ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರನಡೆದ ರೂಪಿಕಾ – ಸಿಂಚನಾ ಪಾತ್ರಕ್ಕೆ ದಿವ್ಯಶ್ರೀ ಎಂಟ್ರಿ
ಲಕ್ಷ್ಮೀ ನಿವಾಸಕ್ಕೆ ಮರಳಿ ಬಂದ ಹಳೇ ಸಿಂಚನಾ

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ನಟಿ ರೂಪಿಕಾ ಹೊರಬಂದಿದ್ದಾರೆ. ಸಿಂಚನಾ ಪಾತ್ರ ನಿರ್ವಹಿಸುತ್ತಿದ್ದ ರೂಪಿಕಾ ಅವರು ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದಾರೆ. ರೂಪಿಕಾ ಸ್ಥಾನಕ್ಕೆ, ಈ ಹಿಂದೆ ಇದೇ ಪಾತ್ರ ನಿರ್ವಹಿಸಿದ್ದ ನಟಿ ದಿವ್ಯಶ್ರೀ ಅವರು ರೀ ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ:ಗೌತಮ್ ವಿರುದ್ಧ ಸೇಡುತೀರಿಸಿಕೊಳ್ಳಲು ಶಕುಂತಲಾ ಶಪಥ – ಕೇಡಿ ಜೇಡಿ ಜೊತೆ ಕೈ ಜೋಡಿಸಿದ ಶಕುಂತಲಾ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿಂಚನಾ ಪಾತ್ರ ಮಾಡುತ್ತಿದ್ದ ರೂಪಿಕಾ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ನಟಿ ರೂಪಿಕಾ ಬೇರೆ ಯಾವ ಕಾರಣಕ್ಕೂ ಸೀರಿಯಲ್‌ಗೆ ಗುಡ್‌ಬೈ ಹೇಳಿಲ್ಲ. ನಟಿ ರೂಪಿಕಾ ಮದುವೆಯಾಗುತ್ತಿದ್ದಾರೆ. ಇದೇ ಕಾರಣಕ್ಕೆ ಸೀರಿಯಲ್‌ನಿಂದ ಹೊರಬಂದಿದ್ದಾರೆ. ನಟಿ ರೂಪಿಕಾ
ಆಗಸ್ಟ್ 31ರಂದು ಹಸೆಮಣೆಯೇರಲಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಅಂಕಿತ್ ಎನ್ನುವವರ ಜೊತೆ ರೂಪಿಕಾ ಅವರ ಮದುವೆ ನೆರವೇರಲಿದೆ. ಅಂಕಿತ್ ಕೆನಡಾದಲ್ಲಿ ಇನ್ವೆಸ್ಟ್ ಕೋ ಅಂತ ಫೈನಾನ್ಸ್ ಕಂಪನಿಯಲ್ಲಿ, ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ವರ್ಕ್ ಆಗಿದ್ದಾರೆ. ಮದುವೆಯ ನಂತರ ಕೆನಡಾಗೆ ಹೋಗಿ ಸೆಟಲ್ ಆಗುವ ಪ್ಲ್ಯಾನ್ ಕೂಡಾ ಇದೆಯಂತೆ. ಇದೇ ಕಾರಣಕ್ಕೆ ನಟಿ ರೂಪಿಕಾ ಸೀರಿಯಲ್‌ನಿಂದ ಹೊರನಡೆದಿದ್ದಾರೆ.
ಸಿಂಚನಾ ಪಾತ್ರವನ್ನು ಇನ್ನುಮುಂದೆ ನಟಿ ದಿವ್ಯಶ್ರೀ ಅವರು ಮಾಡಲಿದ್ದಾರೆ. ವಿಶೇಷವೇನೆಂದರೆ, ದಿವ್ಯಶ್ರೀ ಅವರು, ರೂಪಿಕಾ ಅವರು ಈ ಪಾತ್ರಕ್ಕೂ ಬರುವ ಮುನ್ನ ಸಿಂಚನಾ ಆಗಿ ನಟಿಸಿದ್ದರು. ಅವರು ಸೀರಿಯಲ್ ತೊರೆದಿದ್ದರಿಂದ ಆ ರೋಲ್ ಅನ್ನು ರೂಪಿಕಾ ನಿರ್ವಹಿಸುತ್ತಿದ್ದರು. 2024ರಲ್ಲಿ, ದಿವ್ಯಶ್ರೀ ಸೀರಿಯಲ್ ಅರ್ಧಕ್ಕೆ ಬಿಟ್ಟಿದ್ದರು. ಈಗ ಮತ್ತೆ ಅದೇ ರೋಲ್ಗೆ ಕಮ್ಬ್ಯಾಕ್ ಆಗಿದ್ದಾರೆ.

ನೋಡಿರಿ

