ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ರೂಲ್ಸ್ ಬ್ರೇಕ್ – 1 ವಾರದಲ್ಲಿ ಬರೋಬ್ಬರಿ 7 ಲಕ್ಷ ರೂ. ದಂಡ ವಸೂಲಿ
ಬೆಂಗಳೂರು: ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ವೇ ಅಕ್ಷರಶಃ ಮೃತ್ಯುಕೂಪವಾಗಿದೆ. ಹೆದ್ದಾರಿಯಲ್ಲಿ ಸಂಚಾರ ಆರಂಭವಾದಾಗಿಂದ ಸಾವಿರಾರು ಅಪಘಾತಗಳು ಸಂಭವಿಸಿವೆ. 140ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ಅಪಘಾತಗಳನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ವಾಹನ ಸವಾರರು ನಿಯಮಗಳನ್ನು ಗಾಳಿಗೆ ತೂರಿದಾಗ ಸಂಚಾರ ಮಾಡಿದಾಗ ಪೊಲೀಸರು ದಂಡದ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ. ಈ ಹೆದ್ದಾರಿಯಲ್ಲಿ ಕಳೆದ 1 ವಾರದಿಂದ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬರೋಬ್ಬರಿ 7 ಲಕ್ಷ ರೂಪಾಯಿ ದಂಡವನ್ನು ಪೊಲೀಸರು ವಸೂಲಿ ಮಾಡಿದ್ದಾರೆ.
ಇದನ್ನೂ ಓದಿ: ವಿಮಾನ ಹೊರಟ ಕೆಲವೇ ಹೊತ್ತಲ್ಲಿ ಸುಟ್ಟ ವಾಸನೆ – ವಾಸನೆ ಮೂಲ ಕಂಡುಹಿಡಿದ ಅಧಿಕಾರಿಗಳಿಗೆ ಶಾಕ್!
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ನಿತ್ಯವೂ ಅಪಘಾತ ಸಂಭವಿಸುತ್ತಿದೆ. ಈಗಾಗಲೇ 140ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಅಪಘಾತಗಳನ್ನು ತಡೆಗಟ್ಟಲು ಹೊಸ ನಿಯಮಗಳನ್ನು ಜಾರಿ ಮಾಡಿತ್ತು. ಎಕ್ಸ್ಪ್ರೆಸ್ವೇನಲ್ಲಿ 100 ಕಿಮೀಗೂ ಅಧಿಕ ವೇಗದಲ್ಲಿ ವಾಹನಗಳು ಚಲಿಸದಂತೆ, ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದಲ್ಲದೇ ಟ್ರಕ್ಗಳು ಎಡಬದಿಯ ವೇನಲ್ಲಿ ಸಂಚಾರ ಮಾಡಬೇಕೆಂದು ನಿಯಮ ಜಾರಿ ಮಾಡಲಾಗಿದೆ. ಆದರೆ ವಾಹನ ಸವಾರರು ಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪೊಲೀಸರು ದಂಡ ವಿಧಿಸಲು ತೀರ್ಮಾನ ಮಾಡಿದ್ದರು. ಇದರಿಂದಾಗಿ ಕಳೆದ ಒಂದು ವಾರದದಿಂದ ಇಲ್ಲಿಯವರೆಗೆ 7 ಲಕ್ಷ ರೂ. ದಂಡ ವಸೂಲಿಯಾಗಿದೆ. ಅತಿಯಾದ ವೇಗದ ಚಾಲನೆಗೆ 500 ರೂ., ಲೈನ್ ಡಿಸಿಪ್ಲೀನ್ ಉಲ್ಲಂಘನೆಗೆ 250 ರೂ., ನಿರ್ಬಂಧ ವಿಧಿಸಿದ ವಾಹನಗಳ ಸಂಚಾರಕ್ಕೆ 100 ಮಂದಿ ಚಾಲಕರಿಗೆ ಇದುವರೆಗೆ ದಂಡ ಹಾಕಲಾಗಿದೆ.
ಹೆದ್ದಾರಿ ಪ್ರಾಧಿಕಾರ ಅಳಡಿಸಿರುವ ಎಇ ತಂತ್ರಜ್ಞಾನದ ಸ್ಪೀಡ್ ಡಿಟೆಕ್ಟರ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಗಣಂಗೂರು ಟೋಲ್ ಪ್ಲಾಜಾಕ್ಕೂ ಮೊದಲ 2 ಕಿಮೀ ದೂರದಲ್ಲಿ ಪೊಲೀಸರು ಸ್ಪೀಡ್ ಹಂಟರ್ ಮೂಲಕ ವಾಹನಗಳ ವೇಗದ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಅತೀಯಾಗಿ ವಾಹನ ಚಲಾಯಿಸಿದರೆ ಚಾಲಕರಿಗೆ ಟೋಲ್ನಲ್ಲಿ ಪೊಲೀಸರೇ ದಂಡ ವಸೂಲಿ ಮಾಡುತ್ತಿದ್ದಾರೆ.