ಅಪರಿಚಿತರ ಮದ್ವೆಗೆ 1 ಕೋಟಿ ಖರ್ಚು.. 8 ತಿಂಗಳಲ್ಲಿ 331 ಕೋ. ಹಣ ವರ್ಗಾವಣೆ! – ಕ್ಯಾಬ್ ಚಾಲಕ ಇಷ್ಟೊಂದು ಶ್ರೀಮಂತ ಆಗಿದ್ಹೇಗೆ?

ಈಗಿನ ಕಾಲದಲ್ಲಿ ಒಂದೇ ಮನೆಯಲ್ಲಿದ್ರೂ ಒಬ್ಬರಿಗೊಬ್ಬರು ಸಹಾಯ ಮಾಡಲ್ಲ. ಆದ್ರೀಗ ಇಲ್ಲೊಬ್ಬ ಕ್ಯಾಬ್ ಟ್ರೈವರ್ ಪರಿಚಯ ಇಲ್ಲದವರ ಮದುವೆಗೆ ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಬೇರೆಯವರ ಮದುವೆ ಖರ್ಚು ಮಾಡಿದ ಬೆನ್ನಲ್ಲೇ ಈತ ಜೈಲಿನಲ್ಲಿ ಕಂಬಿ ಎಣಿಸುವಂತೆ ಆಗಿದೆ.
ಇದನ್ನೂ ಓದಿ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಮೇಕೆ ಕದಿಯಲು ಹೋಗಿ ಬೋನಿನಲ್ಲಿ ಬಂಧಿಯಾದ ವ್ಯಕ್ತಿ!
ಏನಿದು ಘಟನೆ?
ರ್ಯಾಪಿಡೋ ಚಾಲಕನ ಖಾತೆ, ಆತನ ಖರ್ಚು ವೆಚ್ಚ ನೋಡಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಶಾಕ್ ಆಗಿದ್ದಾರೆ. ಕಾರಣ ಈ ಆಟೋ ಚಾಲಕನಿಗೆ ಪರಿಚಯವೇ ಇಲ್ಲದವರ ಮದುವೆಗೆ ಬರೋಬ್ಬರಿ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಕೇವಲ 8 ತಿಂಗಳಲ್ಲಿ 331.36 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾನೆ. ಆದ್ರೆ ಈತ ಆಟೋ ಓಡಿಸಿ ಇಷ್ಟೊಂದು ಹಣ ಸಂಪಾದನೆ ಮಾಡಿಲ್ಲ. ಆತನ ಹಣದ ಮೂಲ ಹುಡುಕಲು ಹೋಗಿ ಇಡಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಗುಜರಾತ್ನ ಯುವ ರಾಜಕೀಯ ನಾಯಕ ಅದಿತ್ಯ ಝುಲಾ ಮದುವೆ ಉದಯಪುರದ ತಾಜ್ ಅರಾವಳಿ ರೆಸಾರ್ಟ್ನಲ್ಲಿ ನಡೆದಿತ್ತು. ಈ ಮದುವೆಗೆ ಇದೇ ರ್ಯಾಪಿಡೋ ಚಾಲಕ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಆದಿತ್ಯ ಝುಲಾಗೂ ಈ ಉಬರ್ ಚಾಲಕನಿಗೂ ಯಾವುದೇ ಸಂಪರ್ಕವಿಲ್ಲ. ಆದಿತ್ಯ ಝುಲಾಗೆ ಒಂದೇ ಒಂದು ಬಾರಿ ಫೋನ್ ಮಾಡಿಲ್ಲ. ಆದರೆ ಮದುವೆಯ ಹಲವು ಬಿಲ್, ಪಾವತಿಗಳನ್ನು ಇದೇ ರ್ಯಾಪಿಡೋ ಚಾಲಕ ಮಾಡಿದ್ದಾನೆ. ಇದರ ಒಟ್ಟು ಮೊತ್ತ 1 ಕೋಟಿ ರೂಪಾಯಿ. ಇದಿಷ್ಟೇ ಅಲ್ಲ ಆಗಸ್ಟ್ 2024ರಿಂದ ಎಪ್ರಿಲ್ 2025ರ 8 ತಿಂಗಳಲ್ಲಿ 331.36 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ. ಹಲವು ಅಪರಿಚಿತ ಖಾತೆಗಳಿಂದ ಈತನ ಖಾತೆಗೆ ಹಣ ಜಮೆ ಆಗಿದೆ. ಜೊತೆಗೆ ಹಲವು ಖಾತೆಗಳಿಗೆ ಈತನ ಹಣ ಪಾವತಿ ಮಾಡಿದ್ದಾನೆ.
ಈ ರ್ಯಾಪಿಡೋ ಚಾಲಕ ಬೇರೆ ಖಾತೆಗಳಿಗೆ ಹಣ ವರ್ಗಾಯಿಸುವ ಹಾಗೂ ಈತನ ಖಾತೆಗೆ ಹಣ ಜಮೆ ಮಾಡುವ ಎಲ್ಲಾ ಖಾತೆಗಳು ಅಪರಿಚಿತ. ಒಂದಕ್ಕೊಂದು ಸಂಬಂಧವೇ ಇಲ್ಲ. ಇದೇ ಕಾರಣದಿಂದ ಇಡಿ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಎಲ್ಲಾ ಟ್ರಾನ್ಸಾಕ್ಷನ್ ಪರಿಶೀಲನೆ ಮಾಡಿದ ಇಡಿ ಅಧಿಕಾರಿಗಳಿಗೆ ಒಂದು ಖಾತೆ ಬೆಟ್ಟಿಂಗ್ ಖಾತೆಗೆ ಲಿಂಕ್ ಆಗಿರುವುದು ಪತ್ತೆಯಾಗಿದೆ. ಹೀಗಾಗಿ ತನಿಖೆ ಮುಂದುವರಿಸಿದ ಇಡಿ ಅಧಿಕಾರಿಗಳಿಗೆ ಈ ರ್ಯಾಪಿಡೋ ಚಾಲಕ ಬೆಟ್ಟಿಂಗ್ನಲ್ಲೂ ಸಕ್ರಿಯವಾಗಿದ್ದಾರೆ. ಆದರೆ ಈತನ ಫೋನ್ ಸೇರಿದಂತೆ ಇತರ ಯಾವುದೇ ವೇದಿಕೆಗಳಲ್ಲಿ ಬೆಟ್ಟಿಂಗ್ ನಡೆಸಿದ ಮಾಹಿತಿ ಇಲ್ಲ. ತನಿಖೆ ತೀವ್ರಗೊಳ್ಳುತ್ತಿದ್ದಂತ ಹಲವು ಅನಾಮಿಕ ಖಾತೆಗಳು, ಗೊತ್ತಿಲ್ಲದ ವ್ಯವಹಾರಗಳು ಬಯಲಾಗುತ್ತಿದೆ. ಹೀಗಾಗಿ ಈತನ ವ್ಯವಹಾರವೇನು? ಹಣದ ಮೂಲದ ಕುರಿತು ತೀವ್ರ ತನಿಖೆ ಮುಂದುವರಿದಿದೆ.

ನೋಡಿರಿ

