ಕೆಲಸಕ್ಕಾಗಿ ಹೋದ ಕನ್ನಡಿಗರನ್ನು ಉಕ್ರೇನ್‌ ಯುದ್ಧಕ್ಕೆ ನೇಮಿಸಿದ ರಷ್ಯಾ!

ಕೆಲಸಕ್ಕಾಗಿ ಹೋದ ಕನ್ನಡಿಗರನ್ನು ಉಕ್ರೇನ್‌ ಯುದ್ಧಕ್ಕೆ ನೇಮಿಸಿದ ರಷ್ಯಾ!

ಉಕ್ರೇನ್‌ನಲ್ಲಿ ಕೆಲಸಕ್ಕೆ ಹೋಗಿದ್ದ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮನ್ನು ಉಳಿಸಿ.. ನಮ್ಮ ಜೀವ ಅಪಾಯದಲ್ಲಿದೆ. ನಾವು ವಂಚನೆಗೆ ಬಲಿಯಾಗಿದ್ದೇವೆ ಎಂದು ನಾಲ್ವರು ಭಾರತೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಚಿನ್ನದ ಗಣಿ ತೋಡುವಾಗ ಗುಡ್ಡ ಕುಸಿದು 30 ಮಂದಿ ಸಾವು!

ಅಷ್ಟಕ್ಕೂ ಆಗಿದ್ದೇನು?

ಕೆಲಸಕ್ಕಾಗಿ ಕಲಬುರಗಿಯ ಆಳಂದ ತಾಲೂಕಿನ ನರೋಣದ ಸೈಯದ್ ಇಲಿಯಾಸ್ ಹುಸೇನ್, ಮೊಹಮ್ಮದ್ ಸಮೀರ್ ಅಹಮದ್, ಸೋಫಿಯಾ ಮೊಹಮ್ಮದ್ ಎಂಬುವವರು ಬಾಬಾ ಏಜೆಂಟ್ ಮೂಲಕ 2023 ಡಿಸೆಂಬರ್ 5 ರಂದು ರಷ್ಯಾಕ್ಕೆ ತೆರಳಿದ್ದರು. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಕ ಪ್ರತಿಯೊಬ್ಬ ಯುವಕರ ಬಳಿ ಮೂರು ಲಕ್ಷ ಹಣ ಪಡೆದುಕೊಂಡಿದ್ದ. ಆದರೆ ಈಗ ಕೆಲಸ ಸಿಗುವ ಆಸೆಯಲ್ಲಿ ಉಕ್ರೇನ್​ಗೆ ಹೋದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸೆಕ್ಯುರಿಟಿ ಗಾರ್ಡ್​ ಕೆಲಸಕ್ಕೆ ಹೋಗಿದವರು ಈಗ ಉಕ್ರೇನ್ ಬಾರ್ಡರ್​ನಲ್ಲಿ ಯುದ್ದಕ್ಕೆ ನಿಯೋಜನೆಗೊಂಡಿದ್ದಾರೆ. ತರಬೇತಿ ನಡೆದಿದೆ ಅಂತಾ ಹೇಳಿ ನಮ್ಮನ್ನ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ ಎಂದು ಸಿಲುಕಿಕೊಂಡ ಯುವಕನೋರ್ವ ಅಳಲು ತೋಡಿಕೊಂಡಿದ್ದಾರೆ.

ಉಕ್ರೇನ್ ನಲ್ಲಿರೋ ಹುಡುಗನ ತಂದೆ ನವಾಜ್ ಕಾಳಗಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನನ್ನ ಮಗನಿಗೆ ಏಜೆಂಟ್​ಗಳು ಮೋಸ ಮಾಡಿದ್ದಾರೆ. ಅವನು ಸಮಸ್ಯೆಯಲ್ಲಿದ್ದಾನೆ. ನನ್ನ ಮಕ್ಕಳಿಗೆ ಮೋಸ ಆಗಿದೆ ಭಾರತದ ಅನೇಕ ಜನರಿಗೆ ಮೋಸ ಆಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಉಕ್ರೇನ್ ಬಾರ್ಡರ್​ನಲ್ಲಿ ಯುದ್ದದಲ್ಲಿ ನಿಯೋಜನೆ ಮಾಡಿದ್ದಾರೆ. ತರಬೇತಿ ನಡೆದಿದೆ ಅಂತಾ ಹೇಳಿ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ. ಮತ್ತೊಬ್ಬ ಯುವಕನನ್ನ ಎಲ್ಲಿ ಹಾಕಿದ್ದಾರೆ ಅಂತಾ ಇದುವರೆಗೂ ಗೊತ್ತಾಗಿಲ್ಲ ಎಂದು ಯುವಕನ ತಂದೆ ಅಳಲು ತೋಡಿಕೊಂಡಿದ್ದಾರೆ. ಆದಷ್ಟು ಬೇಗ ಸರ್ಕಾರ ಮಧ್ಯೆ ಪ್ರವೇಶಿಸಿ ಯುವಕರನ್ನು ತವರಿಗೆ ಕರೆತರಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Shwetha M