್ತಾ?

ಮುಂಬೈ ಸಾಮ್ರಾಜ್ಯ ಪತನ ಮಾಲೀಕರ ನಂಬಿಕೆ ಕಳ್ಕೊಂಡ್ರಾ ಪಾಂಡ್ಯ?ಬುಮ್ರಾ ಗುಟ್ಟು ಎಲ್ಲರಿಗೂ ಗೊತ್ತಾಯ್ತಾ?

ಸೋಲು ಸೋಲು ಬರೀ ಸೋಲು..  ಪಾಂಡ್ಯ ಪಡೆಗೆ ಬರೀ ಸೋಲು.. 5 ಸಲ ಕಪ್ ಗೆದ್ದ ಟೀಂ ಹೀನಾಯ ಪ್ರದರ್ಶನ ಕೊಡ್ತಿದೆ.  ಗೆಲ್ಲೋ ಪಂದ್ಯವನ್ನ ಬಲಿಷ್ಠ ಬೌಲಿಂಗ್ ಪೆಡೆ ಇದ್ದರು ಸೋಲ್ತಿದೆ. ಪಾಂಡ್ಯ ತೆಗೆದುಕೊಳ್ಳುತ್ತಿರೋ ನಿರ್ಧಾರ ಮುಂಬೈ ಇಂಡಿಯನ್ಸ್‌ ಸಾಮ್ರಾಜ್ಯ ಕುಸಿಯುವಂತೆ ಮಾಡ್ತಿದೆ. ವಿಶ್ವದ ನಂ1 ಬೌಲರ್ ಬುಮ್ರಾ ಗುಟ್ಟು ರಟ್ಟಾಗಿದ್ದು,  MI ಮಾಲೀಕರ ನಂಬಿಕೆಯನ್ನ ಹಾರ್ದಿಕ್ ಪಾಂಡ್ಯ ಕಳೆದುಕೊಂಡ್ರಾ ಅನ್ನೋ ಹುಟ್ಟಿದೆ.

ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡ ಕಳಪೆಯಲ್ಲಿ ಕಳಪೆ ಪ್ರದರ್ಶನ ನೀಡ್ತಿದೆ.  ಈ ಬಾರಿ ಪ್ಲೇ-ಆಫ್  ಹತ್ತಿರ ಕೂಡ ಹೋಗುವುದು ಕಷ್ಟ ಎನ್ನುವಂತಾಗಿದೆ ಪಾಂಡ್ಯ ಪಡೆಯ ಪರಿಸ್ಥಿತಿ.. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡಕ್ಕೆ ಈಗ ‘ಮಾಡು ಇಲ್ಲವೇ ಮಡಿ’ ಎಂಬ ಅನಿವಾರ್ಯತೆ ಎದುರಾಗಿದೆ. ಟೂರ್ನಿಯ ಮೊದಲಾರ್ಧ ಮುಗಿದರೂ, ಮುಂಬೈ ತಂಡ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಜಯಗಳಿಸಿ 4 ಅಂಕಗಳಿಸಿದೆ.  ಅಂಕಪಟ್ಟಿಯಲ್ಲಿ ಲಾಸ್ಟ್‌ನಲ್ಲಿರೋ ಮುಂಬೈಗೆ ಅಂಕಗಳ ಕೊರತೆಯ ಜೊತೆಗೆ ತಂಡದ ನೆಟ್ ರನ್ ರೇಟ್   ಕೂಡ ಮೈನಸ್‌ನಲ್ಲಿದೆ.

ಇದನ್ನೂ ಓದಿ: ಡಿವೈಡರ್ ಹಾರಿ SUV ಕಾರಿಗೆಗೆ ಪಿಕಪ್ ಡಿಕ್ಕಿ – 15 ಮಂದಿ ಸ್ಥಳದಲ್ಲೇ ಸಾವು.. 30ಕ್ಕೂ ಹೆಚು ಮಂದಿಗೆ ಗಾಯ!

SRH ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಬಿಗ್ ಟಾರ್ಗೆಟ್‌ ನೀಡಿತ್ತು. ಆದ್ರೆ 244 ರನ್ ಕಲೆ ಹಾಕಿದ ಮುಂಬೈಗೆ ಹೈದರಾಬಾದ್ ಬಿಗ್ ಶಾಕ್ ನೀಡ್ತು.. ಬಲಿಷ್ಠ ಬೌಲಿಂಗ್ ಪಡೆ ಇದ್ದರೂ ಕೂಡ ಎಸ್ಆರ್‌ಹೆಚ್‌ ಬ್ಯಾಟರ್‌ಗಳನ್ನ ಕಟ್ಟಿಹಾಕೋಕೆ ಮುಂಬೈ ಆಗಿಲ್ಲ ಮೈದಾನದಲ್ಲಿ ಮುಂಬೈ ಆಟಗಾರರು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಜಸ್ಪ್ರೀತ್ ಬುಮ್ರಾ ಸೇರಿದಂತೆ ಉಳಿದ ಮುಂಬೈ ಬೌಲರ್‌ಗಳು ರನ್ ನಿಯಂತ್ರಿಸಿಲ್ಲ.. ಬೇಕಾ ಬಿಟ್ಟಿಯಾಗಿ ರನ್ ನೀಡಿದ್ರು.  ಮುಂಬೈ ಪರ ವಿಶ್ವ ಶ್ರೇಷ್ಠ ಬೌಲರ್ ಜಸ್ಪ್ರಿತ್ ಬುಮ್ರಾ ಅವರು 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್‌ ಪಡೆಯದೆ 54 ರನ್‌ ನೀಡಿರುವುದು  ಎಲ್ಲರಿಗೆ ಶಾಕ್ ಆಗುವಂತೆ ಮಾಡಿದೆ. ಬುಮ್ರಾ ಅವರ  ಕಳೆಪ ಪ್ರದರ್ಶನ ನೋಡಿ ಟೀಂ ಇಂಡಿಯಾ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ಒಬ್ಬ ವಿಶ್ವ ಶ್ರೇಷ್ಠ ಬೌಲರ್ ಯಾಕೆ ಹೀಗೆ ರನ್‌ಗಳನ್ನ ಹೊಡೆಸಿಕೊಳ್ಳುತ್ತಿದ್ದಾರೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬುಮ್ರಾ ವಿಕ್ನೇಸ್‌ ಬ್ಯಾಟ್ಸಮನ್‌ಗಳಿಗೆ ಗೊತ್ತಾದಂತೆ ಕಾಣ್ತಿದೆ.. ಹೀಗಾಗಿ ಬುಮ್ರಾ ಕೂಡ ಎಸ್‌ಆರ್‌ಹೆಚ್‌  ಬ್ಯಾಟರ್‌ಗಳನ್ನ ಕಂಟ್ರೋಲ್ ಮಾಡುವುದರಲ್ಲಿ ಎ  ಡವಿದ್ದಾರೆ. ಹೀಗಾಗಿಯೇ ಎಸ್‌ಆರ್‌ಹೆಚ್‌ ಈಸಿಯಾಗಿ 244 ರನ್‌ಗಳ ಟಾರ್ಗೆಟ್ ಚೇಸ್ ಮಾಡಿ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಹೋಗಿದೆ..

ಮಾಲೀಕರ ನಂಬಿಕೆ ಕಳ್ಕೊಂಡ್ರಾ ಪಾಂಡ್ಯ?

ಇನ್ನು ವಿರೋಧದ ನಡುವೆ ಮುಂಬೈ ನಾಯಕತ್ವದ ಬದಲಾವಣೆ ಆಯ್ತು.. ಇದು ಮುಂಬೈ ಸಾಮ್ರಾಜ್ಯ ಪತನ ಆಗೋಕೆ ಮುಖ್ಯ ಕಾರಣ ಅಂತನೇ ಹೇಳಬಹುದು. ಇಲ್ಲಿ MI ಮಾಲೀಕರ ನಂಬಿಕೆಯನ್ನ ಪಾಂಡ್ಯ ಕಳೆದುಕೊಂಡ್ರು.  ಪಾಂಡ್ಯ ಕ್ಯಾಪ್ಟನ್ ಆದ ನಂತ್ರ ತಂಡದ ಆಟಗಾರರ ನಡುವಿನ ಹೊಂದಾಣಿಕೆ ಅಥವಾ ಮಾನಸಿಕ ಸ್ಥಿತಿ ಮೊದಲಿನಷ್ಟು ಬಲಿಷ್ಠವಾಗಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಮೈದಾನದಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳು ಕೈಕೊಡುತ್ತಿವೆ ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಆಲ್ ರೌಂಡರ್‌ಗಳು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೈ ಕೊಡುತ್ತಿದ್ದಾರೆ.  ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ.. ಜಸ್ಪ್ರೀತ್ ಬುಮ್ರಾ ಸೇರಿದಂತೆ ಯಾವುದೇ ಬೌಲರ್‌ಗಳು ರನ್ ನಿಯಂತ್ರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಡೆತ್ ಓವರ್‌ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಡುತ್ತಿರುವುದು ತಂಡಕ್ಕೆ ಮುಳುವಾಗುತ್ತಿದೆ. ಈ ಸಲ ಕಪ್ ಗೆದ್ವೇ ಅನ್ನೋ  ಮುಂಬೈ ಇಂಡಿಯನ್ಸ್ ಸಾಮ್ರಾಜ್ಯ ಪತನ ಆಗುತ್ತಿದೆ ಅನ್ನೋ ಈ ಸಲದ ಐಪಿಎಲ್ ನೋಡಿದ್ರೆ ನಮ್ಗೆ ಗೊತ್ತಾಗುತ್ತೆ.. ಇಲ್ಲಿ ಹಾರ್ದಿಕ್ ಪಾಂಡ್ಯಕೆ ನಾಯಕತ್ವ ನೀಡಿದ್ದೇ ತಪ್ಪು ಅನ್ನೋದು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳ ಅನಿಸಿಕೆಯಾಗಿದೆ..

 MI ಪ್ಲೇ ಆಫ್ ಹಾದಿ ಎಂಡ್ ಆಯ್ತಾ?

ಮುಂಬೈ ಈ ಸಲ ಪ್ಲೇ ಆಪ್‌ಗೆ ತಲುಪುವುದು ಡೌಟ್ ಅಂತ ಅನ್ಸುತ್ತೆ.. ಯಾಕಂದ್ರೆ ಮುಂಬೈ ಇಂಡಿಯನ್ಸ್ ತಂಡವು ತನ್ನ ಉಳಿದ 6 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದರೆ ಒಟ್ಟು 16 ಅಂಕಗಳನ್ನು ಪಡೆಯುತ್ತದೆ. ಇದು ಪ್ಲೇ-ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸುತ್ತದೆ.   ಒಂದು ವೇಳೆ 5 ಪಂದ್ಯಗಳನ್ನು ಗೆದ್ದು 14 ಅಂಕಗಳನ್ನು ಪಡೆದರೆ, ಇತರ ತಂಡಗಳ ಫಲಿತಾಂಶ ಮತ್ತು ರನ್ ರೇಟ್ ಮೇಲೆ ಅವಲಂಬಿತವಾಗಬೇಕಾಗುತ್ತದೆ.  ಪ್ರಸ್ತುತ ಮುಂಬೈ ತಂಡದ ರನ್ ರೇಟ್ ಮೈನಸ್‌ನಲ್ಲಿದೆ. ಹಾಗಾಗಿ, ಮುಂದಿನ ಪಂದ್ಯಗಳನ್ನು ಕೇವಲ ಗೆಲ್ಲುವುದು ಮಾತ್ರವಲ್ಲದೆ, ದೊಡ್ಡ ಅಂತರದಿಂದ ಗೆದ್ದು ರನ್ ರೇಟ್ ಸುಧಾರಿಸಿಕೊಳ್ಳುವುದು ಬಹಳ ಮುಖ್ಯ. ಒಟ್ನಲ್ಲಿ ಮುಂಬೈ ಇಂಡಿಯನ್ಸ್ ಸಾಮ್ರಾಜ್ಯ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆದ ಮೇಲೆ ಪತನ ಆಗುತ್ತಿರುವುದಂತು ನಿಜ.

Kishor KV