ಬ್ಲ್ಯಾಕ್ ಲಿಸ್ಟ್ ಭಯದಲ್ಲಿ ಭಾರತದ ನೆರವು ಕೇಳಿದ ರಷ್ಯಾ – ಬೆಂಬಲ ನೀಡುವಂತೆ ಮನವಿ!

ಬ್ಲ್ಯಾಕ್ ಲಿಸ್ಟ್ ಭಯದಲ್ಲಿ ಭಾರತದ ನೆರವು ಕೇಳಿದ ರಷ್ಯಾ – ಬೆಂಬಲ ನೀಡುವಂತೆ ಮನವಿ!

ಉಕ್ರೇನ್ ಜೊತೆಗೆ ಯುದ್ಧ ನಡೆಸುತ್ತಿರುವ ರಷ್ಯಾ ಈಗ ಭಾರತದ ನೆರವು ಕೇಳಿದೆ. ಆದ್ರೆ ಉಕ್ರೇನ್ ಯುದ್ಧದ ವಿಚಾರದಲ್ಲಿ ಅಲ್ಲ. ಬದಲಾಗಿ ರಾಜತಾಂತ್ರಿಕ ಸಮರಕ್ಕೆ ಸಂಬಂಧಿಸಿ. ಈಗಾಗಲೇ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕವಾಗಿ ವಿವಿಧ ನಿರ್ಬಂಧಗಳನ್ನ ಹೇರಿವೆ. ಆದ್ರೂ ರಷ್ಯಾದ ಅರ್ಥ ವ್ಯವಸ್ಥೆ ಮೇಲೆ ಅಷ್ಟೊಂದು ಹೊಡೆತೆವೇನೂ ಬಿದ್ದಿಲ್ಲ. ಹೀಗಾಗಿ ಇನ್ನೊಂದಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳೋಕೆ ಅಮೆರಿಕ ಸೇರಿದಂತೆ ಅದರ ಮಿತ್ರ ರಾಷ್ಟ್ರಗಳು ಪ್ಲ್ಯಾನ್ ಮಾಡಿವೆ.

ಇದನ್ನೂ ಓದಿ : ಮೋದಿಯಿಂದ ನೂತನ ಸಂಸತ್ ಭವನ ಉದ್ಘಾಟನೆಗೆ ವಿರೋಧ –  ರಾಷ್ಟ್ರಪತಿಯಿಂದ ಲೋಕಾರ್ಪಣೆಗೆ ವಿಪಕ್ಷಗಳ ಪಟ್ಟು

ಆರ್ಥಿಕವಾಗಿ ರಷ್ಯಾವನ್ನ ಬ್ಲ್ಯಾಕ್ ಲಿಸ್ಟ್ ಮತ್ತು ಗ್ರೇ ಲಿಸ್ಟ್ ನಲ್ಲಿಡೋದು. ಅಂದ್ರೆ ಜಾಗತಿಕ ಆರ್ಥಿಕ ವ್ಯವಹಾರದಲ್ಲಿ ರಷ್ಯಾವನ್ನ ಸಂಪೂರ್ಣ ದೂರ ಮಾಡೋದು. ಇದ್ರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ರಷ್ಯಾಗೆ ಯಾವುದೇ ಆರ್ಥಿಕ ನೆರವು ಸಿಗೋದಿಲ್ಲ. ಜೊತೆಗೆ ಬ್ಲ್ಯಾಕ್ ಲಿಸ್ಟ್ ಗೆ ಸೇರಿದ ದೇಶಕ್ಕೆ ಇತರೆ ರಾಷ್ಟ್ರಗಳು ಕೂಡ ಹಣಕಾಸು ನೆರವು ನೀಡುವಂತಿಲ್ಲ. ಸದ್ಯ ದಕ್ಷಿಣ ಕೊರಿಯಾ ಮತ್ತು ಇರಾನ್ ಈ ಲಿಸ್ಟ್ ನಲ್ಲಿವೆ. ಭಯೋತ್ಪಾದನೆ ವಿಚಾರದಲ್ಲಿ ಈ ಹಿಂದೆ ಪಾಕಿಸ್ತಾನ ಕೂಡ ಬ್ಲ್ಯಾಕ್ ಲಿಸ್ಟ್ ಗೆ ಒಳಗಾಗಿತ್ತು. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಈಗ ಭಾರತದ ಸಹಾಯ ಕೋರಿದ್ದು, ಬ್ಲ್ಯಾಕ್ ಲಿಸ್ಟ್ ಗೆ ಸೇರಿಸದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಬೇಕು ಅಂತಾ ರಷ್ಯಾ ಮನವಿ ಮಾಡಿದೆ. ಅಷ್ಟೇ ಅಲ್ಲದೆ ತೈಲ ವಿಚಾರದಲ್ಲಿ ರಷ್ಯಾವನ್ನ ಅವಲಂಬಿಸಿರುವ ರಾಷ್ಟ್ರಗಳಿಗೆ ಪರೋಕ್ಷವಾಗಿ ಬೆದರಿಕೆ ಕೂಡ ಒಡ್ಡಿದೆ. ರಷ್ಯಾ ಬೆಂಬಲಕ್ಕೆ ನಿಲ್ಲದೇ ಇದ್ದಲ್ಲಿ ತೈಲ ಸಪ್ಲೈ ಬಂದ್ ಮಾಡ್ತೀವಿ ಅಂತಾನೂ ಎಚ್ಚರಿಸಿದೆ.

suddiyaana