50 ಜನ ಪ್ರಯಾಣಿಸುತ್ತಿದ್ದ ವಿಮಾನ ಕಣ್ಮರೆ – ಚೀನಾ ಗಡಿ ತಲುಪುತ್ತಿದ್ದಂತೆ ಆಗಿದ್ದೇನು?  

50 ಜನ ಪ್ರಯಾಣಿಸುತ್ತಿದ್ದ ವಿಮಾನ ಕಣ್ಮರೆ – ಚೀನಾ ಗಡಿ ತಲುಪುತ್ತಿದ್ದಂತೆ ಆಗಿದ್ದೇನು?  

ಸುಮಾರು 50 ಜನರು ಪ್ರಯಾಣಿಕರಿದ್ದ ವಿಮಾನವೊಂದು ಕಣ್ಮರೆಯಾಗಿದೆ. ರಷ್ಯಾದ ವಿಮಾನ ಚೀನಾ ಗಡಿಯಲ್ಲಿ ವಾಯು ಸಂಚಾರ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂಓದಿ: ಕರ್ನಾಟಕದಲ್ಲಿ ಮತ ಕಳವು ನಡೆದಿದೆ.. ಶೀಘ್ರವೇ ಸಾಕ್ಷ್ಯ ಒದಗಿಸುತ್ತೇನೆ! – ಹೊಸ ಬಾಂಬ್‌ ಸಿಡಿಸಿದ ರಾಹುಲ್‌ ಗಾಂಧಿ!

ಅಂಗಾರ ಏರ್ಲೈನ್ಸ್ ನಿರ್ವಹಿಸುವ ಈ ವಿಮಾನವು ಅಮುರ್‌ನ ಟಿಂಡಾ ನಗರಕ್ಕೆ ಹೋಗುತ್ತಿತ್ತು. ರಷ್ಯಾದ ಪೂರ್ವ ಅಮುರ್ ಪ್ರದೇಶದಲ್ಲಿದ್ದಾಗ ವಿಮಾನ ಸಂಪರ್ಕ ಕಡಿತಗೊಂಡಿದೆ. ಟಿಂಡಾ ನಗರದ ವಿಮಾನ ನಿಲ್ದಾಣಕ್ಕೆ ತಲುಪಲು ಕೆಲವೇ ದೂರವಿತ್ತು. ಈ ಆನ್ -24 ವಿಮಾನದಲ್ಲಿ ಸುಮಾರು 50 ಪ್ರಯಾಣಿಕರಿದ್ದರು. ಇದೀಗ ನಾಪತ್ತೆಯಾದ ವಿಮಾನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಅದರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ವರದಿಯಾಗಿದೆ.

ಇತ್ತೀಚೆಗಷ್ಟೇ ಅಹಮದಾಬಾದ್​ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು. ವಿಮಾನದಲ್ಲಿದ್ದ 242 ಜನರಲ್ಲಿ ಕೇವಲ ಓರ್ವ ಮಾತ್ರ ಬದುಕುಳಿದಿದ್ದರು. ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹಾರುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ರಷ್ಯಾದಲ್ಲಿ 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಕಣ್ಮರೆಯಾದ ನಂತರ, ವಿಮಾನವು ಯಾವುದೋ ಅಹಿತಕರ ಘಟನೆಗೆ ಬಲಿಯಾಗಿರಬಹುದೆಂಬ ಅನುಮಾನಗಳು ಮತ್ತೆ ಹುಟ್ಟಿಕೊಂಡಿವೆ.

Shwetha M