ಋತುರಾಜ್ ಗಾಯಕ್ವಾಡ್ ಹೊಸ ಇನ್ನಿಂಗ್ ಶುರು – ಗೆಳತಿ ಉತ್ಕರ್ಷಾ ಪವಾರ್ ರನ್ನು ವರಿಸಿದ ಸಿಎಸ್‌ಕೆ ಆಟಗಾರ

ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಹೊಸ ಇನ್ನಿಂಗ್ ಶುರು ಮಾಡಿದ್ದಾರೆ.. ಜೂನ್ 3 ರಂದು ತಮ್ಮ ದೀರ್ಘಕಾಲದ ಗೆಳತಿ ಉತ್ಕರ್ಷಾ ಪವಾರ್ ರನ್ನು ವರಿಸಿದ್ದಾರೆ. ಇದೇ ಕಾರಣಕ್ಕೆ ಯುವ ಓಪನರ್ ಋತುರಾಜ್, ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು..!
ಕಳೆದ ಸೋಮವಾರವಷ್ಟೇ ಚೆನ್ನೈ ತಂಡ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಪ್ರಶಸ್ತಿ ಗೆದ್ದ ಖುಷಿಯಲ್ಲಿಯೇ ಇದೀಗ ಸಿಎಸ್‌ಕೆ ಆರಂಭಿಕ, ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಷ್ಟಕ್ಕೂ ಋತುರಾಜ್ ವಿವಾಹವಾಗುತ್ತಿರುವ ಉತ್ಕರ್ಷ ಪವಾರ್ ಕೂಡ ಕ್ರಿಕೆಟರ್ ಆಗಿದ್ದಾರೆ. ದೇಸೀ ಕ್ರಿಕೆಟ್ನಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬ್ಯಾಟಿಂಗ್ ಹಾಗೂ ಫಾಸ್ಟ್ ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಆಸರೆಯಾಗುವ ಉತ್ಕರ್ಷಾ, ಉಪಯುಕ್ತ ಆಲ್‌ರೌಂಡರ್ ಆಗಿದ್ದಾರೆ. ಸದ್ಯ ಉತ್ಕರ್ಷ ಅವರು ಪುಣೆಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಅಂಡ್ ಫಿಟ್‌ನೆಸ್ ಸೈನ್ಸಸ್ (INFS)ನಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಫೈನಲ್ ಪಂದ್ಯದ ವೇಳೆ ಋತುರಾಜ್ ಗಾಯಕ್ವಾಡ್ ಅವರ ಜೊತೆ ಉತ್ಕರ್ಷಾ ಪವಾರ್ ಕಾಣಿಸಿಕೊಂಡಿದ್ದರು. ಈ ಫೋಟೋಗಳನ್ನು ಸಿಎಸ್‌ಕೆ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು.