IPLನಲ್ಲೂ ಕುಬೇರ ಕಿಂಗ್ ಕೊಹ್ಲಿ! ಸೂಪರ್ ಸ್ಟಾರ್ಸ್ ಸಾಲಿನಲ್ಲಿ KL
RCB ಸಿಂಹಿಣಿಯೂ ನಂಬರ್-1

IPLನಲ್ಲೂ ಕುಬೇರ ಕಿಂಗ್ ಕೊಹ್ಲಿ! ಸೂಪರ್ ಸ್ಟಾರ್ಸ್ ಸಾಲಿನಲ್ಲಿ KLRCB ಸಿಂಹಿಣಿಯೂ ನಂಬರ್-1

ಐಪಿಎಲ್ ಅಂದ್ರೆ ಜಸ್ಟ್ ಒಂದು ಕ್ರಿಕೆಟ್ ಟೂರ್ನಮೆಂಟ್ ಅಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ರಣರೋಚಕ ಕ್ರೀಡಾ ಲೀಗ್‌. ಪ್ರತೀ ವರ್ಷ ಸಮ್ಮರ್ ಟೈಮಲ್ಲಿ ಶುರುವಾಗುವ ಐಪಿಎಲ್ ಕಂಪ್ಲೀಟ್ 2 ತಿಂಗಳು  ಭಾರತೀಯರ ಪಾಲಿಗೆ ಹಬ್ಬವೇ. ಯಂಗ್ ಟ್ಯಾಲೆಂಟ್​ಗಳಿಗಂತೂ ತಮ್ಮ ಕೆರಿಯರ್ ಬಿಲ್ಡ್ ಮಾಡಿಕೊಳ್ಳೋಕೆ ಗೋಲ್ಡನ್ ಆಪರ್ಚುನಿಟಿ ಕೂಡ. ಇದೆಲ್ಲಕ್ಕಿಂತ ಮೇನ್ಲಿ ಆಟಗಾರರಿಗೆ ಚಿನ್ನದ ಮೊಟ್ಟೆ ಇಡೋ ಕೋಳಿ. ಜಸ್ಟ್ ಒಂದು ಸೀಸನ್​ಗೆ ಕೋಟಿ ಕೋಟಿ ಸಂಭಾವನೆ ಪಡೀತಾರೆ. ಈ ಸಂಭಾವನೆ ವಿಚಾರದಲ್ಲಿ ನಮ್ಮ ಆರ್​ಸಿಬಿಯ ಐಕಾನ್​ಗಳೇ ಟಾಪ್​ನಲ್ಲಿದ್ದಾರೆ.

ಐಪಿಎಲ್ ಅಂದ್ರೇನೇ ರಂಗುರಂಗಿನ ಲೀಗ್. ಸಿಕ್ಸ್, ಫೋರ್​ಗಳ ಬ್ಯಾಟಿಂಗ್ ವೈಭವದ ಜೊತೆಗೆ ಅಭಿಮಾನಿಗಳ ಎಮೋಷನ್ಸ್, ಗ್ಯಾಲರಿಯಲ್ಲಿನ ಚಿಯರ್ಸ್, ಲಾಸ್ಟ್ ಬಾಲ್ ಥ್ರಿಲ್ಲರ್ ಹೀಗೆ ಕಂಪ್ಲೀಟ್ ಎಂಟರ್​ಟೈನಿಂಗ್ ಆಗಿರುತ್ತೆ. ಐಪಿಎಲ್​ನಲ್ಲಿ ಆಡ್ಬೇಕು ಅನ್ನೋದು ಎಷ್ಟೋ ಜನರ ಕನಸೂ ಕೂಡ. ಌಂಡ್ ಐಪಿಎಲ್​ನಲ್ಲಿ ತಮ್ಮ ಟ್ಯಾಲೆಂಟ್ ಪ್ರೂವ್ ಮಾಡಿ ರಾಷ್ಟ್ರೀಯ ತಂಡಗಳನ್ನ ಸೇರಿಕೊಂಡ ಸಾಕಷ್ಟು ಪ್ಲೇಯರ್ಸ್ ಕೂಡ ಸಿಕ್ತಾರೆ. ಅದ್ರಲ್ಲೂ ಪ್ರತಿಭಾವಂತರಿಗಂತೂ ಒಂದೇ ಸೀಸನ್​ನಲ್ಲಿ ಅವ್ರ ಫೈನಾನ್ಶಿಯಲ್ ಗ್ರಾಫೇ ಚೇಂಜ್ ಆಗಿಬಿಡುತ್ತೆ. ಈ ಅರ್ನಿಂಗ್ ವಿಚಾರದಲ್ಲೂ ನಮ್ಮ ಕಿಂಗ್ ವಿರಾಟ್ ಕೊಹ್ಲಿ ಲೀಡ್​ನಲ್ಲಿದ್ದಾರೆ.

ಶತಕಗಳಲ್ಲೂ ಫಸ್ಟ್.. ರನ್ಸ್ ನಲ್ಲೂ ನಂಬರ್ 1.. ಗಳಿಕೆಯಲ್ಲೂ ಟಾಪರ್!

ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಐಪಿಎಲ್​ನಲ್ಲೂ ಬಾಸ್ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪ್ರತೀ ಸೀಸನ್​ಗಳನ್ನೂ ಆಡಿರೋ ಕಿಂಗ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಶತಕ ಹಾಗೇ ಅತೀ ಹೆಚ್ಚು ರನ್ಸ್ ಕಲೆ ಹಾಕಿದ ಪ್ಲೇಯರ್. 9,336 ರನ್ ಗಳಿಸುವ ಮೂಲಕ ಟೂರ್ನಿಯ ಸಾರ್ವಕಾಲಿಕ ಗರಿಷ್ಠ ರನ್ ಸ್ಕೋರರ್ ಆಗಿ ಮೊದಲ ಸ್ಥಾನದಲ್ಲಿದ್ದಾರೆ. ಅವರು 283 ಪಂದ್ಯಗಳ 275 ಇನ್ನಿಂಗ್ಸ್‌ಗಳಿಂದ ಈ ಮೈಲಿಗಲ್ಲು ತಲುಪಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯೂ ಇವರ ಹೆಸರಲ್ಲೇ ಇದೆ. ಕೊಹ್ಲಿ ಈವರೆಗೆ ಒಟ್ಟು 9 ಶತಕಗಳನ್ನು ಬಾರಿಸಿದ್ದಾರೆ. 2016ರ ಒಂದೇ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 973 ರನ್ ಹಾಗೂ 4 ಶತಕಗಳನ್ನು ಸಿಡಿಸಿದ್ದರು. ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಈ ದಾಖಲೆಯನ್ನು ಇಂದಿಗೂ ಜಗತ್ತಿನ ಯಾವುದೇ ಬ್ಯಾಟರ್‌ಗೆ ಮುರಿಯಲು ಸಾಧ್ಯವಾಗಿಲ್ಲ. ಅಷ್ಟೇ ಯಾಕೆ ಸಂಭಾವನೆ ಅಂತಾ ಬಂದ್ರೂ ಅಲ್ಲಿ ವಿರಾಟ್​ಗೇ ಫಸ್ಟ್ ಪ್ಲೇಸ್. ಸೋ ಐಪಿಎಲ್ ನಲ್ಲಿ ಅತೀ ಹೆಚ್ಚು ಹಣ ಗಳಿಸಿರೋ ಟಾಪ್ 10 ಪ್ಲೇಯರ್ಸ್ ಯಾರೆಲ್ಲಾ ಅನ್ನೋದನ್ನ ನೋಡ್ತಾ ಹೋಗೋಣ.

ಗಳಿಕೆಯಲ್ಲೂ ಕೊಹ್ಲಿ ಫಸ್ಟ್!

ಆಟಗಾರ                         ತಂಡ                           ಒಟ್ಟಾರೆ ಗಳಿಕೆ

ವಿರಾಟ್ ಕೊಹ್ಲಿ                   ಆರ್ ಸಿಬಿ                      ₹230.2 ಕೋಟಿ

ರೋಹಿತ್ ಶರ್ಮಾ                ಎಂಐ                          ₹227.2 ಕೋಟಿ

ಎಂಎಸ್ ಧೋನಿ                  ಸಿಎಸ್ ಕೆ                       ₹200.3 ಕೋಟಿ

ಜಸ್ಪ್ರೀತ್ ಬುಮ್ರಾ                ಎಂಐ                            ₹165.7 ಕೋಟಿ

ಸೂರ್ಯಕುಮಾರ್ ಯಾದವ್   ಎಂಐ                             ₹162.8 ಕೋಟಿ

ಹಾರ್ದಿಕ್ ಪಾಂಡ್ಯ               ಎಂಐ                               ₹162.6 ಕೋಟಿ

ಕೆಎಲ್ ರಾಹುಲ್                 ಡಿಸಿ                                ₹148.2 ಕೋಟಿ

ರವೀಂದ್ರ ಜಡೇಜಾ              ಆರ್ ಆರ್                           ₹143 ಕೋಟಿ

ರವಿಚಂದ್ರನ್ ಅಶ್ವಿನ್            ನಿವೃತ್ತಿ                                ₹137.8 ಕೋಟಿ

ಸುನಿಲ್ ನರೈನ್                 ಕೆಕೆಆರ್                              ₹113.25 ಕೋಟಿ

ಸೋ ಇಲ್ಲಿ ಈ ಟಾಪ್-10 ಪೈಕಿ ಐಪಿಎಲ್​ನ ಐಕಾನಿಕ್ ಪ್ಲೇಯರ್​ಗಳಾಗಿರೋ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​​ಗಳಾದ ಕೊಹ್ಲಿ, ರೋಹಿತ್ ಹಾಗೇ ಧೋನಿ 200+ ಕೋಟಿ ಸಂಭಾವನೆಯನ್ನ ಐಪಿಎಲ್​ನಲ್ಲೇ ಸಾಧಿಸಿದ್ದಾರೆ. ಌಂಡ್ ಈ ಟಾಪ್-10ನಲ್ಲಿ ಸುನಿಲ್ ನರೈನ್ ಮಾತ್ರವೇ ವಿದೇಶಿ ಆಟಗಾರನಿದ್ದಾರೆ. ಇನ್ನು ವುಮೆನ್ಸ್ ಪ್ರೀಮಿಯರ್ ಲೀಗ್ ಬಗ್ಗೆ ಹೇಳೋದಾದ್ರೆ ಇಲ್ಲೂ ಕೂಡ ನಮ್ಮ ಆರ್​ಸಿಬಿಯ ನಾಯಕಿ ಸ್ಮೃತಿ ಮಂದಾನ ಅವ್ರೇ ಟಾಪ್​ನಲ್ಲಿದ್ದಾರೆ. 2023 ರಿಂದ 2026ರ ವರೆಗೆ ಅತಿ ಹೆಚ್ಚು ಸಂಪಾದನೆ ಮಾಡಿದ ಆಟಗಾರ್ತಿಯಾಗಿದ್ದಾರೆ. 2023ರ ಉದ್ಘಾಟನಾ ಹರಾಜಿನಲ್ಲಿ ಮಂದಾನರನ್ನು ₹3.40 ಕೋಟಿಗೆ RCB ಖರೀದಿಸಿತ್ತು. ಇತ್ತೀಚಿನ ಸೀಸನ್‌ಗೆ ₹3.50 ಕೋಟಿಗೆ ತಲುಪಿದೆ. ಒಟ್ಟಾರೆ ₹13.90 ಕೋಟಿ ಐಪಿಎಲ್​ನಿಂದ ಗಳಿಸಿದ್ದಾರೆ. ಹಾಗೇ ಆಸ್ಟ್ರೇಲಿಯಾದ ಆಶ್ಲೀ ಗಾರ್ಡ್ನರ್, ಇಂಗ್ಲೆಂಡ್​ನ ನ್ಯಾಟ್ ಸಿವರ್-ಬ್ರಂಟ್ ತಲಾ 13.40 ಕೋಟಿ ಡಬ್ಲ್ಯೂಪಿಎಲ್​ನಲ್ಲಿ ಒಟ್ಟು ಸಂಭಾವನೆ ಮೂಲಕ ಎರಡು ಮೂರನೇ ಸ್ಥಾನದಲ್ಲಿದ್ದಾರೆ. ಒಟ್ನಲ್ಲಿ ಆರ್​ಸಿಬಿ ಫ್ಯಾಂಚೈಸಿ ಮೋಸ್ಟ್ ವ್ಯಾಲ್ಯೂಯೇಬಲ್ ಟೀಂ ಅಷ್ಟೇ ಅಲ್ಲ ಹೈಯೆಸ್ಟ್ ಅರ್ನಿಂಗ್ ಪ್ಲೇಯರ್ಸ್ ಲಿಸ್ಟ್​ನಲ್ಲೂ ಟಾಪ್​ನಲ್ಲೇ ಇದೆ.

Kishor KV

Leave a Reply

Your email address will not be published. Required fields are marked *