ರಾಯರ ಸನ್ನಿಧಿಯಲ್ಲಿ ಹುಂಡಿ ಎಣಿಕೆ – 34 ದಿನದಲ್ಲಿ ಸಂಗ್ರಹವಾಗಿದ್ದು ಎಷ್ಟು ಹಣ ಗೊತ್ತಾ?

ರಾಯರ ಸನ್ನಿಧಿಯಲ್ಲಿ ಹುಂಡಿ ಎಣಿಕೆ – 34 ದಿನದಲ್ಲಿ ಸಂಗ್ರಹವಾಗಿದ್ದು ಎಷ್ಟು ಹಣ ಗೊತ್ತಾ?

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಲ್ಲಿ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

ಇದನ್ನೂ ಓದಿ: ಜಮ್ಮುವಿನ ಬಾಲಾಜಿ ದೇವಸ್ಥಾನ ಉದ್ಘಾಟನೆಗೆ ದಿನಾಂಕ ನಿಗದಿ – ಬಾಲಾಜಿ ದರ್ಶನಕ್ಕೆ ಯಾವಾಗಿಂದ ಅವಕಾಶ?

ಶ್ರೀಮ​ಠ​ದಲ್ಲಿ ಪ್ರತಿ ತಿಂಗ​ಳಿ​ನಂತೆ ಮೇ ತಿಂಗಳು ಸೇರಿ 34 ದಿನ​ಗ​ಳಲ್ಲಿ ರಾಯರ ಮಠಕ್ಕೆ ಭಕ್ತಸಾಗರವೇ ಹರಿದುಬಂದಿದೆ. ಎಪ್ರಿಲ್- ಮೇ ತಿಂಗಳಲ್ಲಿ ಹೆಚ್ಚಿದ ಭಕ್ತರು ರಾಯರ ದರ್ಶನ ಪಡೆದಿದ್ದಾರೆ. ಇದೀಗ ಮೇ ತಿಂಗಳಿನ ಹುಂಡಿ ಎಣಿಕೆ ಕಾರ್ಯ ಮಾಡಿದ್ದು, ಕೇವಲ 34 ದಿನದಲ್ಲಿ 3. 53 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಇದು ಶ್ರೀಮ​ಠದ ಇತಿ​ಹಾ​ಸ​ದ​ಲ್ಲಿಯೇ ಹುಂಡಿ​ಯಲ್ಲಿ ಇಷ್ಟೊಂದು ಮೊತ್ತದ ಕಾಣಿಕೆ ಹಣವಾಗಿದೆ.

ಭಕ್ತರು, ದಾನಿ​ಗಳು ಹುಂಡಿ​ಯಲ್ಲಿ ಹಾಕಿದ್ದ ದೇಣಿ​ಗೆ​ಯನ್ನು ಶ್ರೀಮ​ಠದ ಸಿಬ್ಬಂದಿ, ಸೇವಕರು, ನೂರಾರು ಭಕ್ತರು ಎಣಿಕೆ ಕಾರ್ಯ ನಡೆಸಿದ್ದಾರೆ.  3,46,20,432 ರೂಪಾಯಿ ನೋಟುಗಳು, 7,59,420 ರೂಪಾಯಿ ನಾಣ್ಯಗಳು ಸೇರಿದಂತೆ ಒಟ್ಟು 3,53,79,852 ರೂಪಾಯಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ. ಇದರ ಜೊತೆಗೆ 197 ಗ್ರಾಂ. ಚಿನ್ನ, 1 ಕೆ.ಜಿ. 187 ಗ್ರಾಂ. ಬೆಳ್ಳಿಯನ್ನು ಭಕ್ತರು ಹುಂಡಿ​ಯಲ್ಲಿ ಹಾಕಿ​ದ್ದಾರೆ ಎಂದು ಶ್ರೀಮಠದ ಪ್ರಕ​ಟ​ಣೆ ತಿಳಿಸಿದೆ.

suddiyaana