ರಷ್ಯಾದ ಲೂನಾ -25 ನೌಕೆ ಪತನ –  ಹಿರಿಯ ವಿಜ್ಞಾನಿ ಆಸ್ಪತ್ರೆಗೆ ದಾಖಲು

ರಷ್ಯಾದ ಲೂನಾ -25 ನೌಕೆ ಪತನ –  ಹಿರಿಯ ವಿಜ್ಞಾನಿ ಆಸ್ಪತ್ರೆಗೆ ದಾಖಲು

ಭಾರತದ ಚಂದ್ರಯಾನ-3 ಗಿಂತ ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್ ಆಗಬೇಕಿದ್ದ ಕನಸು ಭಗ್ನಕೊಂಡಿದೆ. ಲೂನಾ-25 ಲ್ಯಾಂಡರ್ ಚಂದ್ರನ ಮೇಲೆ ಪೂರ್ವ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸಲು ವಿಫಲವಾಗಿದೆ. ರಷ್ಯಾ ವಿಜ್ಷಾನಿಗಳ ಅಷ್ಟು ದಿನಗಳ ಪಯತ್ನ ವಿಫಲವಾಗಿದೆ. ಲೂನಾ -25 ನೌಕೆ ಪತನಗೊಂಡ ಬೆನ್ನಲ್ಲೇ ಈ ಮಿಷನ್‌ನಲ್ಲಿ ಕೆಲಸ ಮಾಡಿದ್ದ ಹಿರಿಯ ವಿಜ್ಞಾನಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಚಂದ್ರಯಾನ -3 ಲ್ಯಾಂಡಿಂಗ್‌ ಮುಂದೂಡಿಕೆ? – ಇಸ್ರೋ ಹೇಳಿದ್ದೇನು?

ರಷ್ಯಾದ ಲೂನಾ -25 ನೌಕೆಯನ್ನು ಆಗಸ್ಟ್‌ -11 ರಂದು ಉಡಾವಣೆ ಮಾಡಿತ್ತು. ಈ ನೌಕೆ ಭಾರತದ ಚಂದ್ರಯಾನ -3 ನೌಕೆಗಿಂದ ಮೊದಲೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಆದರೆ ನೌಕೆ ತಾಂತ್ರಿಕ ಕಾರಣಗಳಿಂದ ಪತನವಾಗಿತ್ತು. ಲೂನಾ -25′ ನೌಕೆ ಪತನಗೊಂಡ ಕೆಲವೇ ಗಂಟೆಗಳಲ್ಲಿ ವಿಜ್ಞಾನಿ ಮಿಖಾಯಿಲ್ ಮರೋವ್ ಆರೋಗ್ಯದಲ್ಲಿ ಏರು-ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಷ್ಯಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಲೂನಾ -25 ಲ್ಯಾಂಡರ್‌ ವಿಫಲಗೊಂಡ ಕಾರಣ ಮಿಖಾಯಿಲ್ ಮರೋವ್ ಆಘಾತಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಮತ್ತು ಅಮೂಲ್ಯ ಅಂಶಗಳಿರುವ ಕುರಿತು ಅನ್ವೇಷಣೆ ನಡೆಸುವ ಉದ್ದೇಶದಿಂದ ‘ಲೂನಾ-25’ ನೌಕೆಯನ್ನು ರಷ್ಯಾ ಉಡಾವಣೆ ಮಾಡಿತ್ತು.

suddiyaana