ಪ್ರೇಯಸಿಗಾಗಿ ನೋಟಿನಲ್ಲೇ ಮೆಟ್ಟಿಲು – ಗರ್ಲ್‌ ಫ್ರೆಂಡ್‌ ಗಾಗಿ ದುಡ್ಡಿನ ಕಾರ್ಪೆಟ್
ಬಿಲಿಯನೇರ್ ಪ್ರೇಮಿಯ ದೌಲತ್ತು ನೋಡಿ

ಪ್ರೇಯಸಿಗಾಗಿ ನೋಟಿನಲ್ಲೇ ಮೆಟ್ಟಿಲು – ಗರ್ಲ್‌ ಫ್ರೆಂಡ್‌ ಗಾಗಿ ದುಡ್ಡಿನ ಕಾರ್ಪೆಟ್ಬಿಲಿಯನೇರ್ ಪ್ರೇಮಿಯ ದೌಲತ್ತು ನೋಡಿ

ಈ ಹೈಟೆಕ್ ಯುಗದಲ್ಲಿ ಲವ್ ಕೂಡಾ ಹೈ ಲೆವೆಲ್‌ನಲ್ಲೇ ಇರುತ್ತೆ ಬಿಡಿ. ಯಾಕೆಂದ್ರೆ, ಪ್ರೀತಿಗಾಗಿ ಒಂದು ಗುಲಾಬಿ ಹೂವನ್ನು ಪ್ರೇಮಿ ಕೊಟ್ರು ಕೂಡಾ ಪ್ರಿಯತಮೆ ಖುಷಿ ಪಡ್ತಾಳೆ. ಬರ್ತಾ ಬರ್ತಾ ಪ್ರೀತಿ ಗೆಲ್ಲಲು ದುಬಾರಿ ಉಡುಗೊರೆ ಕೂಡಾ ಬಂತು. ದುಬಾರಿ ಗಿಫ್ಟ್ ಕೊಟ್ರೇನೇ ಪ್ರೀತಿಯ ಲೆವೆಲ್ ಬೇರೆ ಇರುತ್ತೆ ಅನ್ನೋ ಥರಾ ಆಡೋ ಪ್ರೇಮಿಗಳನ್ನೂ ನೋಡಿದ್ದೇವೆ. ಆದ್ರೀಗ ಇಲ್ಲೊಬ್ಬ ಶ್ರೀಮಂತ ಪ್ರೇಮಿ, ತನ್ನ ಪ್ರೇಯಸಿಗೆ ಕೊಟ್ಟ ಸರ್‌ಪ್ರೈಸ್ ನೀವು ಊಹಿಸಿಕೊಳ್ಳಲು ಸಾಧ್ಯವಿಲ್ಲ.

ಕೆಲ ರಿಚ್ಚೆಸ್ಟ್ ಲವರ್ಸ್ ಇರ್ತಾರೆ. ಶ್ರೀಮಂತ ಪ್ರೇಮಿ ತನ್ನ ಪ್ರೇಯಸಿಯನ್ನು ಅಚ್ಚರಿಗೊಳಿಸಲು ರೆಡ್ ಕಾರ್ಪೆಟ್, ಹೂಗುಚ್ಚ, ಅಪ್ಪುಗೆ ನೀಡಿ ವೆಲ್‌ಕಮ್ ಮಾಡ್ತಾನೆ. ಇಲ್ಲಾಂದ್ರೆ, ಕಾರು, ರಿಂಗ್ ಸೇರಿದಂತೆ ದುಬಾರಿ ಗಿಫ್ಟ್ ಕೊಟ್ಟು ಇಂಪ್ರೆಸ್ ಮಾಡ್ತಾನೆ. ಆದ್ರೆ, ಇಲ್ಲೊಬ್ಬ ರಿಚ್ ಲವರ್, ತನ್ನ ಗರ್ಲ್‌ಫ್ರೆಂಡ್‌ಗೆ ಕಂತೆ ಕಂತೆ ನೋಟನ್ನೇ ಮೆಟ್ಟಿಲು ಮಾಡಿ ಸ್ವಾಗತ ಕೋರಿದ್ದಾನೆ.

ಬಿಲೇನಿಯರ್ ದುಬೈ ಉದ್ಯಮಿ ಸರ್ಗಿ ಕೊಸೆಂಕೋ ತನ್ನ ಗೆಳತಿಗಾಗಿ ಈ ನೋಟಿನ ಸ್ವಾಗತ ನೀಡಿದ್ದಾನೆ. ಉದ್ಯಮಿ ಸರ್ಗಿ ಹಾಗೂ ಆತನ ಗರ್ಲ್‌ಫ್ರೆಂಡ್ ನಡುವೆ ಪ್ರೀತಿಯಂತೂ ಗಾಢವಾಗಿದೆ. ಸರ್ಗಿಯ ಲವ್ವರ್‌ಗೆ ಏಕಾಏಕಿ ಗೆಳೆಯನ ನೋಡುವ ಆಸೆಯಾಗಿದೆ. ಫೋನ್ ಮೂಲಕ ತಿಳಿಸಿದ್ದಾಳೆ. ಇಷ್ಟೇ ನೋಡಿ, ಉದ್ಯಮಿ ಗೆಳೆಯ ಆಕೆಯನ್ನು ಮನೆಯಿಂದ ಕರೆದುಕೊಂಡು ಬರಲು ಹೆಲಿಕಾಪ್ಟರ್ ಕಳುಹಿಸಿದ್ದಾನೆ. ಗೆಳತಿ ಹೆಲಿಕಾಪ್ಟರ್ ಮೂಲಕ ಆಗಮಿಸಿ ಉದ್ಯಮಿಯ ಹೆಲಿಪ್ಯಾಡ್‌ನಲ್ಲಿ ಇಳಿದಿದ್ದಾಳೆ. ಇತ್ತ ಆಕೆಯನ್ನು ಸ್ವಾಗತಿಸಲು ಖುದ್ದು ಹೆಲಿಕಾಪ್ಟರ್ ಬಳಿ ತೆರಳಿದ ಉದ್ಯಮಿ ಸರ್ಗಿ ಮತ್ತೊಂದು ಅಚ್ಚರಿ ನೀಡಿದ್ದಾನೆ. ಹೆಲಿಕಾಪ್ಟರ್‌ನಿಂದ ಗೆಳತಿಗೆ ಇಳಿಯಲು ಕಂತೆ ಕಂತೆ ನೋಟಿನ ಮೆಟ್ಟಿಲು ಮಾಡಿದ್ದಾನೆ. ಬಳಿಕ ಹೆಲಿಪ್ಯಾಡ್‌ನಿಂದ ಮನೆಯವರೆಗೂ ಕಂತೆ ಕಂತೆ ನೋಟುಗಳನ್ನಿಟ್ಟಿದ್ದಾರೆ. ಈ ನೋಟಿನ ಮೂಲಕ ಗೆಳೆಯತಿಯನ್ನು ಕರೆದುಕೊಂಡು ಬಂದಿದ್ದಾನೆ. ಗೆಳತಿಯನ್ನು ಹೆಲಿಕಾಪ್ಟರ್‌ನಿಂದ ಕೈಹಿಡಿದು ನೋಟಿನ ಮೂಲಕ ಕರೆತಂದ ಈ ವಿಡಿಯೋ ವೈರಲ್ ಆಗಿದೆ.

ಈ ನೋಟಿನ ಮೆಟ್ಟಿಲು ಮೂಲಕ ಗರ್ಲ್‌ಫ್ರೆಂಡ್ ಹೆಲಿಕಾಪ್ಟರ್ ಇಳಿದ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಗೆಳತಿಯನ್ನು ಈ ನೋಟಿನ ಮೆಟ್ಟಿಲಿನಿಂದ ಕರೆದುಕೊಂಡು ಬಂದ ವಿಡಿಯೋ ನೋಡಿ ಜನ ದಂಗಾಗಿದ್ದಾರೆ. ಸಾವಿರಾರು ಕೋಟಿ ರೂಪಾಯಿ ನೋಟಿನ ಮೇಲೆ ಗೆಳತಿಯನ್ನು ನಡೆಸಿಕೊಂಡು ಬಂದ ಉದ್ಯಮಿ ಪ್ರೇಮಿಯ ಐಷಾರಾಮಿತನಕ್ಕೆ ಜನರು ದಂಗಾಗಿದ್ದಾರೆ.

ಇತ್ತ ಗೆಳತಿ ರಾಣಿಯಂತೆ ನೋಟಿನ ಮೂಲಕ ನಡೆದು ಬಂದಿರೋ ವಿಡಿಯೋ ನೋಡಿದ ಜನ ನಾನಾ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಕಂತೆ ಕಂತೆ ನೋಟು ಬೇಡ, ಪಕ್ಕದಲ್ಲಿ ಹರಡಿರುವ ನೋಟು ಸಾಕು, ಜೀವನ ಕಟ್ಟಿಕೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಗೆಳತಿಯ ಅದೃಷ್ಠ. ಕೇವಲ ಭೇಟಿಗಾಗಿ ಈ ಪಾಟಿ ದುಡ್ಡು ಚೆಲ್ಲಿದರೆ, ಇನ್ನು ಎಂಗೇಜ್‌ಮೆಂಟ್ ಮದುವೆ ನೋಡಲು ಎರಡು ಕಣ್ಣು ಸಾಲದು ಎಂದು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಕೆಲವರು ಈಗಿನ ಕಾಲದಲ್ಲಿ ಕಣ್ಮುಚ್ಚಿ ನಂಬಲು ಸಾಧ್ಯವಿಲ್ಲ, ನೋಟಿನ ಕಂತೆ ಅಥವಾ ಕಾಗದದ ಕಂತೆ ಎಂದು ಪ್ರಶ್ನಿಸಿದ್ದಾರೆ. ಅದೇನೇ ಇರಲಿ, ಬಿಲೇನಿಯರ್ ಪ್ರೇಮಿ ತನ್ನ ಪ್ರೇಯಸಿಗಾಗಿ ನೋಟುಗಳಲ್ಲೇ ಮೆಟ್ಟಿಲು ಮಾಡಿದ್ದಾನೆ. ಪ್ರೇಯಸಿಗಾಗಿ ರಾಶಿ ರಾಶಿ ದುಡ್ಡನ್ನೇ ಚೆಲ್ಲಿದ್ದಾನೆ.

Shwetha M

Leave a Reply

Your email address will not be published. Required fields are marked *