ಒಬಾಮಾ ಸೇರಿ ಅಮೆರಿಕದ 500 ಮಂದಿಗೆ ರಷ್ಯಾ ನಿರ್ಬಂಧ! – ಕಾರಣವೇನು ಗೊತ್ತಾ?

ಒಬಾಮಾ ಸೇರಿ ಅಮೆರಿಕದ 500 ಮಂದಿಗೆ ರಷ್ಯಾ ನಿರ್ಬಂಧ! – ಕಾರಣವೇನು ಗೊತ್ತಾ?

ನಿರ್ಬಂಧಿತ ಯುಸ್ ಉತ್ಪನ್ನಗಳನ್ನು ರಷ್ಯಾಕ್ಕೆ ಮಾರಾಟ ಮಾಡುವ ಸುಮಾರು 70 ಕಂಪನಿಗಳು ಮತ್ತು ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಅಮೆರಿಕ ಯೋಜಿಸಿದೆ ಎಂದು ಶುಕ್ರವಾರ ಘೋಷಿಸಿತ್ತು. ಇದರ ಬೆನ್ನಲ್ಲೇ ರಷ್ಯಾ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಹಾಸ್ಯನಟ ಸ್ಟೀಫನ್ ಕೋಲ್ಬರ್ಟ್ ಸೇರಿ 500 ಮಂದಿ ಅಮೆರಿಕನ್ನರ ಮೇಲೆ ನಿರ್ಬಂಧ ಹೇರಿದೆ.

ಇದನ್ನೂ ಓದಿ: 2000 ನೋಟು ರದ್ದಾಗುತ್ತಿದ್ದಂತೆ ಸರ್ಕಾರಿ ಕಚೇರಿಯಲ್ಲಿ ಸಿಕ್ತು ಕಂತೆ ಕಂತೆ ಹಣ!

ಗೂಢಚಾರಿಕೆ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಪತ್ರಕರ್ತ ಇವಾನ್ ಗೆರ್ಷ್ಕೋವಿಚ್ ವಿಚಾರದಲ್ಲಿ ಕಾನ್ಸುಲೇಟ್ ಪ್ರವೇಶಕ್ಕೆ ಅನುಮತಿ ನೀಡುವಂತೆ ಅಮೆರಿಕ ಮಾಡಿದ ವಿನಂತಿಯನ್ನು ನಿರಾಕರಿಸಲಾಗಿದೆ ಎಂದು ರಷ್ಯಾದ ವಿದೇಶಾಂಗ ಇಲಾಖೆ ತಿಳಿಸಿದೆ. ಈ ವೇಳೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಹಾಸ್ಯನಟ ಸ್ಟೀಫನ್ ಕೋಲ್ಬರ್ಟ್ ಸೇರಿ 500 ಅಮೆರಿಕನ್ನರ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಹೇಳಿದೆ.

ಉಕ್ರೇನ್ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ರಷ್ಯಾದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಲ್ಲ ನಿರ್ಬಂಧಗಳನ್ನು ಅಮೆರಿಕ ಶುಕ್ರವಾರ ವಿಸ್ತರಿಸಿದೆ. ಅದರ ಭಾಗವಾಗಿ ರಷ್ಯಾದ ನೂರಾರು ಕಂಪನಿಗಳು ಮತ್ತು ವ್ಯಕ್ತಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು.

ಈ ಬಗ್ಗೆ ಯುಎಸ್ ಎ ಅಧಿಕಾರಿಯೊಬ್ಬರು ಮಾತನಾಡಿದ್ದು, ಉಕ್ರೇನ್ ಯುದ್ಧಭೂಮಿಗೆ ಸಂಬಂಧಿಸಿದ ಸರಕುಗಳಿಗೆ ರಷ್ಯಾ ಪ್ರವೇಶವನ್ನು ನಿರ್ಬಂಧಿಸಲು ಅಮೆರಿಕ ಮುಂದಾಗಿದೆ. ಈ ನಿರ್ಬಂಧಗಳಿಂದ ರಷ್ಯಾ ತನ್ನ ಯುದ್ಧ ಯಂತ್ರವನ್ನು ಅನುಷ್ಠಾನಗೊಳಿಸಲು ಇನ್ನಷ್ಟು ಕಷ್ಟವಾಗಲಿದೆ. ಹೆಚ್ಚುವರಿಯಾಗಿ ಯುಎಸ್ ತನ್ನ ನಿರ್ಬಂಧಗಳ ವ್ಯಾಪ್ತಿಯನ್ನು ದೇಶದ ಮಿಲಿಟರಿ, ಕೈಗಾರಿಕಾ ವಲಯ ಮೊದಲಾದ ರಷ್ಯಾದ ನಿರ್ಣಾಯಕ ಆರ್ಥಿಕ ಕ್ಷೇತ್ರಗಳಿಗೆ ವಿಸ್ತರಿಸಿದೆ. ರಷ್ಯಾಕ್ಕೆ ತನ್ನ ಸೇವೆಗಳನ್ನು ಬಳಸದಂತೆ ತಡೆಯಲು ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಜಿ7 ರಾಷ್ಟ್ರಗಳ ಸದಸ್ಯರು ಹೊಸ ನಿರ್ಬಂಧಗಳು ಮತ್ತು ರಫ್ತು ನಿಯಂತ್ರಣಗಳನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದ್ದಾರೆ. ಇದರ‌ ಜೊತೆಗೆ ಹೊಸ ಮಹತ್ವದ ನಿರ್ಬಂಧಗಳನ್ನು ವಿಧಿಸಲಿದೆ ಎಂದು ಅಮೆರಿಕ ಮಾಹಿತಿ ನೀಡಿದೆ.

suddiyaana