ಬೆಂಗಳೂರಿಗರೇ ಎಚ್ಚರ! – ಇನ್ಮುಂದೆ ನೀರು ಪೋಲು ಮಾಡಿದ್ರೆ 5,000 ದಂಡ ಫಿಕ್ಸ್!‌  

ಬೆಂಗಳೂರಿಗರೇ ಎಚ್ಚರ! – ಇನ್ಮುಂದೆ ನೀರು ಪೋಲು ಮಾಡಿದ್ರೆ 5,000 ದಂಡ ಫಿಕ್ಸ್!‌  

ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ನೀರಿನ ಅಭಾವ ಕೂಡ ಹೆಚ್ಚಾಗ್ತಿದೆ. ಇದೀಗ ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ಬೆಂಗಳೂರಿನಲ್ಲೂ ನೀರಿನ ಕೊರತೆ ಶುರುವಾಗುತ್ತಿದೆ. ಇದೀಗ ಬೆಂಗಳೂರು ಜಲಮಂಡಳಿ ಸಿಲಿಕಾನ್‌ ಸಿಟಿ ಮಂದಿಗೆ ಎಚ್ಚರಿಗೆ ನೀಡಿದೆ. ಇನ್ಮುಂದೆ ನೀರು ಪೋಲು ಮಾಡಿದ್ರೆ ದಂಡ ಬೀಳುತ್ತೆ.

ಇದನ್ನೂ ಓದಿ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಬಂಧನ ಭೀತಿ! – ವಿದೇಶಕ್ಕೆ ಎಸ್ಕೇಪ್‌ ಆದ್ರಾ?

ಈ ಸಲ ಬೆಂಗಳೂರಿನ ಜನರಿಗೆ ಬೇಸಿಗೆಯಲ್ಲಿ ಕಾವೇರಿ ಕುಡಿಯುವ ನೀರಿನ ಅಭಾವ ಆಗದಂತೆ ಜಲಮಂಡಳಿ ಮುನ್ನೆಚ್ಚರಿಕೆ ವಹಿಸಿದೆ. ಈಗಾಗಲೇ ಅಧಿಕಾರಿಗಳು ಸಭೆ ನಡೆಸಿದ್ದು, ನೀರಿನ ಸಮಸ್ಯೆ ಆಗುವ ಭಾಗದಲ್ಲಿ ಟ್ಯಾಂಕರ್‌ ವ್ಯವಸ್ಥೆ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಒಂದು ವೇಳೆಯಾದ್ರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳೋದಕ್ಕೆ ಜಲಮಂಡಳಿ ಮುಂದಾಗಿದೆ.

ಬೆಂಗಳೂರಿಗೆ ಕುಡಿಯುವ ನೀರನ್ನ ಒದಗಿಸುವ ಕಾವೇರಿ ನೀರು ಸದ್ಯ ಕೆಆರ್‌ಎಸ್‌ನಲ್ಲಿ 54 ಟಿಎಂಸಿ ನೀರು ಇದೆ. ಜುಲೈವರೆಗೆ ಬೆಂಗಳೂರಿಗೆ 14 ಟಿಎಂಸಿ ನೀರು ಸಾಕಾಗುತ್ತೆ. ಆದ್ರೇ ಇಡೀ ಬೆಂಗಳೂರಿಗೆ ಕಾವೇರಿಯ ಜೊತೆಗೆ ಬೋರ್‌ವೆಲ್ ನೀರು ಕೂಡ ಬಹಳ ಪ್ರಮುಖ ಪಾತ್ರವಹಿಸಿದ್ದು, ಬೋರ್‌ವೆಲ್‌ನಲ್ಲಿ ಬೇಸಿಗೆಯಲ್ಲಿ ನೀರು ಕಡಿಮೆಯಾಗೋದು ನಿಶ್ವಿತ. ಕಳೆದ ವರ್ಷದಿಂದ ಜಲಮಂಡಳಿಯೇ ಸಂಪೂರ್ಣವಾಗಿ ಬೋರ್ ವೇಲ್ ಗಳ ನಿರ್ವಹಣೆ ಮಾಡ್ತಿದ್ದು, ಅಂತರ್ಜಲ ಕುಸಿಯದಂತೆ ಕ್ರಮ ಕೈಗೊಂಡಿದೆ.

ಈ ಬಾರಿಯೂ ಅದೇ ರೀತಿ ಎಲ್ಲೇಲ್ಲಿ ಅಗತ್ಯವಿದೆಯೋ ಆ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪ್ಲ್ಯಾನ್‌ ಕೂಡ ಜಲಮಂಡಳಿ ಮಾಡಿಕೊಂಡಿದೆ. ಕಾವೇರಿ ನೀರಿನಲ್ಲಿ ಬೈಕ್, ಕಾರು ತೊಳೆಯೋದು, ನೀರನ್ನ ಬೇಕಾಬಿಟ್ಟಿ ಪೋಲು ಮಾಡಿದ್ರೇ ಜಲಮಂಡಳಿ ದಂಡ ಹಾಕಲು ಕೂಡ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ವೀಕ್ಷಕರು ಮತ್ತು ಬ್ಲೂಫೋರ್ಸ್‌ ಕೂಡ ಕಾರ್ಯಚರಣೆ ಮಾಡಲಿದೆ. ಜನರು ಜೀವ ಜಲವನ್ನ ವ್ಯರ್ಥ ಮಾಡದೇ ಸರಿಯಾಗಿ ಬಳಕೆ ಮಾಡಿದ್ರೇ ಜಲಕ್ಷಾಮವಾಗೋದು ಕಡಿಮೆ ಜೊತೆಗೆ ದಂಡ ಕಟ್ಟುವ ಪ್ರಮೇಯವೂ ಬರಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Shwetha M