ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ ಹೃದಯಸ್ತಂಭನ? – ಭದ್ರತಾ ಸಿಬ್ಬಂದಿ ಹೇಳಿದ್ದೇನು?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ ಹೃದಯಸ್ತಂಭನ? – ಭದ್ರತಾ ಸಿಬ್ಬಂದಿ ಹೇಳಿದ್ದೇನು?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಆರೋಗ್ಯ ವಿಚಾರ ಸದಾ ಚರ್ಚೆಯಾಗುತ್ತಲೇ ಇದೆ. ಕಳೆದ ವರ್ಷ ಉಕ್ರೇನ್‌ ವಿರುದ್ಧ ಯುದ್ದ ಸಾರಿದಾಗಿನಿಂದಲೂ ಪುಟಿನ್‌ ಆರೋಗ್ಯ ತೀರಾ ಹದಗೆಡುತ್ತಿದೆ ಅಂತಾ ಸುದ್ದಿಯಾಗುತ್ತಿದೆ. ಈ ಮಧ್ಯೆಯೇ ಪುಟಿನ್ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಮಾಹಿತಿ ಪ್ರಕಾರ, ಕಳೆದ ಭಾನುವಾರ ಪುಟಿನ್‌ ಹೃದಯ ಸ್ತಂಭನಕ್ಕೆ ಒಳಗಾಗಿರುವುದು ಕಂಡುಬಂದಿದೆ. ರಾತ್ರಿ 9 ಗಂಟೆಯ ಸುಮಾರಿಗೆ ತನ್ನ ಮಲಗುವ ಕೋಣೆಯಲ್ಲೇ ನೆಲದ ಮೇಲೆ ಆಹಾರ ಮತ್ತು ಪಾನೀಯಗಳೊಂದಿಗೆ ಮಗುಚಿಕೊಂಡಿದ್ದ ಟೇಬಲ್‌ ಪಕ್ಕದಲ್ಲಿ ಬಿದ್ದಿದ್ದರು ಎಂದು ಪುಟಿನ್‌ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್ ‘ಜನರಲ್ SVR’ ಅನ್ನು ಉಲ್ಲೇಖಿಸಿ ವರದಿಯಾಗಿದೆ.

ಇದನ್ನೂ ಓದಿ: ಬಿದ್ದ ಪಾಕಿಸ್ತಾನ, ಗೆದ್ದ ಅಫ್ಘಾನಿಸ್ತಾನ – ಪಾಕ್ ಟೀಮ್‌ ಕ್ಯಾಪ್ಟನ್ ಬಾಬರ್ ಆಜಂ ನಾಯಕ ಸ್ಥಾನಕ್ಕೂ ಬರುತ್ತಾ ಕುತ್ತು?

ಪುಟಿನ್‌ ಹೃದಯ ಸ್ತಂಭನಕ್ಕೆ ಒಳಗಾದ ವೇಳೆ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಟೇಬಲ್ ಮತ್ತು ಅದರ ಮೇಲಿದ್ದ ಆಹಾರ, ಡ್ರಿಂಕ್ಸ್‌ ಬಾಟಲಿಗಳು ಟೇಬಲ್‌ನಿಂದ ಕೆಳಗೆ ಬಿದ್ದಿದ್ದವು. ಅದರಿಂದ ದೊಡ್ಡ ಶಬ್ಧ ಉಂಟಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಅಲ್ಲಿಗೆ ಧಾವಿಸಿದಾಗ ಪುಟಿನ್ ನೆಲದ ಮೇಲೆ ಬಿದ್ದು, ನೋವಿನಿಂದ ನರಳುತ್ತಿರುವುದು ಕಂಡುಬಂದಿದೆ. ಕೂಡಲೇ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಚಿಕಿತ್ಸೆ ನೀಡಿದ್ದಾರೆ. ಬಳಿಕ ಪುಟಿನ್‌ರನ್ನ ಅವರ ನಿವಾಸದಲ್ಲೇ ವಿಶೇಷವಾಗಿ ಸುಸಜ್ಜಿತ ಕೋಣೆಗೆ ಸ್ಥಳಾಂತರಿಸಲಾಯಿತು. ಅಲ್ಲಿರುವ ವಿಶೇಷ ಐಸಿಯು ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಸರಿಯಾದ ಸಮಯಕ್ಕೆ ಪ್ರಥಮ ಚಿಕಿತ್ಸೆ ನೀಡಿದ್ದರಿಂದಾಗಿ ಮತ್ತೆ ಅವರ ಹೃದಯ ಆರೋಗ್ಯ ಸ್ಥಿತಿಗೆ ಬಂದಿದೆ ಎಂದು ವರದಿಯಾಗಿದೆ.

ಸದ್ಯ ಮೂಲಗಳು ವ್ಲಾಡಿಮಿರ್ ಪುಟಿನ್ ಪ್ರತಿರೂಪ ಸಭೆ ಸಮಾರಂಭದಲ್ಲಿ ಸಕ್ರಿಯವಾಗಿದ್ದಾರೆ ಎಂದು ಹೇಳುತ್ತಿವೆ. ಕಳೆದ ವರ್ಷ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ, ಪುಟಿನ್ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಕ್ರೆಮ್ಲಿನ್‌ ಮತ್ತೆ ಮತ್ತೆ ಪುಟಿನ್‌ ಆರೋಗ್ಯವಾಗಿದ್ದಾರೆ ಎಂಬುದನ್ನು ಒತ್ತಿ ಹೇಳುತ್ತಿದೆ.

Shwetha M