ಮಗುವಿಗೆ ಹೆಸರಿಡಲು ಈಕೆಗೆ ಲಕ್ಷ ಲಕ್ಷ ಹಣ ಕೊಡುತ್ತಾರೆ ಪೋಷಕರು! – ಏಕೆ ಗೊತ್ತಾ?   

ಮಗುವಿಗೆ ಹೆಸರಿಡಲು ಈಕೆಗೆ ಲಕ್ಷ ಲಕ್ಷ ಹಣ ಕೊಡುತ್ತಾರೆ ಪೋಷಕರು! – ಏಕೆ ಗೊತ್ತಾ?   

ಸಾಮಾನ್ಯವಾಗಿ ಕುಟುಂಬದಲ್ಲಿ ಯಾವುದಾದರೊಂದು ಮಗು ಜನನವಾದ ಕೂಡಲೇ ಏನು ಹೆಸರಿಡುವುದು ಎಂದು ಯೋಚಿಸುತ್ತಾರೆ. ಕೆಲ ಪೋಷಕರು ತಮ್ಮ ಮಗುವಿಗೆ ಯುನಿಕ್ ಆಗಿರುವ ಹೆಸರನ್ನಿಡಲು ಬಯಸುತ್ತಾರೆ. ತಮ್ಮ ನೆರೆಹೊರೆಯಲ್ಲಾಗಲಿ, ಬಂಧು-ಮಿತ್ರರಲ್ಲಾಗಲಿ ಆ ಹೆಸರು ಯಾರು ತಮ್ಮ ಮಗುವಿಗೆ ಇಟ್ಟಿರಬಾರದು ಎಂಬುದು ಅವರ ಭಾವನೆಯಾಗಿರುತ್ತೆ. ಇಷ್ಟೇ  ಅಲ್ಲದೇ ಮಗುವಿನ ಹೆಸರು ಆ ಮಗುವಿನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಪೋಷಕರು ಕೂಡ ತಮ್ಮ ಮಗುವಿಗೆ ನಾಮಕರಣ ಮಾಡುವಾಗ ತುಂಬಾ ಯೋಚನೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಈ ಕೆಲಸಗಳನ್ನು ಸುಲಭ ಮಾಡುವ ವೃತ್ತಿಪರರು ಇದ್ದಾರೆ ಎಂದರೆ ನೀವು ನಂಬುತ್ತೀರಾ?..

ಇದನ್ನೂ ಓದಿ: ಇರಲಾರದೆ ಇರುವೆ ಬಿಟ್ಟುಕೊಂಡ ಅಜ್ಜ – ಮೊಸಳೆ ಮುಂದೆ ಬೇಕಿತ್ತಾ ಸಾಹಸ?

ಹೌದು, ನ್ಯೂಯಾರ್ಕ್​ ಮೂಲದ ‘ಪ್ರೊಫೆಷನಲ್ ಬೇಬಿ ನೇಮರ್’ ಟೇಲರ್ ಎ. ಹಂಫ್ರೆ ಎಂಬುವವರು ಮಗುವಿಗೆ ಪರಿಪೂರ್ಣವಾದ ಹೆಸರನ್ನು ಆಯ್ಕೆ ಮಾಡುತ್ತಿದ್ದಾರೆ. ಇದಕ್ಕಾಗಿ ಹಂಫ್ರೆ ಪಡೆಯುವ ಸಂಭಾವನೆ 1,500 ಡಾಲರ್ ಅಂದರೆ ಬರೋಬ್ಬರಿ 1.14 ಲಕ್ಷ ರೂಪಾಯಿ!

ಹಂಫ್ರೆ 2015 ರಲ್ಲಿ ಮಕ್ಕಳಿಗೆ ವಿಶಿಷ್ಟವಾದ ಹೆಸರುಗಳನ್ನು ಸೂಚಿಸಲು ಆರಂಭಿಸಿದರು. ಆರಂಭದಲ್ಲಿ ಅವರು ತಾನು ಮಗುವಿಗೆ ಸೂಚಿಸಿದ ಹೆಸರು ಹಾಗೂ ಆ ಹೆಸರಿನ ಅರ್ಥಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಳ್ಳುತ್ತಿದ್ದರು. ಇದು ಹೆಚ್ಚು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಂತೆ ಮಗುವಿಗೆ ಹೆಸರು ಸೂಚಿಸುವುದನ್ನು ವೃತ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

2018 ರಲ್ಲಿ ನನಗೆ ಮಕ್ಕಳ ಹೆಸರುಗಳನ್ನು ಸೂಚಿಸುವುದು ಒಂದೊಳ್ಳೆ ಕೌಶಲ್ಯ ಅಂತಾ ಅರ್ಥವಾಯಿತು. ಅದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಿದ್ದಾರೆ ಎಂದು ನಾನು ಅರಿತುಕೊಂಡೆ. ಈ ರೀತಿಯಲ್ಲಿ ಮಹಿಳೆಯರಿಗೆ ಸಹಾಯ ಮಾಡಬೇಕು ಅಂತಾ ನಿರ್ಧಾರ ಮಾಡಿದೆ. ಕೆಲವರು ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡುವಲ್ಲಿ ಸೋಮಾರಿಗಳಾಗಿದ್ದಾರೆ. ಹೀಗಾಗಿ ನನ್ನ ಬಳಿ ಬರುತ್ತಾರೆ. ಇನ್ನೂ ಕೆಲವು ಪೋಷಕರು ತಮ್ಮ ಮಗುವಿಗೆ ಒಂದೊಳ್ಳೆ ಹೆಸರು ಇಡುವುದಕ್ಕೆ ಹಣ ನೀಡುತ್ತಾರೆ ಎಂದು ಹಂಫ್ರೆ ಹೇಳಿದ್ದಾರೆ.

“ನಾನು ಎಷ್ಟು ಕಡಿಮೆ ಫಾಲೋವರ್ಸ್ ಗಳನ್ನು ಹೊಂದಿದ್ದರೂ ಸಹ ಇಷ್ಟೊಂದು ಜನರು ನನ್ನನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ ಅಂತಾ ನೋಡಿದರೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ. ನಾನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದಾಗ, ಜನರು ಈ ಮುದ್ದಾದ ಹೆಸರುಗಳ ಮೇಲಿನ ತಮ್ಮ ಪ್ರೀತಿಯಿಂದ ನನ್ನ ಬಳಿಗೆ ಬರುತ್ತಿದ್ದರು” ಎಂದು ಹೇಳಿದ್ದಾರೆ.

ಹಂಫ್ರೆ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಹೆಸರಿಡಲು ಸಹಾಯ ಮಾಡಿದ್ದು, ತಾವು ಆಯ್ಕೆ ಮಾಡುವ ಹೆಸರಿಗೆ ಅನುಗುಣವಾಗಿ ಹೆತ್ತವರು ಪಾವತಿಸಬೇಕಾಗುತ್ತದೆ. ತಾವು ಆಯ್ಕೆ ಮಾಡುವ ಹೆಸರಿಗೆ 1,500 ಡಾಲರ್ ನಿಂದ 10,000 ಡಾಲರ್ ದರವನ್ನು ನಿಗದಿಪಡಿಸಲಾಗಿದೆ. 1,500 ಡಾಲರ್ ಹಣ ಪಾವತಿಸಿದರೆ ಮಗುವಿನ ಕುಟುಂಬದ ಹಿರಿಯರ ಹೆಸರುಗಳನ್ನು ಸೂಚಿಸಲಾಗುತ್ತದಂತೆ. ವಂಶಾವಳಿಯ ಬಗ್ಗೆ ತಿಳಿದುಕೊಳ್ಳಲು ಒಂದು ದೂರವಾಣಿ ಕರೆ ಮತ್ತು ಮಕ್ಕಳ ಹೆಸರುಗಳ ಒಂದು ಪಟ್ಟಿಯನ್ನು ನೀಡಲಾಗುತ್ತದೆ.

ಇನ್ನು ಪೋಷಕರು ಹೆಚ್ಚು ಹಣ ನೀಡಿದರೆ ಮಗುವಿಗೆ ಆನ್-ಬ್ರ್ಯಾಂಡ್ ಆಗಿರುವ ಹೆಸರನ್ನು ಸೂಚಿಸಲಾಗುತ್ತದೆ. ಈಕೆ ಮಕ್ಕಳಿಗೆ ಸೂಚಿಸುವ ಹೆಸರು ಪೋಷಕರಿಗೆ ಇಷ್ಟವಾದರೆ 10,000 ಡಾಲರ್ ಎಂದರೆ 7.6 ಲಕ್ಷ ರೂಪಾಯಿ ಸಹ ನೀಡುತ್ತಾರಂತೆ.

suddiyaana