ಜನರನ್ನು ಕಾಡುತ್ತಿದೆ RSV Virus! – ಎಚ್ಚರ ತಪ್ಪಿದ್ರೆ ಜೀವಕ್ಕೆ ಕುತ್ತು!

ಜನರನ್ನು ಕಾಡುತ್ತಿದೆ RSV Virus! – ಎಚ್ಚರ ತಪ್ಪಿದ್ರೆ ಜೀವಕ್ಕೆ ಕುತ್ತು!

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವಂತೆ, ಮಳೆಗಾಲದ ಬಿಸಿಲು ವಾತಾವರಣದಲ್ಲೂ ಈಗ ತಲೆನೋವು, ಶೀತ ಕಾಣಿಸಿಕೊಳ್ಳುತ್ತವೆ. ಇತ್ತೀಚೆಗೆ ಅಂತದ್ದೇ ಆರ್ ಎಸ್ ವಿ ಸೋಂಕಿನ ಭೀತಿ  ಜನರನ್ನು ಕಾಡುತ್ತಿದೆ. ಆರ್ ಎಸ್‌ವಿ ಅಂದ್ರೆ ಏನು? ಇದ್ರ ಲಕ್ಷಣಗಳು ಏನು ಅನ್ನೋ ಮಾಹಿತಿ ಇಲ್ಲಿದೆ.

ಇತ್ತೀಚೆಗೆ ಸಣ್ಣ ಮಕ್ಕಳು ಸೇರಿದಂತೆ ವಯಸ್ಕರನ್ನು ಆರ್ ಎಸ್ ವಿ ಸೋಂಕು ಕಾಡುತ್ತಿದೆ. ಆರ್ ಎಸ್ ವಿ ಎಂದರೆ ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್. ಇದು ಹೆಚ್ಚಾಗಿ ಚಳಿಗಾಲದ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆರ್ ಎಸ್ ವಿ ಸಾಮಾನ್ಯವಾಗಿ ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ. ಆದರೀಗ ವಯಸ್ಕರನ್ನೇ ಹೆಚ್ಚಾಗಿ ಕಾಡುತ್ತಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ: ಕೋವಿಡ್‌ನಿಂದ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಹೆಚ್ಚಿದ ಮಧುಮೇಹ..! – ಅಧ್ಯಯನದಿಂದ ಆತಂಕಕಾರಿ ವಿಚಾರ ಬಹಿರಂಗ

ಈ ವೈರಸ್ ಶ್ವಾಸಕೋಶದ ಸಮಸ್ಯೆ, ಹೃದ್ರೋಗದ ಸಮಸ್ಯೆ, ರೋಗನಿರೋಧಕ ಕಡಿಮೆ ಇರುವವರನ್ನೇ ಟಾರ್ಗೆಟ್ ಮಾಡುತ್ತಿದೆ.  ವಯಸ್ಸಾದವರಲ್ಲಿ ಆರ್ ಎಸ್ ವಿ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುವಂತೆಯೇ ಇರುತ್ತವೆ. ಕೆಮ್ಮು, ಗಂಟಲುನೋವು, ಜ್ವರ, ಉಬ್ಬಸ ಮತ್ತು ಉಸಿರಾಟದ ತೊಂದರೆ ಕಾಡುತ್ತದೆ.  ಈ ರೋಗ ಲಕ್ಷಣಗಳಿಂದ ವಯಸ್ಸಾದ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಅಲ್ಲದೆ ಮೂತ್ರಪಿಂಡ ಮತ್ತು ಶ್ವಾಸಕೋಶದ ಸಮಸ್ಯೆಗಳು ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ವೈರಸ್ ನಿಂದ ದೂರ ಇರುವುದು ಹೇಗೆ?

  • ಚಳಿಗಾಲದ ತಿಂಗಳಲ್ಲಿಯೇ ಈ ವೈರಸ್‌ ಹೆಚ್ಚು ವೇಗವಾಗಿ ಹರಡುತ್ತದೆ ಎಂಬುದು ಸಾಬೀತಾದಿದೆ. ಆದ್ದರಿಂದ ಚಳಿಗಾಲದಲ್ಲಿ ಹೆಚ್ಚು ತೇವಾಂಶವಿರುವ ಪ್ರದೇಶದಲ್ಲಿ ಓಡಾಡುವುದು, ಸೊಳ್ಳೆಗಳ ಕಡಿತ, ಮಳೆಯಲ್ಲಿ ನೆನೆಯುವುದು, ಗಾಳಿಗೆ ಮೈ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು.
  • ಕೋವಿಡ್ ರೀತಿಯಲ್ಲಿ ಈ ರೋಗ ನಿಯಂತ್ರಣವನ್ನು ಮಾಡಬೇಕಿದೆ. ಅನಾರೋಗ್ಯದ ಜನರ ನಿಕಟ ಸಂಪರ್ಕದಿಂದ ದೂರವಿರಿ. ದೇಹವನ್ನು ಸದಾ ಬೆಚ್ಚಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಈಗಾಗಲೇ ಯಾರಿಗಾದರು ಜ್ವರ ಅಥವಾ ನೆಗಡಿ ಬಂದಿದ್ದರೆ, ಅವರಿಂದಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.
  • ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಮತ್ತು ಸಂಪೂರ್ಣವಾಗಿ ತೊಳೆಯಿರಿ, ಅದು ಉಗುರುಗಳು ಸೇರಿದಂತೆ ಅಂಗೈ ಮತ್ತು ಕೈಗಳ ಎಲ್ಲಾ ಭಾಗಗಳನ್ನು ತಲುಪುತ್ತದೆ.
  • ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟವೆಲ್‌ನಿಂದ ಮುಚ್ಚಿಕೊಳ್ಳಬೇಕು.
  • ಶುಚಿತ್ವವಿಲ್ಲದ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಈ ರೋಗ ನಮಗೆ ತಗುಲುವ ಸಾಧ್ಯತೆಗಳು ಇರುತ್ತವೆ.
  • ಈಗಾಗಲೇ ಕೋವಿಡ್‌ಗೆ ತುತ್ತಾಗಿ ಗುಣಮುಖರಾಗಿರುವವರು, ಕೋವಿಡ್‌ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಮಾರ್ಗವನ್ನೇ ಅನುಸರಿಸಬೇಕು, ಸ್ಯಾನಿಟೈಜರ್‌ ಬಳಕೆ, ಮಾಸ್ಕ್‌ ಬಳಕೆ ಕಡ್ಡಾಯ ಮಾಡಬೇಕು. ಈಗಾಗಲೇ ಸೋಂಕು ಇರುವವರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಉತ್ತಮ.

Shwetha M